ಮನೆ ರಾಷ್ಟ್ರೀಯ ಸೆಕ್ಯೂರಿಟಿ ಗಾರ್ಡ್ ಮೇಲೆ ನಾಯಿ ದಾಳಿ – ಭಯಾನಕ ದೃಶ್ಯ ಸೆರೆ

ಸೆಕ್ಯೂರಿಟಿ ಗಾರ್ಡ್ ಮೇಲೆ ನಾಯಿ ದಾಳಿ – ಭಯಾನಕ ದೃಶ್ಯ ಸೆರೆ

0

ಮುಂಬೈ : ಸೆಕ್ಯೂರಿಟಿ ಗಾರ್ಡ್ ಮೇಲೆ ನಾಯಿಯೊಂದು ಡೆಡ್ಲಿ ಅಟ್ಯಾಕ್ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮುಂಬೈನ ಅಪಾರ್ಟ್ಮೆಂಟ್‌ವೊಂದರ ಬಳಿ ಈ ಘಟನೆ ನಡೆದಿದೆ. ದಾಳಿಗೊಳಗಾದ ಸೆಕ್ಯೂರಿಟಿ ಗಾರ್ಡ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎರಡು ನಾಯಿಗಳು ಅಪಾರ್ಟ್ಮೆಂಟ್ ಮುಂದೆ ಓಡಾಡುತ್ತಿದ್ದವು. ಆರಂಭದಲ್ಲಿ ಸೆಕ್ಯೂರಿಟಿ ಗಾರ್ಡ್ ಅಕ್ಕಪಕ್ಕ ಓಡಾಡಿದಾಗಲೂ ನಾಯಿ ಸುಮ್ಮನಿತ್ತು. ಆದರೆ ಎರಡನೇ ಬಾರಿ ಸೆಕ್ಯೂರಿಟಿ ಗಾರ್ಡ್ ಪಕ್ಕದಲ್ಲಿ ಓಡಾಡುತ್ತಿರುವಾಗ ಏಕಾಏಕಿ ಎಗರಿ ದಾಳಿ ನಡೆಸಿದೆ.

ತೋಳಿಗೆ ಕಚ್ಚಿದ್ದು, ಕೂಡಲೇ ಸೆಕ್ಯೂರಿಟಿ ಗಾರ್ಡ್ ಬಿಡಿಸಿಕೊಂಡಿದ್ದಾರೆ. ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬ ನಾಯಿಯನ್ನು ಕಟ್ಟಿಗೆಯಿಂದ ಹೊಡೆದು ಓಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.