ಮನೆ ಅಪರಾಧ ಜೋಡಿ ಹತ್ಯೆ ಪ್ರಕರಣ: ಗ್ರಾಮದ 20 ಜನರ ಬಂಧನ

ಜೋಡಿ ಹತ್ಯೆ ಪ್ರಕರಣ: ಗ್ರಾಮದ 20 ಜನರ ಬಂಧನ

0

ತುಮಕೂರು:(Tumkur) ಗುಬ್ಬಿ ತಾಲೂಕಿನಲ್ಲಿ ನಡೆದ ಜೋಡಿ ಹತ್ಯೆ ಪ್ರಕರಣದ(Double murder case) ಪ್ರಮುಖ ಆರೋಪಿ ಸೇರಿ ಒಂದೇ ಗ್ರಾಮದ 20 ಜನರನ್ನು(20 People) ಪೊಲೀಸರು ಬಂಧಿಸಿದ್ದಾರೆ(Arrested).

ತಾಲೂಕಿನ ಪೆದ್ದನಹಳ್ಳಿ ಗ್ರಾಮದ ಸುತ್ತಮುತ್ತ ನಿರಂತರವಾಗಿ ಮೋಟರ್ ಪಂಪ್ ಸೆಟ್​ಗಳ ಕಳ್ಳತನ ನಡೆಯುತ್ತಿತ್ತು.

ಇದರಿಂದ ಬೇಸತ್ತ ಗ್ರಾಮಸ್ಥರು ಆ ಕಳ್ಳರನ್ನು ಹಿಡಿಯಲು ಕಾದು ಕುಳಿತಿದ್ದರು. ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದ ಗಿರೀಶ್ ಹಣದಾಸೆಗೆ ಬಿದ್ದು ಕಳ್ಳತನದ ಹಾದಿ ಹಿಡಿದಿದ್ದನು. ತನ್ನ ಸ್ನೇಹಿತನ ಜೊತೆ ಸೇರಿ ಗ್ರಾಮದಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದನು.

ಇದೇ ಏಪ್ರಿಲ್​ 22 ರಂದು ಕಳ್ಳತನಕ್ಕೆ ಬಂದ ಗಿರೀಶ್​ ಹೆಸರಿನ ಇಬ್ಬರನ್ನು ಗ್ರಾಮಸ್ಥರು ಸೆರೆಹಿಡಿದಿದ್ದಾರೆ. ಅಷ್ಟೇ ಅಲ್ಲದೇ ಚೆನ್ನಾಗಿ ಥಳಿಸಿ ಅವರಿಬ್ಬರನ್ನು ಕೊಲೆ ಮಾಡಿದ್ದಾರೆ.

ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಒಂದೇ ಗ್ರಾಮದ 20 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಹಿಂದಿನ ಲೇಖನತಿರುಮಕೂಡಲುವಿನಲ್ಲಿ ನಿರ್ಮಿಸಲಾಗಿರುವ ಡಾ. ಬಾಬು ಜಗಜೀವನ್ ರಾಮ್ ಪ್ರತಿಮೆ ಅನಾವರಣಕ್ಕೆ ಹೈಕೋರ್ಟ್ ಅನುಮತಿ
ಮುಂದಿನ ಲೇಖನ545 ಪಿಎಸ್ ಐ ಹುದ್ದೆಗೆ ಮರುಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನ: ಆರಗ ಜ್ಞಾನೇಂದ್ರ