ಮನೆ ಆರೋಗ್ಯ ಲಿವರ್ ಮತ್ತು ಕರುಳು ಶುದ್ಧಿಗಾಗಿ ಈ ಪಾನೀಯಗಳನ್ನು ಕುಡಿಯಲೇಬೇಕು!

ಲಿವರ್ ಮತ್ತು ಕರುಳು ಶುದ್ಧಿಗಾಗಿ ಈ ಪಾನೀಯಗಳನ್ನು ಕುಡಿಯಲೇಬೇಕು!

0

ನಮ್ಮ ದೇಹದೊಳಗಿನ ಪ್ರತಿಯೊಂದು ಅಂಗಾಂಗಗಳ ಬಗ್ಗೆಯೂ ಕೂಡ ನಾವು ಕಾಳಜಿ ವಹಿಸಬೇಕು. ಯಾಕೆಂದ್ರೆ ಇವುಗಳೆಲ್ಲಾ ನಮ್ಮ ಕಣ್ಣಿಗೆ ಕಾಣದೇ ಇರುವುದರಿಂದ, ಇಲ್ಲಿ ಸ್ವಲ್ಪ ಸಮಸ್ಯೆಗಳು ಕಂಡು ಬಂದರೂ, ಆರೋಗ್ಯಕ್ಕೆ ಆಪತ್ತು ಕಂಡು ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ದಿನದ 24 ಗಂಟೆಯೂ ಕೂಡ ತಮ್ಮ ಪಾಡಿಗೆ ಕಾರ್ಯ ನಿರ್ವಹಿಸುವ, ದೇಹದೊಳಗಿನ ಪ್ರಮುಖ ಅಂಗಾಂಗಳಿಗೆ ಸಮಸ್ಯೆಗಳು ಬರದೇ ಇರುವ ಹಾಗೆ ನೋಡಿ ಕೊಳ್ಳಬೇಕೆಂದ್ರೆ, ನಾವು ಆರೋಗ್ಯ ಆಹಾರ ಪದ್ಧತಿ ಹಾಗೂ ಸರಿಯಾದ ಜೀವನಶೈಲಿಯನ್ನು ಅನುಸರಿಸಬೇಕು.

Join Our Whatsapp Group

ಯಾಕೆಂದ್ರೆ ಕೆಲವೊಮ್ಮೆ ಅನಾರೋಗ್ಯಕಾರಿ ಆಹಾರ ಪದ್ಧತಿ ಹಾಗೂ ನಮ್ಮ ಕೆಟ್ಟ ದುರಾಭ್ಯಾಸಗಳಿಂದಲೇ, ನಮ್ಮ ದೇಹದೊಳಗಿನ ಪ್ರಮುಖ ಅಂಗಾಂಗಳಿಗೆ ಸಮಸ್ಯೆ ಎದುರಾಗುತ್ತಿರುವುದು! ಮುಖ್ಯವಾಗಿ ಇಂತಹ ಆಹಾರ ಪದಾರ್ಥ ಗಳಿಂದಲೇ ನಮ್ಮ ದೇಹದಲ್ಲಿ ವಿಷಕಾರಿ ತ್ಯಾಜ್ಯ ಅಂಶ ಗಳು ದೇಹದಿಂದ ಹೊರಹೋಗದೆ ಹಾಗೆಯೇ ಉಳಿದು ಲಿವರ್ ಹಾಗೂ ಕರುಳಿನ ಭಾಗದಲ್ಲಿ ಸಮಸ್ಯೆಗಳು ಕಂಡು ಬರಲು ಕಾರಣವಾಗಿ ಬಿಡುತ್ತದೆ!

ಬನ್ನಿ ಇಂದಿನ ಲೇಖನದಲ್ಲಿ ದೇಹದೊಳಗಿನ ಪ್ರಮುಖ ಅಂಗಗಳಾದ ಲಿವರ್ ಹಾಗೂ ಕರುಳಿನ ಶುದ್ಧಿಗಾಗಿ ಏನೆಲ್ಲಾ ಪಾನೀಯಗಳನ್ನು ಮಾಡಿ ಕುಡಿಯಬಹುದು ಎನ್ನುವುದರ ಬಗ್ಗೆ ನೋಡೋಣ…

ನಿಂಬೆ ರಸ ಬೆರೆಸಿದ ಉಗುರು ಬೆಚ್ಚಗಿನ ನೀರು

• ಆರೋಗ್ಯ ತಜ್ಞರು ಹೇಳುವ ಪ್ರಕಾರ, ಕಾಯಿಲೆಗಳಿಂದ ದೂರವಿರಬೇಕು ಎಂದರೆ, ಮೊದಲಿಗೆ ದೇಹದಲ್ಲಿ ಕರುಳು ಚೆನ್ನಾಗಿ ಕೆಲಸ ಮಾಡುವಂತೆ ಇರಬೇಕು.

