ಮನೆ ಸ್ಥಳೀಯ ಜಾತಿ ಪ್ರಮಾಣ ಪತ್ರದಲ್ಲಿ ಜಾತಿಯನ್ನೇ ಬದಲಾಯಿಸಿದ ದೊಡ್ಡಕವಲಂದೆ ಕಂದಾಯ ಇಲಾಖೆ ಅಧಿಕಾರಿಗಳು

ಜಾತಿ ಪ್ರಮಾಣ ಪತ್ರದಲ್ಲಿ ಜಾತಿಯನ್ನೇ ಬದಲಾಯಿಸಿದ ದೊಡ್ಡಕವಲಂದೆ ಕಂದಾಯ ಇಲಾಖೆ ಅಧಿಕಾರಿಗಳು

0

ಮೈಸೂರು: ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಗ್ರಾಮದ ನಾಡ ಕಚೇರಿಯ ಕಂದಾಯ ಇಲಾಖೆ ಅಧಿಕಾರಿಗಳು ಎಡವಟ್ಟು ಮಾಡಿದ್ದು, ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿದರೆ, ಅಧಿಕಾರಿಗಳು ಲಿಂಗಾಯಿತ ಪ್ರಮಾಣ ಪತ್ರ ನೀಡಿದ್ದಾರೆ.

ದೊಡ್ಡ ಕವಲಂದೆ ಗ್ರಾಮದ ನಾಡಕಛೇರಿಯಲ್ಲಿ ನಾವು ಕೇಳಿದ್ದೇ ಒಂದು, ಅಧಿಕಾರಿಗಳು ಮಾಡೋದೆ ಒಂದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹರಗನಪುರ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿರುವ ಚಿಕ್ಕಸು ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅಧಿಕಾರಿಗಳು ವೀರಶೈವ ಲಿಂಗಾಯತ ಪ್ರಮಾಣ ಪತ್ರವನ್ನು ನೀಡಿದ್ದಾರೆ.

ಸಾಮಾನ್ಯ ವರ್ಗಕ್ಕೆ ಸೇರಿದ್ದ ಗುರುಪ್ರಸಾದ್ ಎಂಬುವವರು ಜಾತಿ ಮತ್ತು ಆದಾಯ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಸಾಮಾನ್ಯ ವರ್ಗಕ್ಕೆ ಜಾತಿ ಮತ್ತು ಆದಾಯ ಪತ್ರ ಒಟ್ಟಿಗೆ ಕೊಡಬೇಕು. ಆದರೆ ಇಲಾಖೆ ಸಿಬ್ಬಂದಿ ಬೇರೆ ಬೇರೆ ಪತ್ರ ನೀಡಿ ಎಡವಟ್ಟು ಮಾಡಿದ್ದಾರೆ.

ನಾಡ ಕಚೇರಿಯಲ್ಲಿ ಇದನ್ನು ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡುತ್ತಾರೆ ಎಂದು ಅರ್ಜಿದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಉಪ ತಹಶೀಲ್ದಾರ್ ಗೆ ದೂರು ನೀಡಲಾಗಿದ್ದು, ಅವರು ಕಂಪ್ಯೂಟರ್ ಆಪರೇಟರ್ ನ್ನು ಕರೆಸಿ ವಿಷಯ ತಿಳಿಸಿದ್ದಾರೆ. ಆದರೆ ಉಪ ತಹಶೀಲ್ದಾರ್ ಮಾತಿಗೂ ಸಿಬ್ಬಂದಿಗಳು ಮನ್ನಣೆ ನೀಡಿಲ್ಲ. ಮಾತ್ರವಲ್ಲದೇ  ದಾಖಲೆಗಳನ್ನೇ ತಿರುಚುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಇಂಥ ಬೇಜವಬ್ದಾರಿ ಧೋರಣೆಯನ್ನು ಅಧಿಕಾರಿಗಳು ಮುಂದುವರೆಸಿದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅಧಿಕಾರಿಗಳಿಗೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.