ಬೆಂಗಳೂರು(Bengaluru): ಡಾ.ರಾಜ್ ಕುಮಾರ್ ಕುಟುಂಬ ಸದಸ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಬುಧವಾರ ರೇಸ್ ಕೋರ್ಸ್ ನಿವಾಸದಲ್ಲಿ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಧಿರೇನ್ ರಾಮ್ ಕುಮಾರ್ ಸಿಎಂ ಭೇಟಿಯಾಗಿ ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಕುಮಾರ್ ಸಮಾಧಿ, ಪುನೀತ್ ಸಮಾಧಿ ಮತ್ತು ಪಾರ್ವತಮ್ಮ ಸಮಾಧಿ ಸ್ಥಳವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದರು.
ಒಂದೇ ಸ್ಥಳದಲ್ಲಿ ಮೂರು ಜನರ ಸಮಾಧಿ ಇದೆ ಇದರ ಅಭಿವೃದ್ಧಿ ವಿಚಾರವಾಗಿ ಸಿಎಂ ಜೊತೆ ಚರ್ಚೆ ನಡೆಸಿದರು.
ಈ ವೇಳೆ ರಾಜ್ ಕುಟುಂಬದಿಂದ ಸಿದ್ದಪಡಿಸಿದ ಪಿಪಿಟಿ ವೀಕ್ಷಣೆಯನ್ನು ಮಾಡಿದ ಸಿಎಂ, ಪಿಡಬ್ಲ್ಯೂಡಿ ಇಲಾಖೆಯಿಂದ ಯೋಜನೆ ಅಂದಾಜು ಮೊತ್ತ ತರಿಸಲು ಸೂಚನೆ ನೀಡಿದರು. ಪಿಡಬ್ಲ್ಯೂಡಿ ಇಲಾಖೆಯಿಂದ ಯೋಜನೆಯ ರೂಪರೇಷ ತಯಾರದ ಬಳಿಕ ಮತ್ತೊಂದು ಸುತ್ತಿನೆ ಸಭೆ ಮಾಡೋಣ ಎಂದು ಸಿಎಂ ಹೇಳಿದರು.