ಬೆಂಗಳೂರು : ಸದನದಲ್ಲಿ ಡಿಕೆ ಶಿವಕುಮಾರ್ ಆರ್‌ಎಸ್‌ಎಸ್ ಗೀತೆ ಹಾಡಿದ್ದು ತಪ್ಪು. ಆದರೆ, ಅವರು ಕ್ಷಮೆ ಕೇಳಿರುವುದರಿಂದ ಎಲ್ಲವೂ ಮುಗಿದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ ಪರ ಬ್ಯಾಟಿಂಗ್ ಬೀಸಿದ್ದಾರೆ.
ಮಾತನಾಡಿದ ಅವರು, ಡಿಕೆ ಶಿವಕುಮಾರ್ ಹಾಗೆ ಹೇಳಬಾರದಿತ್ತು. ಆರ್‌ಎಸ್‌ಎಸ್ ಗೀತೆ ಹೇಳಿದೆ ಮೇಲೆ ಅವರು ಕ್ಷಮೆ ಕೇಳಿದ್ದಾರೆ. ಅಲ್ಲಿಗೆ ಎಲ್ಲವೂ ಮುಗೀತು. ಕ್ಷಮೆ ಕೇಳಿದ ಮೇಲೆ ಮುಗೀತು. ಪದೇ ಪದೇ ಅದನ್ನು ಎತ್ತಿ ಹಿಡಿಯೋದು ಬೇಡ. ಕ್ಲೋಸ್ ಆದ ಕೇಸ್ ಓಪನ್ ಮಾಡೋಕೆ ನಾನು ಹೋಗಲ್ಲ. ಮುಂದೆ ಯಾರೂ ಹೀಗೆ ಮಾಡಬಾರದು ಅಂತ ಎಚ್ಚರಿಕೆ ಕೊಟ್ಟರು.
ಧರ್ಮಸ್ಥಳ ಕೇಸ್ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದೆಲ್ಲಾ ಕ್ಲೋಸ್ ಆಗಿದೆ. ಮತ್ತೆ ಯಾಕೆ ಓಪನ್ ಮಾಡ್ತೀರಾ ಎಂದರು. ಇದೇ ವೇಳೆ, ರಾಜ್ಯದ ಜನತೆಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳನ್ನು ಖರ್ಗೆ ತಿಳಿಸಿದರು. ಎಲ್ಲರಿಗೂ ಒಳ್ಳೆಯದಾಗಲಿ, ರಾಜ್ಯ ಸುರಕ್ಷಿತವಾಗಿರಲಿ ಎಂದು ಆಶಿಸಿದರು ಎಂದು ಹೇಳಲಾಗಿದೆ.














