ಒಬ್ಬ ವ್ಯಕ್ತಿಯನ್ನು ಲಂಚ ತೆಗೆದುಕೊಂಡಿದ್ದಕ್ಕಾಗಿ ನ್ಯಾಯಾಧೀಶರ ಬಳಿಗೆ ಕರೆದು ತರಲಾಯಿತು. ಅವನಿಗೆ ಶಿಕ್ಷೆಯಾಗಿ ಐದು ಕೆಜಿ ಈರುಳ್ಳಿಯನ್ನು ತಿನ್ನುವ ಅಥವಾ 50 ಚಡಿ ಏಟಿನ ಅಥವಾ ಒಂದು ಸಾವಿರ ರೂಪಾಯಿಗಳನ್ನು ನೀಡಬೇಕೆನ್ನುವ ಶಿಕ್ಷೆ ನೀಡಲಾಯಿತು. ಆ ದುರಾಸೆ ಮನುಷ್ಯನಿಗೆ ಹಣ ನೀಡುವ ಮನಸ್ಸಿರಲಿಲ್ಲ. ಅವನು 50 ಚಡಿ ಏಟುಗಳ ಬಗ್ಗೆ ಯೋಚಿಸಿದ. ಆದರೆ 50 ಏಟುಗಳು ಮುಗಿಯುವ ಧರೊಳಗೆ ಅವನ ಸಾವು ಖಂಡಿತವಾಗಿತ್ತು. ಹೀಗಾಗಿ ಅವನು 5 ಕೆಜಿ ಈರುಳ್ಳಿಯನ್ನು ತಿನ್ನುವ ಶಿಕ್ಷೆಯನ್ನು ಒಪ್ಪಿದ. ಅವನಿಗೆ 50 ಈರುಳ್ಳಿಗಳನ್ನು ತಿನ್ನಲಾಗಲಿಲ್ಲ. ಆಗ ಏಟನ್ನು ಕೊಡಲಾಯಿತು.
ಅವನಿಗೆ ಏಟಿನ ತೀವ್ರ ನೋವನ್ನು ತಾಳಲಾಗಲಿಲ್ಲ. ಅವನಿಗೆ 10 ಏಟುಗಳು ಹೊಡೆಯುವಲ್ಲಿ ಅವನು ಜೋರಾಗಿ ಕಿರುಚುತ್ತಾ ಬಿಟ್ಟು ಬಿಡಿ, ನಾನು ನೀವು ಹೇಳಿದ್ದಕ್ಕಿಂತ ಹೆಚ್ಚು ಹಣ ನೀಡಲು ಸಿದ್ದ ಎಂದನು. ಹೀಗೆ ಅವನು ದುರಾಸೆಯಿಂದಾಗಿ ಸ್ವಲ್ಪ ಹಣ ನೀಡಿ ತೊಂದರೆಯಿಂದ ತಪ್ಪಿಸಿಕೊಳ್ಳಲು ಬದಲು ತನ್ನ ಮೂರ್ಖತನದಿಂದ ಎಲ್ಲಾ ಮೂರು ಶಿಕ್ಷೆಗಳಿಗೆ ಒಳಪಟ್ಟನು.
ಪ್ರಶ್ನೆ
1. ಈ ಕಥೆಯ ನೀತಿ ಏನು
ಉತ್ತರ
1.ಬಹಳ ಜನರು ಹಣಕ್ಕೆ ಪ್ರಾಮುಖ್ಯತೆಯನ್ನು ನೀಡಿ ಬದುಕಿನಲ್ಲಿ ಇನ್ನೆಲ್ಲಾ ವಿಷಯಗಳನ್ನು ನಿರ್ಲಕ್ಷಿಸುತ್ತಾರೆ. ಬದುಕಿನಲ್ಲಿ ಹಣವೇ ಎಲ್ಲಾ ಅಲ್ಲ. ಹಣದಿಂದ ಭೋಗವನ್ನು ಖರೀದಿಸಬಹುದು ಆದರೆ ಸಂತೋಷವನಲ್ಲ.ಹಣದಿಂದ ನಾವು ಬ್ಯೂಟಿ ಸೆಲೂನಿಗೆ ಹೋಗಬಹುದು. ಆದರೆ ಸೌಂದರ್ಯವನ್ನು ಖರೀದಿಸಲಾಗುವುದಿಲ್ಲ ನಾವು ಔಷಧಿ ಖರೀದಿಸಬಹುದು. ಆದರೆ ಒಳ್ಳೆಯ ಆರೋಗ್ಯವನ್ನಲ್ಲ. ನಾವು ವ್ಯಾಯಾಮ ಉಪಕರಣಗಳನ್ನು ಖರೀದಿಸಬಹುದು. ಆದರೆ ಒಳ್ಳೆಯ ದೇಹಕಾರವನ್ನೆಲ್ಲ. ನಾವು ಒಳ್ಳೆಯ ಶಾವಪಟ್ಟಿಕೆಯನ್ನು ಖರೀದಿರುವುದು. ಆದರೆ ಒಳ್ಳೆಯ ಹಾಗೂ ಶಾಂತವಾದ ಸಾವನ್ನು ಖಚಿತಪಡಿಸಲಾಗದು.