ಮನೆ ಯೋಗಾಸನ ದೇಹದ ತೂಕ ಇಳಿಸಲು ಈ ಯೋಗಾಸನ ಮಾಡಿ

ದೇಹದ ತೂಕ ಇಳಿಸಲು ಈ ಯೋಗಾಸನ ಮಾಡಿ

0

ಯೋಗ ದೇಹದ ಆರೋಗ್ಯ ಕಾಪಾಡುವುದು ಮಾತ್ರವಲ್ಲದೆ, ದೇಹವನ್ನು ಕಾಡುವಂತಹ ಹಲವಾರು ರೀತಿಯ ಅನಾರೋಗ್ಯವನ್ನು ನಿವಾರಣೆ ಮಾಡುವುದು ಹಾಗೂ ಬರದಂತೆ ತಡೆಯುವುದು.

ಯೋಗಾಸನ ಮಾಡಿದರೆ ಅದರಿಂದ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬಹುದು. ಇದರಿಂದ ಯೋಗಾಸನವು ತೂಕ ಇಳಿಸುವಲ್ಲಿಯೂ ತುಂಬಾ ಸಹಕಾರಿ ಆಗಿದೆ.

ನಿಯಮಿತ ಯೋಗಾಸನಗಳನ್ನು ಮಾಡಿದ್ರೆ ತೂಕ ಇಳಿಸಬಹುದು. ಇಂದಿನ ದಿನಗಳಲ್ಲಿ ಬೊಜ್ಜು ದೇಹದ ಸಮಸ್ಯೆಯಿಂದ ಮತ್ತು ದೇಹದಲ್ಲಿ ನಿಗದಿಗಿಂತಲೂ ಹೆಚ್ಚಿನ ತೂಕ ಹೊಂದಿರುವ ಹಲವಾರು ಮಂದಿ ಇರುವರು. ಇವರು ತೂಕ ಇಳಿಸಲು ಪ್ರಯತ್ನಿಸುತ್ತಿದ್ದರೂ ಯಾವುದೇ ಪ್ರಯೋಜನವಾಗದು.

ಆದರೆ ಯೋಗಾಸನವನ್ನು ನಿಯಮಿತವಾಗಿ ಮಾಡಿದರೆ ಅದರಿಂದ ದೇಹದಲ್ಲಿನ ಬೊಜ್ಜು ಕರಗುವುದು ಹಾಗೂ ಆರೋಗ್ಯಕರವಾಗಿ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು. ದೇಹದ ತೂಕ ಇಳಿಸಲೆಂದೇ ಕೆಲವೊಂದು ಯೋಗಾಸನಗಳು ಇವೆ.

ಶವಾಸನ

• ಹೆಸರೇ ಹೇಳಿದಂತೆ ಇದು ಶವದಂತೆ ಮಲಗುವುದು.

• ದೇಹಕ್ಕೆ ಆರಾಮ ನೀಡುವಂತೆ ಗಮನ ಹರಿಸಿ.

• ಮೂಗಿನಿಂದ ಉಚ್ಛಾಸ ಮಾಡಿ ಮತ್ತು ಬಾಯಿಯಿಂದ ನಿಚ್ಛಾಸ ಮಾಡಿ.

• ಎಲ್ಲಾ ಆಸನಗಳ ಬಳಿಕ ಈ ಆಸನ ಮಾಡಿದರೆ ದೇಹಕ್ಕೆ ಆರಾಮ ಸಿಗುವುದು.

ಫಲಕಾಸನ

• ಹೊಟ್ಟೆಯ ಮೇಲೆ ಹಾಗೆ ಮಲಗಿ.

• ಈಗ ನಿಧಾನವಾಗಿ ದೇಹವನ್ನು ಕೈಗಳ ನೆರವಿನಿಂದ ಮೇಲಕ್ಕೆತ್ತಿ.

• ಪಾದದಿಂದ ಹಿಡಿದು ತಲೆಯ ತನಕ ದೇಹವು ನೇರವಾಗಿ ಇರಬೇಕು.

• ಮೊಣಕೈಗಳು ನೆಲದ ಮೇಲಿರಲಿ ಮತ್ತು ಭುಜವು ಮೇಲಿನ ಭಾಗದಲ್ಲಿರಲಿ.

• ಈ ಭಂಗಿ ಪುಶ್ ಅಪ್ ನಂತೆ ಇರುವುದು.

• ಹೊಟ್ಟೆಯು ಕಾರ್ಯನಿರ್ವಹಿಸುವಂತೆ ಕೆಲವು ಸೆಕೆಂಡು ಇದೇ ಭಂಗಿಯಲ್ಲಿ ಇರಿ ಮತ್ತು ನಿಧಾನವಾಗಿ ಆರಾಮ ಭಂಗಿಗೆ ಬನ್ನಿ.

