ಮನೆ ರಾಜಕೀಯ ಪ್ರತಾಪ್ ಸಿಂಹ ಜನಪ್ರತಿನಿಧಿಯೋ, ಆರ್’ಎಸ್’ಎಸ್ ಅಡಿಯಾಳೋ ತಿಳಿಸಲಿ: ಡಾ.ಎಸ್.ಯತೀಂದ್ರ ಪ್ರಶ್ನೆ

ಪ್ರತಾಪ್ ಸಿಂಹ ಜನಪ್ರತಿನಿಧಿಯೋ, ಆರ್’ಎಸ್’ಎಸ್ ಅಡಿಯಾಳೋ ತಿಳಿಸಲಿ: ಡಾ.ಎಸ್.ಯತೀಂದ್ರ ಪ್ರಶ್ನೆ

0

ಮೈಸೂರು(Mysuru):‌ ಪ್ರತಾಪ್​ ಸಿಂಹ ಅವರು ಜನಪ್ರತಿನಿಧಿಗಳೋ ಅಥವಾ ಆರ್​ಎಸ್​ಎಸ್​ನ ಅಡಿಯಾಳೋ ಎಂಬುದನ್ನು ತಿಳಿಸಲಿ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದರು.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಪರವಾಗಿ ಕೆಲಸ ಮಾಡಬೇಕಾದ ಸಂಸದರು, ಆರ್​ಎಸ್ಎಸ್​ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳಿಂದ ಸಾರ್ವಜನಿಕರಿಗೆ ಏನು ಪ್ರಯೋಜನ ಎಂದು ಕುಟುಕಿದರು.

ಸಾಹಿತಿ ದೇವನೂರು ಮಹಾದೇವ ಅವರು ಬರೆದ ಆರ್​ಎಸ್​ಎಸ್​: ಆಳ ಅಗಲ ಕೃತಿಯನ್ನು ‘ವಿಕೃತಿ’ ಎಂಬ ಪ್ರತಾಪ್ ಸಿಂಹ ಟೀಕೆಗೆ ಪ್ರತಿಕ್ರಿಯಿಸಿದ ಅವರು, ನಾಡಿನ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಅವರನ್ನು ಕಾಂಗ್ರೆಸ್​ ಅಡಿಯಾಳು ಎಂದು ಟೀಕಿಸಿದ ಸಂಸದರ ಮನಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಅವರು ಕಿಡಿಕಾರಿದರು.’

ಪ್ರತಾಪ್ ಸಿಂಹ ಅವರು ಹಿಂದೆ ಏನು ಬರೆಯುತ್ತಿದ್ದರು ಎಂಬುದನ್ನು ಅವರೇ ನೆನಪು ಮಾಡಿಕೊಳ್ಳಲಿ. ವಿಕೃತಿಯ ಕೃತಿಗಳನ್ನು ಯಾರಾದರೂ ಬರೆದಿದ್ದರೆ ಅದು ಪ್ರತಾಪ್ ಸಿಂಹ ಮಾತ್ರ. ಬಿಜೆಪಿ ನಾಯಕರ ವಿರುದ್ಧ ‘ಬೆತ್ತಲೆ ಜಗತ್ತು’ ಎಂಬ ಕೃತಿ ಬರೆದರು. ಇಂದು ಅದೇ ಪಕ್ಷಕ್ಕೆ ಸೇರಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಹಿಂದಿನ ಲೇಖನಸ್ವಾವಲಂಬಿ ಭಾರತ ಕಟ್ಟೋಣ: ಬಿ.ವೈ.ವಿಜಯೇಂದ್ರ
ಮುಂದಿನ ಲೇಖನತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಗೆ ಕೋವಿಡ್ ದೃಢ: ಆಸ್ಪತ್ರೆಗೆ ದಾಖಲು