ಮನೆ ರಾಷ್ಟ್ರೀಯ ಚುನಾವಣಾ ಆಯುಕ್ತರಾಗಿ ಅರುಣ್ ಗೋಯಲ್ ಅಧಿಕಾರ ಸ್ವೀಕಾರ

ಚುನಾವಣಾ ಆಯುಕ್ತರಾಗಿ ಅರುಣ್ ಗೋಯಲ್ ಅಧಿಕಾರ ಸ್ವೀಕಾರ

0

ನವದೆಹಲಿ(Newdelhi): ಚುನಾವಣಾ ಆಯುಕ್ತರಾಗಿ ನೂತನವಾಗಿ ನೇಮಕಗೊಂಡಿದ್ದ ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಗೋಯಲ್ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.

ಪಂಜಾಬ್ ಕೇಡರ್ ಮತ್ತು 1985ನೇ ಬ್ಯಾಚ್ ನ ಗೋಯಲ್ ಅವರನ್ನು ಶನಿವಾರ ಕೇಂದ್ರ ಸರ್ಕಾರ ನೂತನ ಆಯುಕ್ತರನ್ನಾಗಿ ನೇಮಕ ಮಾಡಿ ಅಧಿಕೃತ ಪ್ರಕಟಣೆ ಹೊರಡಿಸಿತ್ತು.

ಕಾನೂನು ಮತ್ತು ನ್ಯಾಯ ಸಚಿವರು ಗೋಯಲ್ ಅವರ ಹೆಸರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲು ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಶಿಫಾರಸು ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಮುರ್ಮು ಅವರು ಅರುಣ್ ಗೋಯಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದರು.

ಹಿಂದಿನ ಲೇಖನಜಪಾನ್’ನಿಂದ ನೇತಾಜಿ ಅಸ್ಥಿ ತರಲು ಕಲ್ಕತ್ತಾ ಹೈಕೋರ್ಟ’ಗೆ ಮೊರೆ: ಚರಿತ್ರೆ ತಿರುಚದಂತೆ ಕ್ರಮ ಕೈಗೊಳ್ಳಲು ಮನವಿ
ಮುಂದಿನ ಲೇಖನಕೊಪ್ಪದ ಲವ್ ಜಿಹಾದ್ ಪ್ರಕರಣ: ನೊಂದ ಯುವತಿಯಿಂದ ದೂರು ದಾಖಲು