ಮನೆ ಸ್ಥಳೀಯ ಇಎಫ್‌ಎಮ್‌ಡಿ ಮೌಲ್ಯಮಾಪಕರಾಗಿ ಡಾ.ಪ್ರಸಾದ್ ಎಸ್.ಎನ್., ನೇಮಕ

ಇಎಫ್‌ಎಮ್‌ಡಿ ಮೌಲ್ಯಮಾಪಕರಾಗಿ ಡಾ.ಪ್ರಸಾದ್ ಎಸ್.ಎನ್., ನೇಮಕ

0

ಮೈಸೂರು: ಎಸ್‌ಡಿಎಮ್‌ಐಎಮ್‌ಡಿ ಸಂಸ್ಥೆಯ ನಿರ್ದೇಶಕರಾದ ಡಾ. (ಲೆ.ಕರ್ನಲ್) ಪ್ರಸಾದ್ ಎಸ್.ಎನ್., ಇವರು ಇ ಎಫ್ ಎಮ್‌ಡಿ ಡೀನ್ಸ್ ಅಕ್ರಾಸ್ ಫ್ರಾಂಟಿಯರ್ಸ್ (ಇಆಂಈ) ನ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಬ್ರಸೆಲ್ಸ್ ನಗರದಲ್ಲಿರುವ ಯುರೋಪಿಯನ್ ಫೆಡರೇಶನ್ ಫಾರ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ (ಇಈಒಆ) ನ ಅಂಗ ಸಂಸ್ಥೆಯಾದ ಇಡಿಎಎಫ್ ಜಾಗತಿಕ ಮಟ್ಟದಲ್ಲಿ ಬಿ ಶಾಲೆಗಳನ್ನು ಮೌಲ್ಯಮಾಪನ ಮಾಡುವ ಸಂಸ್ಥೆಯಾಗಿದೆ. ಎಸ್‌ಡಿಎಮ್‌ಐ ಎಮ್‌ಡಿ ಸಂಸ್ಥೆಯು ಅಂತರರಾಷ್ಟ್ರೀಯ ಮಾನ್ಯತೆಯ ಪ್ರಕ್ರಿಯೆಯನ್ನು ೨೦೧೬ ರಲ್ಲಿ ಆರಂಭಿಸಿದ ದಿನದಿಂದ ಡಾ. ಪ್ರಸಾದ್ ಅವರು ಇ ಎಫ್‌ಎಮ್‌ಡಿ ಜೊತೆಯಲ್ಲಿ ಸಂಬಂಧ ಹೊಂದಿದ್ದಾರೆ. ಪ್ರಸ್ತುತ ೧೭ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ವಿದ್ಯಾರ್ಥಿ ಮತ್ತು ಅಧ್ಯಾಪಕ ವಿನಿಮಯ ಒಪ್ಪಂದ ಹೊಂದಿರುವ ಜೊತೆಗೆ, ಮಾನ್ಯತೆ ಹೊಂದಿರುವ ಖ್ಯಾತ ಸಂಸ್ಥೆಗಳ ಅಧ್ಯಾಪಕರೊಂದಿಗೆ ಜಂಟಿಯಾಗಿ ಸಂಶೋಧನೆ ಮಾಡುವ ಹೆಗ್ಗಳಿಕೆಯನ್ನು ಎಸ್‌ಡಿಎಮ್‌ಐ ಎಮ್ ಡಿ ಸಂಸ್ಥೆಯು ಹೊಂದಿದೆ.