ಮನೆ ಅಪರಾಧ ರಸ್ತೆ ವಿಭಜಕದ ಪಕ್ಕದಲ್ಲಿ ನಿದ್ರಿಸುತ್ತಿದ್ದವರ ಮೇಲೆ ಹರಿದ ಟ್ರಕ್: ನಾಲ್ವರ ಸಾವು

ರಸ್ತೆ ವಿಭಜಕದ ಪಕ್ಕದಲ್ಲಿ ನಿದ್ರಿಸುತ್ತಿದ್ದವರ ಮೇಲೆ ಹರಿದ ಟ್ರಕ್: ನಾಲ್ವರ ಸಾವು

0

ನವದೆಹಲಿ(Newdelhi): ರಸ್ತೆ ವಿಭಜಕದ ಪಕ್ಕದಲ್ಲಿ ನಿದ್ರಿಸುತ್ತಿದ್ದ ಜನರ ಮೇಲೆ ಟ್ರಕ್ ಹರಿದು ನಾಲ್ವರು ಸಾವನ್ನಪ್ಪಿರುವ ಘಟನೆ ನಗರದ ಸೀಮಾಪುರಿಯ ಡಿಟಿಸಿ ಡಿಪೋ ಪ್ರದೇಶದಲ್ಲಿ ನಡೆದಿದೆ.

ಕಳೆದ ಮಧ್ಯರಾತ್ರಿ 1:51ರ ವೇಳೆಗೆ ಅವಘಡ ನಡೆದಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು 52 ವರ್ಷದ ಕರೀಂ, ಚೋಟ್ಟೆ ಖಾನ್ ​(25), ಶಾ ಆಲಂ (38), ರಾಹುಲ್ ​(45) ಎಂದು ಗುರುತಿಸಲಾಗಿದೆ.

ಗಾಯಗೊಂಡಿರುವ ಮನೀಶ್​, ಪ್ರದೀಪ್​ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಟ್ರಕ್ ಸಮೇತ ಚಾಲಕ​ ಪರಾರಿಯಾಗಿದ್ದು, ಅಪಘಾತಕ್ಕೆ ಕಾರಣವಾಗಿರುವ ಟ್ರಕ್ ಚಾಲಕನ​​​ ಪತ್ತೆಗೆ ಪೊಲೀಸರು ತಂಡಗಳನ್ನು ರಚಿಸಿದ್ದು ಶೋಧ ನಡೆಯುತ್ತಿದೆ.

ಹಿಂದಿನ ಲೇಖನಪೇ ಸಿಎಂ ಕ್ಯೂಆರ್ ಕೋಡ್ ಸಹಿತ ಭಿತ್ತಿಪತ್ರ: ಕಾಂಗ್ರೆಸ್ ಅಭಿಯಾನ
ಮುಂದಿನ ಲೇಖನ43 ಸಾವಿರ ಪೌರ ಕಾರ್ಮಿಕರು ಖಾಯಂ ನೇಮಕಕ್ಕೆ ಕ್ರಮ: ಸಿಎಂ ಬೊಮ್ಮಾಯಿ