ಮನೆ ಅಪರಾಧ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಮಹಿಳೆ ಬಂಧನ

ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಮಹಿಳೆ ಬಂಧನ

0

ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದು, ಇಲ್ಲಿ ಹಿಂದೂ ಆಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದು, ಹಿಂದೂ ಆಗಿ ಭಾರತದಲ್ಲಿ ನೆಲೆಸಿದ್ದ ಮಹಿಳೆಯೊಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಅಕ್ರಮವಾಗಿ ಭಾರತದ ಪೌರತ್ವ ಪಡೆದುಕೊಂಡಿದ್ದ ರೋನಿ ಬೇಗಂ ಎಂಬಾಕೆ 2006 -2007 ರಲ್ಲಿ ಅಕ್ರಮವಾಗಿ ಗಡಿ ನುಸುಳಿ ಭಾರತದೊಳಕ್ಕೆ ಪ್ರವೇಶಿಸಿದ್ದಳು. ರೋನಿ ಬೇಗಂ 2015 ರಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಮಾಗಡಿ ರಸ್ತೆಯಲ್ಲಿ ಟೈಲರಿಂಗ್ ಮಾಡಿಕೊಂಡು ಜೀವಿಸುತ್ತಿದ್ದ ಈಕೆ ಯಾರಿಗೂ ತಿಳಿಯದ ಹಾಗೇ ನೋಡಿಕೊಂಡಿದ್ದಳು.ನೀತಿನ್ ಕುಮಾರ್ ಎಂಬಾತನನ್ನು ಮುಂಬೈನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದ ರೋನಿ ಬೇಗಂ,  ಪಾಯಲ್ ಗೋಷ್ ಎಂದು ಮರು ನಾಮಕರಣ ಮಾಡಿಕೊಂಡಿದ್ದಳು.

ನಕಲಿ ದಾಖಲೆ ಮುಖಾಂತರ ಓಟರ್ ಐಡಿ, ಆಧಾರ್ ಕಾರ್ಡ್ ಸಹ ರೋನಿ ಬೇಗಂ ಉರುಫ್ ಪಾಯಲ್ ಗೋಷ್ ಪಶ್ಚಿಮ ಬಂಗಾಳದ ಏರ್ ಪೋರ್ಟ್​ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಳೆ .FRRO ಸೂಚನೆ ಮೇರೆಗೆ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಒಂದೂವರೆ ವರ್ಷದ ನಂತರ ರೋನಿ ಬೇಗಂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಹಿಂದಿನ ಲೇಖನಬಿಜೆಪಿ ಎಂಬ ವೈರಸ್ ಗೆ ಕಾಂಗ್ರೆಸ್ ವ್ಯಾಕ್ಸಿನ್: ಪ್ರಿಯಾಂಕ ಖರ್ಗೆ
ಮುಂದಿನ ಲೇಖನಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ: ಮೈಸೂರಿನಲ್ಲಿ ವಕೀಲರ ಪ್ರತಿಭಟನೆ