ಡೌನ್ ಸಿಂಡ್ರೋಮ್ ಸಮಸ್ಯೆಯಿರುವ ಮಕ್ಕಳು ಪ್ರತಿ ನೂರು ಮಂದಿಯಲ್ಲಿ ಒಬ್ಬರು ಇಲ್ಲವೆ ಇಬ್ಬರಿರುತ್ತಾರೆ. ಈ ಸಮಸ್ಯೆ ಕ್ರೋಮೋಜೋಮ್ ಡಿಸಾರ್ಡರ್ ನಿಂದ ಉಂಟಾಗುತ್ತದೆ. ಸಹಜವಾಗಿ ಮಾನವನ ಪ್ರತಿ ಕಣಗಳಲ್ಲಿಯೂ 46 ಕ್ರೋಮೋಜೋಮ್ ಗಳ ಅವ್ಯವಸ್ಥೆಯುಂಟಾಗಿ ಇಂತಹ ಮಕ್ಕಳು ಹುಟ್ಟುತ್ತಾರೆ. ಈ ಆಧುನಿಕ ಕಾಲದಲ್ಲಿ ಮಹಿಳೆಯರು ತಡವಾಗಿ ಮದುವೆ ಮಾಡಿಕೊಳ್ಳುವುದು, ತಡವಾಗಿ ಮಕ್ಕಳನ್ನು ಹೆರುವುದು ಹೆಚ್ಚಾಗುತ್ತಿರುವುದರಿಂದ ಡೌನ್ ಸಿಂಡ್ರೋಮ್ ಮಕ್ಕಳೂ ಹೆಚ್ಚಾಗುತ್ತಿದ್ದಾರೆ.
ಡ್ರೌನ್ ಸಿಂಡ್ರೋಮ್ ಲಕ್ಷಣಗಳು :-
ಡೌನ್ ಸಿಂಡ್ರೋಮ್ ಮಕ್ಕಳ ಸ್ನಾಯುಗಳ ಹಿಡಿತ ಕಡಿಮೆಯಿರಿತ್ತದೆ. ಕಣ್ಣಿನ ಗುಡ್ಡೆಗಳು ಮೇಲಕ್ಕಿರುತ್ತವೆ. ಹುಟ್ಟಿನಿಂದಲೇ ಬರುವ ಹೃದ್ರೋಗವಿರುತ್ತದೆ. ಕೈಗಳು ದಪ್ಪಗೆ ಮತ್ತು ಅಗಲವಾಗಿರುತ್ತದೆ. ಮೂಗು ಚಪ್ಪಟೆಯಾಗಿರುತ್ತದೆ. ನಾಲಿಗೆ ಬಾಯಿಯಿಂದ ಹೊರಗಿರುತ್ತದೆ. ಕಾಲಿನ ಮೊದಲ ಬೆರಳಿಗೂ ಎರಡನೇ ಬೆರಳಿಗೂ ನಡುವೆ ಅಂತರವಿರುತ್ತದೆ.
ನಿರ್ಧಾರ : ಕ್ರೋಮೋಜೋಮ್ ಅನಾಲಿಸಿಸ್ ಮೂಲಕ ಡೌನ್ ಸಿಂಡ್ರೋಮ್ ನಿರ್ಧರಿಸಬಹುದು. ಡೌನ್ ಸಿಂಡ್ರೋಮ್ಇರುವ ಮಕ್ಕಳಲ್ಲಿ ಹೈಪೋಥೈರಾಯಿಡಿಸಂ ಇರುತ್ತದೆ. ಥೈರಾಯಿಡ್ ಹಾರ್ಮೋನ್ ಗಳು ಕಡಿಮೆ ಉತ್ಪತ್ತಿಯಾಗುತ್ತದೆ. ಟಿ3, ಟಿ4, ಟಿ5 ಹೆಚ್ ಪರೀಕ್ಷೆಗಳನ್ನು ಮಾಡಿದರೆ ಹೈಪೋಥೈರಾಯಿಡಿಸಮ್ ತಿಳಿಯುತ್ತದೆ.
