ಮನೆ ಶಿಕ್ಷಣ CBSE 12ನೇ ತರಗತಿ ಫಲಿತಾಂಶ ಪ್ರಕಟ: ಶೇ.87.33 ವಿದ್ಯಾರ್ಥಿಗಳು ತೇರ್ಗಡೆ

CBSE 12ನೇ ತರಗತಿ ಫಲಿತಾಂಶ ಪ್ರಕಟ: ಶೇ.87.33 ವಿದ್ಯಾರ್ಥಿಗಳು ತೇರ್ಗಡೆ

0

ಹೊಸದಿಲ್ಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್ಇ) ಶುಕ್ರವಾರ 12 ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದ್ದು ಶೇಕಡಾ 87.33 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

Join Our Whatsapp Group

ಈ ಬಾರಿ ಟಾಪರ್ಸ್​ ಹೆಸರುಗಳನ್ನು ಶಿಕ್ಷಣ ಮಂಡಳಿ ಬಿಡುಗಡೆ ಮಾಡಿಲ್ಲ, ವಿದ್ಯಾರ್ಥಿಗಳ ನಡುವಿನ ಅನಾರೋಗ್ಯಕರ ಸ್ಪರ್ಧೆಯನ್ನು ತಪ್ಪಿಸಲು ಮಂಡಳಿ ಈ ನಿರ್ಧಾರ ಮಾಡಿದೆ. ಟಾಪರ್ಸ್​ ಲಿಸ್ಟ್​ ನೋಡಿ ತಮ್ಮದು ಕಡಿಮೆ ಬಂದಿದೆ ಎಂದು ಯಾರೂ ಕೂಡ ಬೇಸರಗೊಳ್ಳಬಾರದು, ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎನ್ನುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಹೆಚ್ಚಿನ ಅಂಕಗಳನ್ನು ಗಳಿಸಿದ 0.1 ಪ್ರತಿಶತ ವಿದ್ಯಾರ್ಥಿಗಳಿಗೆ ಮೆರಿಟ್ ಪ್ರಮಾಣಪತ್ರವನ್ನು ನೀಡುತ್ತದೆ.

ಸಿಬಿಎಸ್ಇಯ 10 ನೇ ತರಗತಿ ಬೋರ್ಡ್ ಪರೀಕ್ಷೆಯು ಫೆಬ್ರವರಿ 15ರಿಂದ ಮಾರ್ಚ್ 21 ರವರೆಗೆ ನಡೆದಿದ್ದರೆ, 12 ನೇ ತರಗತಿ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15 ರಿಂದ ಏಪ್ರಿಲ್ 5ರವರೆಗೆ ನಡೆದಿತ್ತು.

ಈ ವರ್ಷದ ಜನವರಿ 2 14 ರ ನಡುವೆ 10 ಮತ್ತು 12 ನೇ ತರಗತಿಗಳಿಗೆ ಸಿಬಿಎಸ್ಇ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿತ್ತು.

ಅತ್ಯುತ್ತಮ ಉತ್ತೀರ್ಣ ಶೇಕಡಾವಾರು ಪ್ರದೇಶ ತಿರುವನಂತಪುರವಾಗಿದ್ದು, ಇಲ್ಲಿ ಶೇಕಡಾ 99,91 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. 78.05 ರಷ್ಟು ಫಲಿತಾಂಶ ಪಡೆದ ಪ್ರಯಾಗ್ ರಾಜ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಫಲಿತಾಂಶವನ್ನು ಅಧಿಕೃತ ವೆಬ್ ಸೈಟ್ ಗಳಾದ  //cbse.nic.in ಮತ್ತು //cbse.gov.in  ನಲ್ಲಿ ಪೋಸ್ಟ್ ಮಾಡಲಾಗಿದೆ. ವಿದ್ಯಾರ್ಥಿಗಳು ಇಲ್ಲಿ ಫಲಿತಾಂಶಗವನ್ನು ನೋಡಬಹುದು.

ಹಿಂದಿನ ಲೇಖನಐಪಿಎಲ್-2023: ಪಾಯಿಂಟ್ ಟೇಬಲ್​’ನಲ್ಲಿ ಮೇಲೇರಿದ ಆರ್​’ಸಿಬಿ
ಮುಂದಿನ ಲೇಖನದೇಹಕ್ಕೆ ಅವಶ್ಯಕವಾದ ಪೊಟ್ಯಾಶಿಯಂ ಯಾವ ಆಹಾರದಲ್ಲಿ ದೊರಕುತ್ತದೆ ಗೊತ್ತೇ ?