• ಯಾಕೆಂದ್ರೆ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಿ, ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ನೆರವಾಗುತ್ತದೆ.

• ಹೀಗಾಗಿ ಬೆಳಗ್ಗೆ ಎದ್ದ ಕೂಡಲೇ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ, ಅರ್ಧ ತುಂಡು ನಿಂಬೆ ರಸವನ್ನು ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಆರೋಗ್ಯಕಾರಿ ಪ್ರಯೋಜನ ಗಳನ್ನು ಪಡೆಯಬಹುದು.

• ಇಲ್ಲಾಂದ್ರೆ ರಾತ್ರಿ ಮಲಗುವ ಮುನ್ನ, ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ. ಒಂದು ಟೀ ಚಮಚದಷ್ಟು ತ್ರಿಫಲ ಚೂರ್ಣ ಮಿಕ್ಸ್ ಮಾಡಿ ಕುಡಿದು ಮಲಗುವ ಅಭ್ಯಾಸ ಮಾಡಿಕೊಂಡರೆ, ಹೊಟ್ಟೆಯೊಳಗಿನ ಕರುಳಿನ ಸ್ವಚ್ಛತೆ ಆಗುವುದರ ಜೊತೆಗೆ, ಮುಖದ ಸೌಂದರ್ಯ ಕೂಡ ಹೆಚ್ಚಾಗುತ್ತದೆ.

ದಿನಾ ಒಂದು ಲೋಟ ಮಜ್ಜಿಗೆ ಕುಡಿಯಿರಿ

• ಹಾಲಿನ ಉಪ ಉತ್ಪನ್ನವಾದ ಮಜ್ಜಿಗೆಯಲ್ಲಿ ಆರೋ ಗ್ಯಕ್ಕೆ ಬಹಳ ಒಳ್ಳೆಯದು ಎನ್ನುವ ವಿಚಾರ ನಮಗೆಲ್ಲಾ ಗೊತ್ತೇ ಇದೆ.

• ಪ್ರಮುಖವಾಗಿ, ಈ ಪಾನೀಯದಲ್ಲಿ ಕಂಡು ಬರುವ ಹಲವು ಬಗೆಯ ಆರೋಗ್ಯಕರ ಅಂಶಗಳು, ನಾವು ಸೇವನೆ ಮಾಡಿದ ಆಹಾರದಿಂದ ಉಂಟಾಗುವ ಆಸಿಡಿಟಿ, ಹುಳಿ ತೇಗು, ಎದೆಯುರಿ, ಹೊಟ್ಟೆಯುಬ್ಬರ ಹಾಗೂ ಗ್ಯಾಸ್ಟ್ರಿಕ್ ನಂತಹ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಯನ್ನು ದೂರ ಮಾಡುತ್ತದೆ.

• ಹೀಗಾಗಿ ಊಟದ ನಂತರ ಒಂದು ಲೋಟ ಮಜ್ಜಿಗೆ ಯನ್ನು ಕುಡಿಯುವುದರಿಂದ ದೇಹಕ್ಕೆ ಬೇಕಾಗುವ ಪೌಷ್ಟಿಕ ಸತ್ವಗಳು ಸಿಗುವುದರ ಜೊತೆಗೆ ಕರುಳಿನ ಆರೋ ಗ್ಯವನ್ನು ಕೂಡ ಸುಧಾರಿಸಲು ಸಹಾಯ ಮಾಡುತ್ತದೆ.

ಎಳನೀರು

• ನಮಗೆಲ್ಲಾ ಗೊತ್ತೇ ಇದೆ, ನೈಸರ್ಗಿಕವಾಗಿ ಸಿಗುವ ಎಳ ನೀರು ಹಾಲಿನಷ್ಟೇ ಶ್ರೇಷ್ಠ. ಯಾಕೆಂದ್ರೆ ಹಾಲಿನಲ್ಲಿ ಸಿಗು ವಷ್ಟೇ ಪೌಷ್ಟಿಕ ಸತ್ವಗಳು ಎಳನೀರಿನಲ್ಲಿಯೂ ಕೂಡ ಕಂಡು ಬರುವುದರಿಂದ.

• ಆರೋಗ್ಯ ರಕ್ಷಣೆಯಲ್ಲಿ ಈ ಪಾನೀಯ ಕೂಡ ಪ್ರಮುಖ ಪಾತ್ರ ವಹಿಸುವುದು. ಹೀಗಾಗಿ ಬೆಳಗ್ಗೆ ಎದ್ದ ಕೂಡಲೇ ಎಳನೀರು ಕುಡಿ ಯುವ ಅಭ್ಯಾಸ ಮಾಡಿಕೊಂಡರೆ, ಹೊಟ್ಟೆಯಲ್ಲಿ ಕಂಡು ಬರುವ ಉರಿ, ಆಮ್ಲೀಯತೆ, ಹುಳಿ ತೇಗು, ಎದೆಯುರಿ, ಅಜೀರ್ಣತೆ ಮೊದಲಾದ ತೊಂದರೆ ಗಳನ್ನು ಅತಿ ಶೀಘ್ರದಲ್ಲಿ ಶಮನ ಗೊಳಿಸಿ, ಕರುಳಿನ ಆರೋಗ್ಯವನ್ನು ವೃದ್ಧಿಸುತ್ತದೆ.

