ಮನೆ ಸಾಹಿತ್ಯ ದಸರಾ ಸಾಂಸ್ಕೃತಿಕ ಕಾರ್ಯಕ್ರಮ: ಅರಮನೆ ಆವರಣದಲ್ಲಿ ಭರದ ಸಿದ್ದತೆ

ದಸರಾ ಸಾಂಸ್ಕೃತಿಕ ಕಾರ್ಯಕ್ರಮ: ಅರಮನೆ ಆವರಣದಲ್ಲಿ ಭರದ ಸಿದ್ದತೆ

0

ಮೈಸೂರು(Mysuru): ದಸರಾ ಕಾರ್ಯಕ್ರಮಗಳಲ್ಲಿ ಜನಮನ್ನಣೆ ಗಳಿಸಿದ ಅರಮನೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆ ಸಿದ್ದಪಡಿಸುವ ಕಾರ್ಯ ಭರದಿಂದ ಸಾಗಿದ್ದು, ಅರಮನೆ ಎದುರು ವಿಶಾಲವಾದ ವೇದಿಕೆ ನಿರ್ಮಿಸಲು ಕಾರ್ಮಿಕರು ಕೆಲಸ ಆರಂಭಿಸಿದ್ದಾರೆ.
೧೦*೨೦ ಅಡಿ ಅಗಲದ ವೇದಿಕೆ ನಿರ್ಮಾಣ ಮಾಡಲಿದ್ದು, ದಸರಾ ಮಹೋತ್ಸವದ ಬ್ಯಾಕ್‌ಡ್ರಾಪ್ ಹೊಂದಿರಲಿದೆ. ಪರ್ಯಾಯವಾಗಿ ಮಳೆ ಬಂದರೆ ಕಾರ್ಯಕ್ರಮ ನಡೆಸಿ ಕೊಡಲು ಅನುಕೂಲವಾಗುವಂತಹ ಮತ್ತೊಂದು ವಾಟರ್ ಪ್ರೂಫ್ ವೇದಿಕೆ ನಿರ್ಮಾಣ ಮಾಡಲಾಗುತ್ತದೆ.

ವಿವಿಐಪಿ, ವಿಐಪಿಗಳು, ಅಧಿಕಾರಿಗಳು, ಪ್ರಾಯೋಜಕತ್ವ ಹೊಂದಿ ದವರಿಗೆ ಪ್ರತ್ಯೇಕ ಗ್ಯಾಲರಿ ನಿರ್ಮಾಣ ಮಾಡಲಾಗಿದೆ. ಎರಡರಿಂದ ಮೂರು ಸಾವಿರ ಮಂದಿಯಷ್ಟು ಕುಳಿತು ಕಾರ್ಯಕ್ರಮ ವೀಕ್ಷಿಸಲು ಆಸನದ ವ್ಯವಸ್ಥೆ ಮಾಡಲಾಗುತ್ತದೆ.
ವೇದಿಕೆ ನಿರ್ಮಾಣದ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಬೇಕಾದ ಎಲ್ಲಾ ಮೆಟಿರಿಯಲ್‌ಗಳನ್ನು ಲಾರಿಯಲ್ಲಿ ತಂದಿಳಿಸಿದ್ದಾರೆ. ಗಣ್ಯರು ಕೂರಲು ಹೊಸ ಆಸನಗಳನ್ನು ಶೇಖರಿಸಿಡಲಾಗಿದೆ. ಮತ್ತೊಂದು ಬದಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗುತ್ತದೆ. ನಿಗದಿತ ಗ್ಯಾಲರಿಗೆ ಹೋಗುವಂತೆ ಮಾಡಬೇಕಿರುವ ಕಾರಣ ಪ್ರವೇಶ ದ್ವಾರದಲ್ಲೇ ಮೂರು ಸಾಲುಗಳನ್ನು ನಿರ್ಮಾಣ ಮಾಡಲಿದ್ದು, ಇದರಿಂದಾಗಿ ಗಣ್ಯರ ಸಾಲಿನಲ್ಲಿ ಸಾರ್ವಜನಿಕರು ಕೂರುವುದನ್ನು ತಡೆಯಲು ಸಾಧ್ಯವಾಗಲಿದೆ.

ಹಿಂದಿನ ಲೇಖನಕಾಂಗ್ರೆಸ್ ವಿರುದ್ಧ ಪೋಸ್ಟರ್ ಮಾಡಿದ್ದವರ ಬಂಧನ ಏಕಿಲ್ಲ ? : ಸಿದ್ದರಾಮಯ್ಯ
ಮುಂದಿನ ಲೇಖನಡಿ.ಜೆ.ಹಳ್ಳಿ ಗಲಭೆ, ಪ್ರವೀಣ್ ಹತ್ಯೆ ಪ್ರಕರಣ: ಬೆಂಗಳೂರಿನಲ್ಲಿ ಎನ್’ಐಎ ಶೋಧ