ಮನೆ ರಾಷ್ಟ್ರೀಯ ನೌಕಾಪಡೆ ಪಶ್ಚಿಮ ಕಮಾಂಡ್‌ ನ‌ ವೈದ್ಯಕೀಯ ಮುಖ್ಯಸ್ಥರಾಗಿ ಉಡುಪಿಯ ಡಾ.ಕೃಷ್ಣಮೂರ್ತಿ ಅಧಿಕಾರಿ ನೇಮಕ

ನೌಕಾಪಡೆ ಪಶ್ಚಿಮ ಕಮಾಂಡ್‌ ನ‌ ವೈದ್ಯಕೀಯ ಮುಖ್ಯಸ್ಥರಾಗಿ ಉಡುಪಿಯ ಡಾ.ಕೃಷ್ಣಮೂರ್ತಿ ಅಧಿಕಾರಿ ನೇಮಕ

0

ಉಡುಪಿ: ನೌಕಾಪಡೆಯ ಮುಂಬಯಿ ಮುಖ್ಯ ಕಚೇರಿಯ ಪಶ್ಚಿಮ ಕಮಾಂಡ್‌ನ‌ ವೈದ್ಯಕೀಯ ಮುಖ್ಯಸ್ಥರಾಗಿ ಉಡುಪಿ ಮೂಲದ ಡಾ. ಕೃಷ್ಣಮೂರ್ತಿ ಅಧಿಕಾರಿಯವರು ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ. ನೌಕಾಪಡೆಯ ಈ ಉನ್ನತ ಹುದ್ದೆಯನ್ನು ಅಲಂಕರಿಸಿದ ಉಡುಪಿ ಭಾಗದ ಮೊದಲಿಗರು ಇವರಾಗಿದ್ದಾರೆ.

Join Our Whatsapp Group

 ಕಳೆದ 33 ವರ್ಷದಿಂದ ನೌಕಾಪಡೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಪೀಡಿಯಾಟ್ರಿಕ್ಸ್‌ ವಿಭಾಗದ ಮುಖ್ಯಸ್ಥರಾಗಿ ಐಎನ್‌-ಅಸ್ವಿನಿ ಮತ್ತು ಎಎಫ್ಎಂಸಿ (ಆರ್ಮ್ ಫೋರ್ಸ್‌ ಮೆಡಿಕಲ್‌ ಕಾಲೇಜ್‌) ಹಾಗೂ ಐಎನ್‌ಎಚ್‌ಎಸ್‌ ಧನ್ವಂತರಿ ಹಾಗೂ ಐಎನ್‌ಎಚ್‌ಎಸ್‌ ಪತಂಜಲಿ ಆಸ್ಪತ್ರೆಯಲ್ಲೂ ಉನ್ನತ ಹುದ್ದೆ ಅಲಂಕರಿಸಿದ್ದರು. ಸಿಎಂಒ ಆಗಿ ಅಧಿಕಾರ ಸ್ವೀಕರಿಸುವ ಮೊದಲು ಭಾರತೀಯ ಸೇನೆಯಲ್ಲಿ ಸೆಕೆಂಡ್‌ಮೆಂಟ್‌ನಲ್ಲಿ ಎಡಿಜಿಎಂಎಸ್‌ ಆಗಿದ್ದರು.

ಅವರು ಮೈಸೂರು ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದು, ಪುಣೆಯ ಎಎಫ್ಎಂಸಿಯಲ್ಲಿ ಪಿಡಿಯಾಟ್ರಿಕ್ಸ್‌ನಲ್ಲಿ ಎಂಡಿ ಪದವಿ ಪಡೆದಿದ್ದಾರೆ. ಇವರು ನ್ಯೂರಾಲಜಿ ತಜ್ಞರಾಗಿದ್ದು, ವೈದ್ಯಕೀಯ ಶಿಕ್ಷಣದ ಇಂಟರ್‌ನ್ಯಾಷನಲ್‌ ಫೈಮೆರ್‌ ಫೆಲೊಶಿಪ್‌ ಪಡೆದಿದ್ದಾರೆ. ಉಡುಪಿ ಜಿಲ್ಲೆಯ ಬಾರಕೂರು ಗ್ರಾಮದ ಕುರಾಡಿಯ ಮಹಾಬಲೇಶ್ವರ ಅಧಿಕಾರಿ ಮತ್ತು ಸುಮಿತ್ರಾ ದಂಪತಿ ಪುತ್ರರಾಗಿದ್ದಾರೆ.