ಮೈಸೂರು(Mysuru): ವರದಕ್ಷಿಣಿ ಕಿರುಕುಳಕ್ಕೆ ಬೆಂಕಿ ಹಚ್ಚಿದ ಗಂಡನನ್ನೇ ಹೆಂಡತಿ ತಬ್ಬಿಕೊಂಡಿರುವ ಘಟನೆ ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಮಹಿಳೆ ರಾಜೇಶ್ವರಿ (28) ಮೃತಪಟ್ಟಿದ್ದಾರೆ. ಮಹಿಳೆ ಪತಿ ಹರೀಶ್ ಬದುಕುಳಿದಿದ್ದು, ಚಿಂತಾಜನ ಸ್ಥಿತಿಯಲ್ಲಿದ್ದಾನೆ.
ಹರದನಹಳ್ಳಿ ಗ್ರಾಮದ ಹರೀಶ್ ವರದಕ್ಷಿಣೆ ವಿಚಾರವಾಗಿ ತಡರಾತ್ರಿ ಪತ್ನಿ ಜೊತೆ ಗಲಾಟೆ ಮಾಡಿ, ಬಳಿಕ ತಾಳ್ಮೆ ಕಳೆದುಕೊಂಡು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಜೀವ ಭಯದಿಂದ ಪತ್ನಿಯು ಪತಿಯನ್ನು ಅಪ್ಪಿಕೊಂಡಿದ್ದಳು ಎನ್ನಲಾಗಿದೆ. ಮಹಿಳೆ ದೇಹ ಸಂಪೂರ್ಣವಾಗಿ ಸುಟ್ಟಿದ್ದರಿಂದ ಮೃತಪಟ್ಟಿದ್ದಾಳೆ. ಆದರೆ ಪತಿಯ ದೇಹ ಭಾಗಶಃ ಸುಟ್ಟುಹೋಗಿದ್ದು, ಕೆ ಆರ್ ಆಸ್ಪತ್ರೆಯಲ್ಲಿ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿದ್ದಾನೆ ಎಂದು ತಿಳಿದುಬಂದಿದೆ.
ವರದಕ್ಷಿಣೆ ಸಂಬಂಧ ತಮ್ಮ ಮಗಳ ಮೇಲೆ ಅಳಿಯ, ಅವನ ತಂದೆ ತಾಯಿ ಕಿರುಕುಳ ನೀಡುತ್ತಿದ್ದರು. ಈ ಸಂಬಂಧ ಪೊಲೀಸ್ ಮೆಟ್ಟಿಲೇರಿದ್ದೆವು ಮತ್ತು ಹಲವು ಬಾರಿ ನ್ಯಾಯ ಪಂಚಾಯ್ತಿ ಕೂಡ ಮಾಡಲಾಗಿತ್ತು ಎಂದು ರಾಜೇಶ್ವರಿ ತಂದೆ ಸೋಮಶೇಖರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.














