ಮನೆ ಸ್ಥಳೀಯ ಮಂಡ್ಯದಲ್ಲಿ ಡಾ. ರಾಜಕುಮಾರ್ ಅವರ 97ನೇ ದಿನಾಚರಣೆ

ಮಂಡ್ಯದಲ್ಲಿ ಡಾ. ರಾಜಕುಮಾರ್ ಅವರ 97ನೇ ದಿನಾಚರಣೆ

0

ಮಂಡ್ಯ: ಡಾ ರಾಜಕುಮಾರ್ ಜಯಂತಿಯನ್ನು ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಆಚರಣೆ ಮಾಡುತ್ತಿರುವುದು ರಾಜಕುಮಾರ್ ಅಭಿಮಾನಿಗಳ ಸಂಘದ ಹೋರಾಟಕ್ಕೆ ಸಿಕ್ಕ ಪ್ರತಿಫಲವಾಗಿದೆ ಎಂದು ರಾಜಕುಮಾರ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ಹೇಳಿದರು.

ನಗರದ ಸಿಲ್ವರ್ ಜುಬಿಲಿ ಪಾರ್ಕ್ ನಲ್ಲಿ ಡಾ. ರಾಜಕುಮಾರ್ ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸರಳವಾಗಿ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದು ಬಂದಂತಹ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಮಾಡುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಕೆ ಸಿ ಪ್ರವೀಣ್ ಕುಮಾರ್. ಸುರೇಶ್ ಬಾಬು. ಆನಂದ್. ವೆಂಕಟೇಶ್. ಮೂರ್ತಿ ಭಾಗವಹಿಸಿದ್ದರು.