ಮನೆ ಅಪರಾಧ ದೊಡ್ಡಬಳ್ಳಾಪುರ: ಇನ್ನೋವಾ ಕಾರು ಪಲ್ಟಿ: ಭೀಮೇಶ್ವರಬೆಟ್ಟಕ್ಕೆ ಹೋಗುತ್ತಿದ್ದ ಐವರು ಸ್ಥಳದಲ್ಲೇ ಸಾವು

ದೊಡ್ಡಬಳ್ಳಾಪುರ: ಇನ್ನೋವಾ ಕಾರು ಪಲ್ಟಿ: ಭೀಮೇಶ್ವರಬೆಟ್ಟಕ್ಕೆ ಹೋಗುತ್ತಿದ್ದ ಐವರು ಸ್ಥಳದಲ್ಲೇ ಸಾವು

0

ದೊಡ್ಡಬಳ್ಳಾಪುರ: ನಾಯಕರಂಡನಹಳ್ಳಿ ಸಮೀಪ ಗೌರಿಬಿದನೂರು ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಇನ್ನೋವಾ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದೊಡ್ಡಬಳ್ಳಾಪುರದ ಕರೇನಹಳ್ಳಿ ನಿವಾಸಿಗಳಾದ ಡಿ.ಎಂ.ಈಶ್ವರಪ್ಪ, ಪುರುಷೋತ್ತಮ(೭೫), ಕಾಳಪ್ಪ(೬೫), ನಾರಾಯಣಪ್ಪ(೭೦) ಹಾಗೂ ಕಾರು ಚಾಲಕ ಕಾರ್ತಿಕ್ ಮೃತಪಟ್ಟವರು. ಕಾರಿನಲ್ಲಿ ಎಂಟು ಜನರು ದೊಡ್ಡಬಳ್ಳಾಪುರದಿಂದ ಗೌರಿಬಿದನೂರು ಸಮೀಪದ ಮಂಚೇನಹಳ್ಳಿಯ ಭೀಮೇಶ್ವರ ಬೆಟ್ಟಕ್ಕೆ ಹೊರಟಿದ್ದರು.
ಕಾರಿನಲ್ಲಿದ್ದ ಇನ್ನೂ ಮೂವರ ಸ್ಥಿತಿ ಗಂಭೀರವಾಗಿದ್ದು, ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿಯೊಂದನ್ನು ಓವರ್ ಟೇಕ್ ಮಾಡುವ ವೇಳೆ ಎದುರಿನಿಂದ ಕೆಎಸ್‌ಆರ್‌ಟಿಸಿ ಬಸ್ ಬಂದಿದೆ. ಬಸ್ ಹಾಗೂ ಲಾರಿಯನ್ನು ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ ಕಾರು ಪಲ್ಟಿಯಾಗಿದ್ದೇ ಘಟನೆ ಕಾರಣವಾಗಿದೆ.