ಮನೆ ಅಂತಾರಾಷ್ಟ್ರೀಯ ಡೊನಾಲ್ಡ್ ಟ್ರಂಪ್ ಮೊದಲ ಪತ್ನಿ ಇವಾನಾ ಟ್ರಂಪ್ ನಿಧನ

ಡೊನಾಲ್ಡ್ ಟ್ರಂಪ್ ಮೊದಲ ಪತ್ನಿ ಇವಾನಾ ಟ್ರಂಪ್ ನಿಧನ

0

ವಾಷಿಂಗ್ಟನ್ (Washington): ಡೊನಾಲ್ಡ್ ಟ್ರಂಪ್ ಅವರ ಮೊದಲ ಪತ್ನಿ ಇವಾನಾ ಟ್ರಂಪ್ (73) ಇಂದು ನಿಧನರಾಗಿರುವ ಕುರಿತು ಡೊನಾಲ್ಡ್‌ ಟ್ರಂಪ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಮೆಟ್ಟಿಲಿನಿಂದ ಜಾರಿ ಬಿದ್ದು ಇವಾನಾ ಟ್ರಂಪ್‌ ಅವರು ನಿಧನರಾಗಿದ್ದಾರೆ.

ಇವಾನಾ ಟ್ರಂಪ್‌ ಅವರ ಮೂವರು ಮಕ್ಕಳಾದ ಡೊನಾಲ್ಡ್ ಜೂನಿಯರ್, ಇವಾಂಕಾ ಮತ್ತು ಎರಿಕ್ ಈ ಸಂಬಂಧ ಟ್ವೀಟ್ ಮಾಡಿದ್ದು, ಅವಳ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇತ್ತು. ಅವಳಿಗೂ ನಮ್ಮ ಬಗ್ಗೆ ತುಂಬಾ ಹೆಮ್ಮೆ ಇತ್ತು. ಅವರು ತಮ್ಮ ಮಕ್ಕಳಿಗೆ ತಾಳ್ಮೆ ಮತ್ತು ಕಠಿಣತೆ, ಸಹಾನುಭೂತಿ ಮತ್ತು ನಿರ್ಣಯದ ಬಗ್ಗೆ ಕಲಿಸಿದ್ದಾರೆ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.

ವೃತ್ತಿಯಲ್ಲಿ ಮಾಡೆಲ್ ಆಗಿದ್ದ ಇವಾನಾ 1977ರಲ್ಲಿ ಉದಯೋನ್ಮುಖ ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದ ಡೊನಾಲ್ಡ್ ಟ್ರಂಪ್ ಅವರನ್ನು ವಿವಾಹವಾದ್ದರು. ಈ ಜೋಡಿಗೆ ಅದೇ ವರ್ಷದಲ್ಲಿಯೇ ಮೊದಲ ಮಗು ಡೊನಾಲ್ಡ್ ಜೂನಿಯರ್ ಜನಿಸಿದರು. ನಂತರ ಇವಾಂಕಾ ಅವರು ಡೊನಾಲ್ಡ್‌ ಟ್ರಂಪ್‌ ಅವರಿಂದ ವಿಚ್ಚೇದನ ಪಡೆದಿದ್ದರು.