ಅರಿಶಿನ ನೀರು

• ಒಂದು ಲೋಟ ಕುದಿಯುವ ನೀರಿಗೆ, ಅರ್ಧ ಟೀ ಚಮಚ ದಷ್ಟು ಅರಿಶಿನ ಪುಡಿಯನ್ನು ಹಾಕಿ, ಎರಡು- ಮೂರು ನಿಮಿಷ ಚೆನ್ನಾಗಿ ಕುದಿಸಿಕೊಳ್ಳಿ

• ಆಬಳಿಕ ಈ ನೀರು ಸ್ವಲ್ಪ ತಣ್ಣಗಾದ ಬಳಿಕ ಅಥವಾ ಉಗುರು ಬೆಚ್ಚಗಿನ ತಾಪಮಾನಕ್ಕೆ ಬಂದಾಗ ಅರ್ಧ ಚಮ ಚದಷ್ಟು ನಿಂಬೆ ರಸವನ್ನು ಈ ಪಾನೀಯಕ್ಕೆ ಮಿಕ್ಸ್ ಮಾಡಿ ಕುಡಿಯಬೇಕು.

• ಬೇಕೆಂದ್ರೆ ರುಚಿಗಾಗಿ, ಈ ಪಾನೀಯಕ್ಕೆ ಒಂದು ಚಮಚ ಜೇನುತುಪ್ಪವನ್ನು ಕೂಡ ಹಾಕಬಹುದು. ಆದರೆ ಸಕ್ಕರೆ ಯನ್ನು ಮಾತ್ರ ಹಾಕಬೇಡಿ.

• ಅರಿಶಿನದಲ್ಲಿ ನೈಸರ್ಗಿಕವಾದ ಆಂಟಿ ಆಕ್ಸಿಡೆಂಟ್ ಅಂಶ ಗಳು ಸಿಗುವುದರಿಂದ ದೇಹವನ್ನುಒಳಗಿನಿಂದಲೇ ಸ್ವಚ್ಛ ಮಾಡಿ, ಕರುಳು ಹಾಗೂ ಲಿವರ್ ಗೆ ಸಮಸ್ಯೆ ಬರದೇ ಇರುವ ಹಾಗೆ ನೋಡಿಕೊಳ್ಳುತ್ತದೆ.

ತರಕಾರಿಗಳ ಜ್ಯೂಸ್ ಕುಡಿಯಿರಿ

• ಹಸಿರು ಎಲೆ ತರಕಾರಿಗಳು ಹಾಗೂ ಮಣ್ಣಿನ ಅಡಿಯಲ್ಲಿ ಸಿಗುವ ತರಕಾರಿಗಳ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆ ಯದು.

• ಅಂತೆಯೇ ಇವುಗಳ ಜ್ಯೂಸ್ ಮಾಡಿಕೊಂಡು ಕೂಡ ಕುಡಿ ಯುವ ಅಭ್ಯಾಸ ಮಾಡಿಕೊಂಡರೆ, ಲವರ್ ಆರೋ ಗ್ಯ ವೃದ್ಧಿಯಾಗುವುದು. ಪ್ರಮುಖವಾಗಿ ಬೀ ಟ್ರೂಟ್ ಜ್ಯೂಸ್ ಮಾಡಿ ಕುಡಿದರೆ, ಲಿವರ್ ಆರೋಗ್ಯಕ್ಕೆ ಬಹಳ ಒಳ್ಳೆಯದು.

• ಅತಿಯಾಗಿ ಧೂಮಪಾನ ಮತ್ತು ಮದ್ಯಪಾನ ಸೇವನೆ ಮಾಡು ವವರಿಗೆ ಲಿವರ್ ಹಾಗೂ ಕರುಳಿನ ಕ್ಯಾನ್ಸರ್ ಜೊತೆಗೆ ಬೇರೆ ಬಗೆಯ ಆರೋಗ್ಯ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.

• ಹೀಗಾಗಿ ಕಣ್ಣಿಗೆ ಕಾಣದ ಇಂತಹ ಪ್ರಮುಖ ಅಂಗಾಂಗ ಗಳಿಗೆ ಸಮಸ್ಯೆ ಬರದೇ ಇರುವ ಹಾಗೆ, ಆರೋಗ್ಯಕಾರಿ ಜೀವನಶೈಲಿ ಅನುಸರಿಸಿ.