ಮನೆ ಅಪರಾಧ ಡಿ.ಜೆ.ಹಳ್ಳಿ ಗಲಭೆ, ಪ್ರವೀಣ್ ಹತ್ಯೆ ಪ್ರಕರಣ: ಬೆಂಗಳೂರಿನಲ್ಲಿ ಎನ್’ಐಎ ಶೋಧ

ಡಿ.ಜೆ.ಹಳ್ಳಿ ಗಲಭೆ, ಪ್ರವೀಣ್ ಹತ್ಯೆ ಪ್ರಕರಣ: ಬೆಂಗಳೂರಿನಲ್ಲಿ ಎನ್’ಐಎ ಶೋಧ

0

ಬೆಂಗಳೂರು(Bengaluru): ಡಿ.ಜೆ.ಹಳ್ಳಿ ಗಲಭೆ ಹಾಗೂ ಪ್ರವೀಣ್ ನೆಟ್ಟಾರು ಕೊಲೆ ಬಗ್ಗೆ ತನಿಖೆ ಮಡೆಸುತ್ತಿರುವ ಎನ್ಐಎ ಅಧಿಕಾರಿಗಳು, ಬೆಂಗಳೂರಿನ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲಾಟ್‌ ಒಂದರಲ್ಲಿ ಗುರುವಾರ ಬೆಳಿಗ್ಗೆ ಶೋಧ ನಡೆಸಿದ್ದಾರೆ.

ಸ್ಥಳೀಯ ಪೊಲೀಸರ ಜೊತೆ ರಿಚ್ಮಂಡ್ ಟೌನ್‌’ನಲ್ಲಿರುವ ಫ್ಲಾಟ್‌’ಗೆ ಹೋಗಿದ್ದ ಎನ್‌ಐಎ ತಂಡ, ಎರಡು ಕಡೆ ಶೋಧ ನಡೆಸಿ, ವಾಪಸು ತೆರಳಿದೆ.

ಸದ್ಯ ಫ್ಲ್ಯಾಟ್ ಬಳಿ ಪೊಲೀಸರ ಭದ್ರತೆ ಇದ್ದು, ಈ ಫ್ಲ್ಯಾಟ್ ಯಾರಿಗೆ ಸೇರಿದ್ದು ಎಂಬ ಮಾಹಿತಿ ಲಭ್ಯವಾಗಿಲ್ಲ.