ಬಾಲಾಸನ

• ಬಾಲಾಸನವು ತುಂಬಾ ಸರಳವಾದ ಆಸನವಾಗಿದ್ದು, ಇದನ್ನು ನೀವು ಬೇರೆ ಆಸನಗಳ ಮಧ್ಯೆ ಮಾಡಬಹುದು.

• ವಜ್ರಾಸನ ಹಾಕಿಕೊಂಡು ನೆಲದ ಮೇಲೆ ಕುಳಿತುಕೊಳ್ಳಿ.

• ಈಗ ತಲೆಯನ್ನು ನೆಲಕ್ಕೆ ತಾಗುವಂತೆ ಮುಂದಕ್ಕೆ ತನ್ನಿ, ಹೊಟ್ಟೆಯು ತೊಡೆಗಳಿಗೆ ತಾಗುತ್ತಿರಲಿ.

• ಆರಂಭದಲ್ಲಿ ಹಣೆಯು ನೆಲಕ್ಕೆ ತಾಗದೆ ಇರಬಹುದು.

• ಆದರೆ ಇದಕ್ಕೆ ಚಿಂತೆ ಮಾಡಬೇಡಿ.

• ಕೈಗಳನ್ನು ಹಾಗೆ ಮುಂದಕ್ಕೆ ಎಳೆಯಿರಿ ಮತ್ತು ಅಂಗೈಯು ನೆಲವನ್ನು ಮುಟ್ಟಲಿ.

• 10-20 ಸೆಕೆಂಡು ಕಾಲ ಹಾಗೆ ಇದೇ ಭಂಗಿಯಲ್ಲಿ ಇರಿ.

ಸೇತುಬಂಧ ಸರ್ವಾಂಗಾಸನ

• ಬೆನ್ನಿನ ಮೇಲೆ ಹಾಗೆ ಮಲಗಿ, ಮೊಣಕಾಲನ್ನು ಮಡಚಿ ಮತ್ತು ಪಾದಗಳು ನೆಲದ ಮೇಲಿರಲಿ.

• ಈಗ ನೀವು ಸೊಂಟ ಮತ್ತು ಬೆನ್ನಿನ ಕೆಳಭಾಗವನ್ನು ಮೇಲಕ್ಕೆತ್ತಿ.

• ಕೈಗಳನ್ನು ಸೊಂಟದ ಕೆಳಗೆ ತಂದು ಬೆರಳುಗಳನ್ನು ಹಿಡಿಯಿರಿ.

• ಈಗ ನೀವು ನಿಧಾನವಾಗಿ ಬೆರಳುಗಳನ್ನು ಬಿಟ್ಟು ಮೊದಲು ಸ್ಥಾನಕ್ಕೆ ಬನ್ನಿ ಮತ್ತು ಆರಾಮ ಮಾಡಿ.

• ಹಾಗೆ ಮತ್ತೊಮ್ಮೆ ಪ್ರಯತ್ನಿಸಿ.

ಧನುರಾಸನ

• ಈ ಆಸನ ಮಾಡಲು ಹೊಟ್ಟೆಯ ಮೇಲೆ ಮಲಗಿ.

• ಈಗ ನಿಧಾನವಾಗಿ ದೇಹದ ಮೇಲಿನ ಭಾಗವನ್ನು ಮೇಲಕ್ಕೆತ್ತಿ ಮತ್ತು ಇದೇ ವೇಳೆ ಕಾಲುಗಳನ್ನು ಕೂಡ ಮೇಲಕ್ಕೆತ್ತಿ.

• ಈಗ ಕೈಗಳಿಂದ ಪಾದಗಳನ್ನು ಹಿಡಿದುಕೊಳ್ಳಿ ಮತ್ತು ಈ ಭಂಗಿಯಲ್ಲಿ ನಿಮಗೆ ಹಿತಕರವೆನಿಸುವಷ್ಟು ಸಮಯವಿರಿ.

ಬೋಟ್ ಭಂಗಿ

• ಈ ಭಂಗಿಯು ಹೆಸರು ಹೇಳುವಂತೆ ಭೋಟ್ ನಂತೆ ಇರುವುದು.

• ಇದನ್ನು ಮಾಡಲು ನೆಲದ ಮೇಲೆ ಮಲಗಿ ಮತ್ತು ಕೈಗಳು ದೇಹದ ಬದಿಯಲ್ಲಿ ಇರಲಿ.

