ಮನೆ ಅಪರಾಧ ತಂಪು ಪಾನೀಯದಲ್ಲಿ ಬರುವ ಔಷಧ ನೀಡಿ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಸ್ನೇಹಿತೆ ಅರೆಸ್ಟ್‌

ತಂಪು ಪಾನೀಯದಲ್ಲಿ ಬರುವ ಔಷಧ ನೀಡಿ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಸ್ನೇಹಿತೆ ಅರೆಸ್ಟ್‌

0

ಬೆಂಗಳೂರು: ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ನೀಡಿ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ ಸ್ನೇಹಿತೆ ಸೇರಿ ಇಬ್ಬರು ಆರೋಪಿಗಳನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

ಶ್ರೀನಗರದ ಗೀತಾ (37), ಆಕೆಯ ಸ್ನೇಹಿತೆ ಭಾರತಿ ಬಾಯಿ (30) ಬಂಧಿತರು. ಆರೋಪಿಗಳಿಂದ 82 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಹೊಸಕೆರೆಹಳ್ಳಿಯ ನಿವಾಸಿ ಸೌಭಾಗ್ಯ ಅವರ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದರು.

ಸೌಭಾಗ್ಯ ಹಾಗೂ ಗೀತಾ ಸ್ನೇಹಿತರೇ ಆಗಿದ್ದರು. ಏ.26 ರಂದು ಸೌಭಾಗ್ಯ ಮನೆಗೆ ಗೀತಾ ಹಾಗೂ ಭಾರತಿ ಬಾಯಿ ತೆರಳಿದ್ದರು. ಕೆಲ ಹೊತ್ತು ಮಾತನಾಡಿ ವಾಪಸಾಗಿದ್ದರು. ಅದೇ ದಿನ ಮತ್ತೆ ಮನೆಗೆ ಬಂದಿದ್ದ ಆರೋಪಿಗಳು ಸೌಭಾಗ್ಯಗೆ ತಂಪು ಪಾನೀಯವನ್ನು ಕುಡಿಯಲು ಕೊಟ್ಟಿದ್ದರು. ಅದನ್ನು ಕುಡಿದ ಬಳಿಕ ಸೌಭಾಗ್ಯ ಕೆಲ ಹೊತ್ತಿನಲ್ಲೇ ನಿದ್ರೆಗೆ ಜಾರಿದ್ದಾರೆ. ಈ ವೇಳೆ ಆರೋಪಿಗಳಿಬ್ಬರು ಸೌಭಾಗ್ಯ ಅವರ ಮೈಮೇಲಿದ್ದ ಚಿನ್ನಾಭರಣ, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಮೊಬೈಲ್‌ ಕದ್ದು ಪರಾರಿಯಾಗಿದ್ದರು. ಸಂಜೆ ಮನೆಗೆ ಬಂದ ಪತಿ ಕುಮಾರ್‌ ಸೌಭಾಗ್ಯರನ್ನು ಎಬ್ಬಿಸಿದ್ದಾರೆ. ಈ ವೇಳೆ ಚಿನ್ನಾಭರಣ ಕದ್ದೊಯ್ದಿದಿರುವುದು ಗೊತ್ತಾಗಿದೆ. ಬಳಿಕ ಠಾಣೆಗೆ ದೂರು ನೀಡಿದ್ದರು.