ಚಿಕಿತ್ಸೆ : ಡೌನ್ ಸಿಂಡ್ರೋಮ್ಮಕ್ಕಳನ್ನು ಆರಂಭದಲ್ಲಿಯೇ ಗುರುತಿಸಿ ಸೂಕ್ತ ವೈದ್ಯೋಪಚಾರವನ್ನು ಒದಗಿಸಿದರೆ ಸಮಸ್ಯೆಗಳು ಬಹುಮಟ್ಟಿಗೆ ಕಡಿಮೆಯಾಗುತ್ತದೆ. ಈ ಮಕ್ಕಳಿಗೆ ಮಾಂಸಖಂಡಗಳಲ್ಲಿ ಬಲ ಕಡಿಮೆಯಿರುತ್ತದೆ. ಫಿಸಿಯೋಥೆರಪಿ ಮೂಲಕ ಮಸ್ಕುಲಾರ್ ಎಕ್ಸರ್ಸೈಜ್ ಮಾಡಿಸಿದರೆ ಮಾಂಸಖಂಡಗಳು ಬಲಿಷ್ಠವಾಗುತ್ತದೆ. ಕೀಲುಗಳಲ್ಲಿ ಸ್ಥಿರತೆಯುಂಟಾಗುತ್ತದೆ. ಡೌನ್ ಸಿಂಡ್ರೋಮ್ ಮಕ್ಕಳಲ್ಲಿ ಮಾತು ತಡವಾಗಿ ಬರುತ್ತದೆ. ಸೂಕ್ತ ಸ್ವಿಚ್ ತೆರಪಿ ಮೂಲಕ ಸುಲಭವಾಗಿ ಮಾತನಾಡುವಂತೆ ಮಾಡಬಹುದು. ಇವರಲ್ಲಿ ಮೈಲ್ ಸ್ಟೋನ್ ತಡವಾಗಿ ಬೆಳವಣಿಯಾಗುತ್ತದೆ. ಸೂಕ್ತ ಶಿಕ್ಷಣದ ಮೂಲಕ ಬೇಗ ಬೆಳವಣಿಗೆ ಆಗುವಂತೆ ಮಾಡಬಹುದು.
ಡೌನ್ ಸಿಂಡ್ರೋಮ್ ಮಕ್ಕಳ ಸ್ನಾಯುಗಳು ಮತ್ತು ಕೀಲುಗಳಲ್ಲಿ ಹಿಡಿತ ಇರುವುದಿಲ್ಲ. ಹಾಗಾಗಿ ಕೈಗಳನ್ನ ಹಿಡಿದುಕೊಂಡು ಮೇಲಕ್ಕೆ ಎತ್ತಲು ಪ್ರಯತ್ನಿಸಬಾರದು. ಕೈಕಾಲುಗಳ ಎಳೆದರೆ ಅವು ಜಾರುವ ಸಂಭವವಿರುತ್ತದೆ. ಕಷ್ಟಕರವಲ್ಲದ ಆಟಗಳನ್ನು ಆಡಿಸಿದರೆ ಆಟಗಳ ಮೂಲಕ ಸ್ನಾಯುಗಳ ಮತ್ತು ಕೀಲುಗಳ ಬಲ ಹೆಚ್ಚಾಗುತ್ತದೆ. ಡೌನ್ ಸಿಂಡ್ರೋಮ್ ಮಕ್ಕಳನ್ನ ಎಷ್ಟು ಬೇಗ ಗುರುತಿಸಿ ವೈದ್ಯೋಪಚಾರ ಮಾಡಿಸಿದರೆ ಅಷ್ಟು ಬೇಗ ಚೇತರಿಸಿಕೊಳ್ಳುತ್ತಾರೆ.