ಮನೆ ಸುದ್ದಿ ಜಾಲ ರೈಲ್ವೆ ಪೊಲೀಸರ ನಿರ್ಲಕ್ಷ್ಯಕ್ಕೆ ರೈಲಿನಲ್ಲಿ ನರಳಿ ಪ್ರಾಣಬಿಟ್ಟ ಪ್ರಯಾಣಿಕ

ರೈಲ್ವೆ ಪೊಲೀಸರ ನಿರ್ಲಕ್ಷ್ಯಕ್ಕೆ ರೈಲಿನಲ್ಲಿ ನರಳಿ ಪ್ರಾಣಬಿಟ್ಟ ಪ್ರಯಾಣಿಕ

0

ಮಂಡ್ಯ:ಮೈಸೂರಿನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ವ್ಯಕ್ತಿಗೆ ಮೂರ್ಛೆ ರೋಗ ಬಂದು ರೈಲಿನಲ್ಲಿ ಬಿದ್ದರೂ,ಆತನನ್ನು ಆಸ್ಪತ್ರೆಗೆ ಸೇರಿಸದ ಹಿನ್ನೆಲೆಯಲ್ಲಿ ನರಳಿ ಪ್ರಾಣಬಿಟ್ಟಿರುವ ದುರ್ಘಟನೆ ಮಂಡ್ಯ ನಗರದಲ್ಲಿ ನಡೆದಿದೆ.

Join Our Whatsapp Group


ರೈಲ್ವೆ ಸಿಬ್ಬಂದಿ ಹಾಗೂ ಪೊಲೀಸರ ನಿರ್ಲಕ್ಷದಿಂದ ಚಲಿಸುತ್ತಿದ್ದ ರೈಲಿನಲ್ಲೆ ನರಳಿ ನರಳಿ ಪ್ರಾಣ ಬಿಟ್ಟ ಮೂರ್ಛೆ ರೋಗಿ ಪ್ರಾಣ ಬಿಟ್ಟಿದ್ದಾನೆ ಎಂದು ರೈಲ್ವೆ ಪ್ರಯಾಣಿಕರು ಆರೋಪ ಮಾಡಿದ್ದಾರೆ.ಮೈಸೂರಿನ ರಮಾಬಾಯಿ ನಗರದ ನಿವಾಸಿ ಸ್ವಾಮಿ( 83) ಸಾವನ್ನಪ್ಪಿದ್ದಾನೆ.ನಿನ್ನೆ ಸಂಜೆ ಮೈಸೂರಿನಿಂದ ಬೆಂಗಳೂರಿಗೆ ಪ್ಯಾಸೇಂಜರ್ ರೈಲಿನಲ್ಲಿ ಪ್ರಯಾಣಿ
ಸುತ್ತಿದ್ದ ಸ್ವಾಮಿ, ಮೈಸೂರಿನಲ್ಲಿ ರೈಲು ಹತ್ತುತ್ತಿದ್ದಂತೆ ಮೂರ್ಛೆ ಬಂದು ಕುಸಿದು ಬಿದ್ದಿದ್ದರು. ಸಹ ಪ್ರಯಾಣಿಕರು ಮೈಸೂರಿನಲ್ಲೆ ರೈಲ್ವೆ ಪೊಲೀಸರಿಗೆ, ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.ಆದರೆ ಮಾಹಿತಿ ಕೊಟ್ಟರು ಚಿಕಿತ್ಸೆ ಕೊಡಿಸದ ಸಿಬ್ಬಂದಿಗಳು ರೈಲಿನಲ್ಲಿ ಆತನನ್ನು ಸಾಗುಹಾಕಿದ್ದಾರೆ,ಮೈಸೂರಿನಲ್ಲಿ ಮೂರ್ಛೆ ರೋಗಿ ಇಳಿಸಲು ಮುಂದಾಗದ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ರೈಲು ಹೊರಟು ಮಂಡ್ಯ ನಗರಕ್ಕೆ ಬರುವವರೆಗೂ ಎಲ್ಲಿಯೂ ಚಿಕಿತ್ಸೆ ಲಭ್ಯವಾಗಲಿಲ್ಲ.

ರೈಲಿನಲ್ಲಿಯೇ ನರಳಿ ಪ್ರಾಣಬಿಟ್ಟ: ಇನ್ನು ಮೈಸೂರಿನಿಂದ ಮಂಡ್ಯ ನಗರದ ಸಮೀಪ ರೈಲು ಆಗಮಿಸುತ್ತಿದ್ದಂತೆ ಮೂರ್ಛೆ ರೋಗದಿಂದ ಬಳಲುತ್ತಿದ್ದ ಸ್ವಾಮಿ ನರಳಿ, ನರಳಿ ಪ್ರಾಣ ಹೊರಟ ನಂತರ ರೈಲು ನಿಲ್ಲಿಸಿದ ಎಲ್ಲ ನಿಲ್ದಾಣಗಳಲ್ಲಿಯೂ ರೈಲ್ವೆ ಸಿಬ್ಬಂದಿಗೆ ಪ್ರಯಾಣಿಕರು ಪ್ರಾಣಾಪಾಯದಿಂದ ಬಳಲುತ್ತಿದ್ದಾನೆ ಕೂಡಲೇ ಅವರಿಗೆ ಚಿಕಿತ್ಸೆ ಕೊಡಿಸುವಂತೆ ಪ್ರಯಾಣಿಕರು ಮನವಿ ಮಾಡಿದ್ದಾರೆ.ಈ ಬಗ್ಗೆ ಪೊಲೀಸ್‌ ಠಾಣೆಗೂ ಮಾಹಿತಿ ರವಾನಿಸಿದ್ದಾರೆ.ಆದರೆ,ಯಾವೊಬ್ಬ ಇಲಾಖೆ ಸಿಬ್ಬಂದಿಯೂ ಚಿಕಿತ್ಸೆ ಕೊಡಿಸಲಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ರೈಲ್ವೆ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ಪ್ರಯಾಣಿಕ ಸಾವನ್ನಪ್ಪಿದ್ದಾಗಿ ಪ್ರಯಾಣಿಕರು ಆರೋಪ ಮಾಡಿದ್ದಾರೆ.
ಮಂಡ್ಯದಿಂದ ಮೃತದೇಹ ಕೊಂಡೊಯ್ದ ಕುಟುಂಬಸ್ಥರು:

ರೈಲ್ವೆ ಅಧಿಕಾರಿಗಳು ಪೊಲೀಸರ ನಿರ್ಲಕ್ಷಕ್ಕೆ ಸಾವಿಗೆ ಕಾರಣ ಎಂದ ಸಹ ಪ್ರಯಾಣಿಕರು ಮಂಡ್ಯ ರೈಲ್ವೆ ನಿಲ್ದಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಂಡ್ಯದಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನ ವಾರಸುದಾರರಿಗೆ ಒಪ್ಪಿಸಿದ ಪೊಲೀಸರು. ಆದರೆ, ರೈಲಿನಲ್ಲಿ ಪ್ರಯಾಣಿಕರಿಗೆ ಪ್ರಾಣಾಪಾಯ ಇದ್ದರೂ ಅವರ ರಕ್ಷಣೆಗೆ ಯಾವುದೇ ವ್ಯವಸ್ಥೆ ಮಾಡದ ಸಿಬ್ಬಂದಿಯ ವಿರುದ್ಧ ಸಾರ್ವಜನಿಕರು, ಪ್ರಯಾಣಿಕರು ಮತ್ತು ಮೃತ ವ್ಯಕ್ತಿಯ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.