ಮನೆ ಆರೋಗ್ಯ ದೇಹದಲ್ಲಿನ ರಕ್ತ ಹೀನತೆ ತಡೆಗಟ್ಟಲು ಯಾವ ಆಹಾರ ಸೇವಿಸಬೇಕು ಗೊತ್ತಾ ?

ದೇಹದಲ್ಲಿನ ರಕ್ತ ಹೀನತೆ ತಡೆಗಟ್ಟಲು ಯಾವ ಆಹಾರ ಸೇವಿಸಬೇಕು ಗೊತ್ತಾ ?

0

ರಕ್ತದಲ್ಲಿ ಹಿಮೋಗ್ಲೋಬಿನ್ ಮತ್ತು ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆಯಾದಾಗ ಉಂಟಾಗುವ ಖಾಯಿಲೆಯನ್ನು ರಕ್ತಹೀನತೆ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

Join Our Whatsapp Group

ದೇಹದಲ್ಲಿ ಕಬ್ಬಿಣದ ಕೊರತೆಯಿಂದಾಗಿ ಉಸಿರಾಟದ ತೊಂದರೆಗಳು, ಜೊತೆಗೆ ಆಯಾಸ ಮತ್ತು ತಲೆತಿರುಗುವಿಕೆಯಂತಹ ಸಮಸ್ಯೆಗಳು ಕಾಡಲಾರಂಭಿಸುತ್ತವೆ.

ಈ ಸಂದರ್ಭದಲ್ಲಿ ಯಾವ ಆಹಾರ ಸೇವಿಸಿದರೆ  ಸಮಸ್ಯೆಯನ್ನು ನಿವಾರಿಸಬಹುದು ಎಂಬ ಮಾಹಿತಿ ಈ ಲೇಖನದಲ್ಲಿದೆ.

ಬೀಟ್ರೂಟ್ :

 ರಕ್ತಹೀನತೆಯನ್ನು ನಿವಾರಿಸಲು ಬೀಟ್ರೂಟ್ ಸಹಾಯಕ. ಇದು ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸುವಲ್ಲಿ ಪ್ರಯೋಜನಕಾರಿಯಾಗಿದೆ.

 ಏಕೆಂದರೆ ಇದರಲ್ಲಿ ಕಬ್ಬಿಣ, ತಾಮ್ರ, ರಂಜಕ, ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ 1, ಬಿ 2, ಬಿ 6, ಬಿ 12 ಮತ್ತು ಸಿ ಸಮೃದ್ಧವಾಗಿದೆ.

ನುಗ್ಗೆ ಎಲೆಗಳು :

 ನುಗ್ಗೆ ಎಲೆಗಳಲ್ಲಿ ವಿಟಮಿನ್ ಎ, ಸಿ, ಮೆಗ್ನೀಸಿಯಮ್ ಮತ್ತು ಕಬ್ಬಿಣ ಸಮೃದ್ಧವಾಗಿದೆ. ಇದು ರಕ್ತಹೀನತೆಯನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ.

 ಎಲೆಗಳು ದೇಹಕ್ಕೆ ತಕ್ಷಣದ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ನೀವು ಆಯಾಸದಿಂದ ದೂರವಿರಬಹುದು.

ಡ್ರೈ ಪ್ರೂಟ್ಸ್ :

ಗೋಡಂಬಿ, ಬಾದಾಮಿಯಂತಹ ಪ್ರೂಟ್ಸ್ ಕಬ್ಬಿಣದ ಉತ್ತಮ ಮೂಲಗಳಾಗಿವೆ. ಅವುಗಳಲ್ಲಿರುವ ಕಬ್ಬಿಣ ಸೇರಿದಂತೆ ಅನೇಕ ಪೋಷಕಾಂಶಗಳು ರಕ್ತಹೀನತೆಯನ್ನು ತಡೆಯುತ್ತವೆ.

ಇದಲ್ಲದೆ, ಕ್ಯಾನ್ಸರ್, ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತವೆ. ಅಲ್ಲದೇ ಹೆಚ್ಚಿನ ತೂಕವನ್ನು ತಡೆಯುತ್ತವೆ.

ಎಳ್ಳಿನ ಬೀಜಗಳು :

ರಕ್ತಹೀನತೆಯನ್ನು ನಿವಾರಿಸಲು ಎಳ್ಳಿನ ಬೀಜಗಳು ಸಹ ಸಹಾಯ ಮಾಡುತ್ತವೆ.

ಕಬ್ಬಿಣ, ತಾಮ್ರ, ಸತು, ಸೆಲೆನಿಯಂ, ವಿಟಮಿನ್ ಬಿ 6, ಇ ಮತ್ತು ಫೋಲೇಟ್ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಹಿಂದಿನ ಲೇಖನಮದುವೆಯಲ್ಲಿ ನೃತ್ಯ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಮುಂದಿನ ಲೇಖನಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ: ಮಂಗಳೂರಿನಲ್ಲಿ ಸೆಕ್ಷನ್ 144 ಜಾರಿ