• ಈಗ ನಿಧಾನವಾಗಿ ದೇಹದ ಮೇಲಿನ ಭಾಗ ಮತ್ತು ಕಾಲುಗಳನ್ನು ಮೇಲಕ್ಕೆತ್ತಿ.

• ಈಗ ದೇಹವು ವಿ ಆಕಾರಕ್ಕೆ ಬರಬೇಕು ಮತ್ತು ಕೈಗಳನ್ನು ಹಾಗೆ ನೇರವಾಗಿಡಿ.

• ಈ ಭಂಗಿಯಲ್ಲಿ 10-20 ಸೆಕೆಂಡು ಕಾಲ ಇರಬೇಕು.

ಕುರ್ಚಿ ಭಂಗಿ

• ಪಾದಗಳು ಒಂದಕ್ಕೊಂದು ತಾಗಿಕೊಂಡು ಇರುವಂತೆ ದೇಹದ ಎರಡು ಭಾಗಕ್ಕೆ ಕೈಗಳು ಅಂಟಿಕೊಂಡಿರುವಂತೆ ನೇರವಾಗಿ ನಿಲ್ಲಿ.

• ಈಗ ಕೈಗಳನ್ನು ತಲೆಯ ಮೇಲೆ ಎತ್ತಿ ಮತ್ತು ಅಂಗೈಯು ಪರಸ್ಪರ ಒಂದಕ್ಕೊಂದು ಮುಖ ಮಾಡಿಕೊಂಡಿರಲಿ.

• ಈಗ ಮೊಣಕಾಲುಗಳನ್ನು ನಿಧಾನವಾಗಿ ಬಗ್ಗಿಸಿ ಮತ್ತು ಸ್ಕ್ವಾಟ್ ಭಂಗಿಗೆ ಬನ್ನಿ.

• ತೊಡೆಯು ನೆಲಕ್ಕೆ ನೇರವಾಗಿ ಇರಲಿ. ಈ ಭಂಗಿಯಲ್ಲಿ 10-15 ನಿಮಿಷ ಹಾಗೆ ಇರಿ.

ಮೇಲ್ಮುಖ ನಾಯಿ

• ಹೊಟ್ಟೆಯ ಮೇಲೆ ಹಾಗೆ ಮಲಗಿ ಮತ್ತು ಕೈಗಳನ್ನು ಮೇಲಿನ ಭಾಗಕ್ಕೆ ತಂದು ಅಂಗೈಯು ನೆಲಕ್ಕೆ ತಾಗುತ್ತಿರಲಿ.

• ಕೈಗಳನ್ನು ಹಾಗೆ ಹಿಂದಕ್ಕೆ ಭುಜದ ಸಮೀಪಕ್ಕೆ ತನ್ನಿ.

• ದೇಹದ ಮೇಲಿನ ಭಾಗವನ್ನು ಎತ್ತಿ ಮತ್ತು ಮೇಲೆ ನೋಡಿ.

• ಹೊಟ್ಟೆಯ ಕೆಳಗಿನ ಭಾಗ ಮತ್ತು ತೊಡೆಯು ನೆಲದ ಮೇಲಿರಲಿ.

ತ್ರಿಕೋನಾಸನ

• ಈ ಯೋಗಾಸನ ಮಾಡಲು ಕಾಲುಗಳನ್ನು ಸ್ವಲ್ಪ ಅಗಲವಾಗಿಸಿಕೋಂಡು ನೇರವಾಗಿ ನಿಲ್ಲಿ ಮತ್ತು ಕೈಗಳು ನೇರವಾಗಿ ಇರಲಿ.

• ಈಗ ಎಡಕ್ಕೆ ಬಾಗಿ ಮತ್ತು ಎಡದ ಪಾದವನ್ನು ಎಡಕೈಯಿಂದ ಮುಟ್ಟಲು ಪ್ರಯತ್ನಿಸಿ.

• 10-20 ಸೆಕೆಂಡು ಕಾಲ ಈ ಭಂಗಿಯಲ್ಲಿ ಇರಿ ಮತ್ತು ಇದರ ಬಳಿಕ ಇನ್ನೊಂದು ಬದಿಗೆ ಭಾಗಿ.

• ಇದರಿಂದ ಜೀರ್ಣಕ್ರಿಯೆಯು ಉತ್ತಮವಾಗುವುದು ಮತ್ತು ಹೊಟ್ಟೆಯಲ್ಲಿ ಇರುವಂತಹ ಕೊಬ್ಬು ಕರಗುವುದು.

• ಇದರಿಂದ ಕಾಳು ಮತ್ತು ಕೈಯ ಸ್ನಾಯುಗಳಿಗೆ ಬಲ ಬರುವುದು