ಮನೆ ಆರೋಗ್ಯ ಮೂಲಂಗಿಯನ್ನು ಈ ತರಕಾರಿಗಳೊಂದಿಗೆ ಸೇವಿಸಬೇಡಿ

ಮೂಲಂಗಿಯನ್ನು ಈ ತರಕಾರಿಗಳೊಂದಿಗೆ ಸೇವಿಸಬೇಡಿ

0

ಮೂಲಂಗಿ ಆರೋಗ್ಯಕ್ಕೆ ಒಳ್ಳೆಯದು. ಮೂಲಂಗಿಯಲ್ಲಿ ನೀರಿನಾಂಶ ಹೆಚ್ಚಿರುತ್ತದೆ. ಮೂಲಂಗಿಯನ್ನು ಸಲಾಡ್ ರೂಪದಲ್ಲಿಯೂ ತಿನ್ನಬಹುದು. ಮೂಲಂಗಿ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಶೀತ ಮತ್ತು ಕೆಮ್ಮಿನಂತಹ ಕಾಯಿಲೆಗಳನ್ನು ದೂರವಿಡುತ್ತದೆ. ಹೃದಯ ಸಂಬಂಧಿ ಕಾಯಿಲೆಗೆ ಇದು ಒಳ್ಳೆಯದು. ಮೂಲಂಗಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಸಹ ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ.

Join Our Whatsapp Group

ಮೂಲಂಗಿಯನ್ನು ಎಂದಿಗೂ ಖಾಲಿ ಹೊಟ್ಟೆ ಯಲ್ಲಿ ತಿನ್ನಬಾರದು. ರಾತ್ರಿಯ ಊಟದಲ್ಲಿ ಕೂಡ ಮೂಲಂಗಿಯನ್ನು ಸೇವಿಸಬಾರದು. ಮೂಲಂಗಿಯನ್ನು ಬೆಳಗಿನ ಉಪಾಹಾರದ ನಂತರ ಅಥವಾ ಊಟದ ಮೊದಲು ತಿನ್ನಬೇಕು. 

ಮೂಲಂಗಿಯನ್ನು ನೀವು ಹಾಗಲಕಾಯಿ ಜೊತೆ ಸೇವನೆ ಮಾಡಬಾರದು. ಇದ್ರಿಂದ ಆರೋಗ್ಯ ಕೆಡುತ್ತದೆ. ಈ ಎರಡೂ ಆಹಾರಗಳಲ್ಲಿ ಕಂಡುಬರುವ ಅಂಶಗಳು ಹೊಟ್ಟೆಯಲ್ಲಿ ಆಮ್ಲವನ್ನು ಹೆಚ್ಚಿಸುತ್ತವೆ. ಒಟ್ಟಿಗೆ ತಿಂದ್ರೆ ಉಸಿರಾಟ ಸಮಸ್ಯೆ ಕೂಡ ಕಾಡುತ್ತದೆ.

ಮೂಲಂಗಿ ಹಾಗೂ ಸೌತೆಕಾಯಿ ಎರಡೂ ಆರೋಗ್ಯಕ್ಕೆ ಬೆಸ್ಟ್. ಹಾಗಂತ ಎರಡನ್ನೂ ಒಟ್ಟಿಗೆ ತಿಂದ್ರೆ ಆರೋಗ್ಯ ಹದಗೆಡುತ್ತದೆ. ಎರಡರಲ್ಲೂ ಹೆಚ್ಚಿನ ಪ್ರಮಾಣದ ನೀರಿರುವ ಕಾರಣ ಹೊಟ್ಟೆ ಉಬ್ಬರ ಉಂಟಾಗುತ್ತದೆ. ಸೌತೆಕಾಯಿಯಲ್ಲಿರುವ ಆಸ್ಕೋರ್ಬೇಟ್ ಎಂಬ ಅಂಶ ವಿಟಮಿನ್ ಸಿ ಅನ್ನು ಹೀರಿಕೊಳ್ಳುತ್ತದೆ. ಇದನ್ನು ಮೂಲಂಗಿಯೊಂದಿಗೆ ತಿಂದರೆ ಹೊಟ್ಟೆಯಲ್ಲಿ ಅಜೀರ್ಣ, ವಾಯು, ಆಮ್ಲೀಯತೆ ಕಾಡುತ್ತದೆ.

ಮೂಲಂಗಿ ಮತ್ತು ಹಾಲನ್ನು ಎಂದಿಗೂ ಒಟ್ಟಿಗೆ ತಿನ್ನಬಾರದು. ಮೂಲಂಗಿ ಮತ್ತು ಡೈರಿ ಉತ್ಪನ್ನ ಒಟ್ಟಿಗೆ ಒಳಗೆ ಹೋದ್ರೆ ಹೊಟ್ಟೆಯಲ್ಲಿ ತೊಂದರೆ ಕಾಡುತ್ತದೆ. ಅಜೀರ್ಣ, ಗ್ಯಾಸ್, ಹೊಟ್ಟೆ ಉಬ್ಬುವಿಕೆ, ವಾಂತಿ ಮತ್ತು ವಾಕರಿಕೆ ಕಾಣಿಸಿಕೊಳ್ಳುತ್ತದೆ.

ಮೂಲಂಗಿ ಜೊತೆ ನೀವು ಯಾವಾಗ್ಲೂ ಕಿತ್ತಳೆ ಹಣ್ಣನ್ನು ಸೇವನೆ ಮಾಡಬಾರದು. ನಿಮಗೆ ಇವೆರಡರ ಕಾಂಬಿನೇಷನ್ ಒಳ್ಳೆಯದೆನ್ನಿಸುತ್ತದೆ. ಆದ್ರೆ ಇದರಿಂದ ಗ್ಯಾಸ್, ಅಜೀರ್ಣ, ಅಸಿಡಿಟಿ ಮತ್ತು ಮಲಬದ್ಧತೆ ಸಮಸ್ಯೆ ಉದ್ಭವಿಸುತ್ತದೆ.

ದೇಹದಲ್ಲಿ ಹೆಚ್ಚು ನೋವು ಇದ್ದವರು  ಮೂಲಂಗಿಯನ್ನು ಸೇವಿಸಬಾರದು. ದೈಹಿಕ ಚಟುವಟಿಕೆಯನ್ನು ಮಾಡದ ಜನರು ಕೂಡ ಮೂಲಂಗಿಯನ್ನು ತಿನ್ನಬಾರದು. ಇಂಥವರು ಮೂಲಂಗಿಯನ್ನು ತಿನ್ನುವುದರಿಂದ ಹೊಟ್ಟೆ ನೋವು, ಗ್ಯಾಸ್ ಸಮಸ್ಯೆ ಹೆಚ್ಚಾಗುತ್ತದೆ.