ಮನೆ ಅಪರಾಧ ಕೂಲಿ ಅರಸಿ ಬರುವ ನಿರ್ಗತಿಕರನ್ನು ಜೀತಕ್ಕೆ ತಳ್ಳುವ ಗ್ಯಾಂಗ್ ಪತ್ತೆ

ಕೂಲಿ ಅರಸಿ ಬರುವ ನಿರ್ಗತಿಕರನ್ನು ಜೀತಕ್ಕೆ ತಳ್ಳುವ ಗ್ಯಾಂಗ್ ಪತ್ತೆ

0

ಹಾಸನ(Hassan): ಕೂಲಿ ಅರಸಿ ಬರುವ ನಿರ್ಗತಿಕರನ್ನು ಟಾರ್ಗೆಟ್ ಮಾಡಿ ಜೀತಕ್ಕೆ ತಳ್ಳೋ ಕತರ್ನಾಕ್ ಗ್ಯಾಂಗ್  ಒಂದು ಹಾಸನದಲ್ಲಿ ಪತ್ತೆಯಾಗಿದೆ.

ಅರಸೀಕೆರೆ ತಾಲ್ಲೂಕಿನಲ್ಲಿ ಅಣ್ಣನಾಯಕನಹಳ್ಳಿಯ ಮುನೀಶ್ ಎಂಬಾತನಿಂದ ಇಂತಹ ಅಮಾನವೀಯ ಕೃತ್ಯ ನಡೆದಿದೆ.

ಒಂದು ದಿನದ ಕೆಲಸವಿದೆ ಎಂದು ಆಸೆ ಹುಟ್ಟಿಸಿ, ಕರೆತಂದು ಕೂಡಿ ಹಾಕಲಾಗುತ್ತಿತ್ತು ಎಂಬುದು ತಿಳಿದುಬಂದಿದೆ. ಹೀಗೆ ಅರಸೀಕೆರೆ ಸುತ್ತಮುತ್ತ ಸಿಕ್ಕ 50 ಕ್ಕೂ ಹೆಚ್ಚು ನಿರ್ಗತಿಕರನ್ನು (down trodden Labourer) ಮುನೇಶ್ ಗ್ಯಾಂಗ್​ ಅಕ್ರಮ‌ ಬಂಧನದಲ್ಲಿಟ್ಟು, ಅನ್ನ ಅಹಾರ, ನೀರು, ಸ್ನಾನ ಇಲ್ಲದೆ ನರಳಾಡುವಂತೆ ಮಾಡಿದ್ದರೂ ಎಂದು ತಿಳಿದುಬಂದಿದೆ. ಗೂಡಿನ ಗಾಡಿಯಲ್ಲಿ ಕೂಡಿಹಾಕಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದೊಯ್ಯುತ್ತಿದ್ದ ಮಾಲೀಕ ಮುನೇಶ್.

ರಾಜ್ಯದ ಬೇರೆ ಬೇರೆ ಕಡೆಯಿಂದ ಇವರನ್ನೆಲ್ಲ ಕರೆತಂದು ಅಕ್ರಮವಾಗಿ ಬಂಧನದಲ್ಲಿಟ್ಟು ಕೆಲಸ ತೆಗೆಸುತ್ತಿದ್ದರು. ಶುಂಠಿ ಕೀಳುವ ಕೆಲಸಕ್ಕೆ ಕರೆತಂದು ದುಡಿಸಿಕೊಳ್ಳಲಾಗಿದೆ. ಚಿಕ್ಕಮಗಳೂರು, ಮಧುಗಿರಿ, ಪಾವಗಡ, ತಮಿಳುನಾಡು, ಮಂಡ್ಯ ಹೀಗೆ ನಾನಾ ಭಾಗಗಳಿಂದ ಜನರನ್ನು ಕರೆತಂದು ಜೀತದಾಳುಗಳಂತೆ ದುಡಿಸಿಕೊಳ್ಳಲಾಗಿದೆ. ಕೆಲವರು ಎರಡು ವರ್ಷಗಳಿಂದ ಇನ್ನು ಹಲವರು ಆರು ತಿಂಗಳು, ಕೆಲವರು ವಾರಗಳಿಂದ ಬಂಧಿಯಾಗಿದ್ದಾರೆ.

ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಅರಸೀಕೆರೆ ಗ್ರಾಮಾಂತರ ಪೊಲೀಸರು ಹಾಸನ ಜಿಲ್ಲೆ ಅಣ್ಣೇನಹಳ್ಳಿ ಗ್ರಾಮದಲ್ಲಿ 45 ಪುರುಷರು 10 ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. . ಮುನೇಶನಿಗೆ ಕುಮಾರ ಲಕ್ಷ್ಮಿ, ಮನು ಎಂಬುವವರು ಕುಮ್ಮಕ್ಕು ಕೊಟ್ಟಿದ್ದಾರೆ.

ಹೆಚ್ಚುವರಿ ಎಸ್​ಪಿ ಡಾ. ನಂದಿನಿ ಅವರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಸಂತ್ರಸ್ಥ ಜನರಿಗೆ ಪುನರ್ವಸತಿ ಕಲ್ಪಿಸೋ ಬಗ್ಗೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ಹಿಂದಿನ ಲೇಖನಜಯತೀರ್ಥ ನಿರ್ದೇಶನದ ‘ಕೈವ’ ದಲ್ಲಿ ಧನ್ವೀರ್ ನಟನೆ
ಮುಂದಿನ ಲೇಖನಮೌಂಟ್ ಎವರೆಸ್ಟ್ನ 360 ಡಿಗ್ರಿ ದೃಶ್ಯ ಹಂಚಿಕೊಂಡ ಆನಂದ್ ಮಹೀಂದ್ರಾ