ಮನೆ ರಾಜ್ಯ ನಾಳೆಯಿಂದ ದಸರಾ ಪುಸ್ತಕ ಮೇಳ ಉದ್ಘಾಟನೆ  

ನಾಳೆಯಿಂದ ದಸರಾ ಪುಸ್ತಕ ಮೇಳ ಉದ್ಘಾಟನೆ  

0

ಮೈಸೂರು: ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ದಸರಾ ಮಹೋತ್ಸವದ ಸಮಿತಿ ಇವರ ಸಂಯುಕ್ತಾ ಶ್ರಯದಲ್ಲಿ ಮೈಸೂರು ದಸರಾ ಮಹೋತ್ಸವ – 2023ರ ಅಂಗವಾಗಿ ಅಕ್ಟೋಬರ್ 15ರಿಂದ 23ರವರೆಗೆ ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳವನ್ನು ಹಳೆ ಡಿ.ಸಿ. ಆಫೀಸ್ ಪಕ್ಕದಲ್ಲಿರುವ ಓವೆಲ್ ಗ್ರೌಂಡ್ ಮೈದಾನದಲ್ಲಿ ಆಯೋಜಿಸಲಾಗಿದೆ.

ಅಕ್ಟೋಬರ್ 15 ರಂದು ಸಂಜೆ 5:00 ಗಂಟೆಗೆ ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಿಗೆ ಅವರು ಪುಸ್ತಕಮೇಳವನ್ನು ಉದ್ಘಾಟಿಸಲಿದ್ದಾರೆ.

ಪುಸ್ತಕ ಮೇಳದಲ್ಲಿ ಪ್ರತಿದಿನ ಹೆಸರಾಂತ ಸಾಹಿತಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. “ಸೆಲ್ಫಿ ವಿತ್ ಸಾಹಿತಿ” ಎಂಬ ಶೀರ್ಷಿಕೆ ಅಡಿ ಸಾಹಿತಿಗಳ ಜೊತೆ ಪುಸ್ತಕಗಳ ಮೇಳಕ್ಕೆ ಬರುವ ಸಾರ್ವಜನಿಕರಿಗೆ ಸೆಲ್ಫಿ ತೆಗೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಅ.15 ರಂದು ಎನ್. ಬಸವಯ್ಯ ಮತ್ತು ತಂಡದಿಂದ ಜಾನಪದ ಗಾಯನ ಅ. 16ರಂದು ಪ್ರೊಫೆಸರ್ ಎಂ. ಕೃಷ್ಣೇಗೌಡ ಅವರಿಂದ ನಗೆ ನುಡಿ ಕಾರ್ಯಕ್ರಮ ಅ. 17ರಂದು ಗಾನ ಸಾವಿರ ಯಕ್ಷಗಾನ ಶಾಲೆ ವತಿಯಿಂದ ಕಂಸ ವಧೆ ಪ್ರಸಂಗ. ಅ. 18ರಂದು ವೈ. ಎಂ. ಪುಟ್ಟಣ್ಣಯ್ಯ ಮತ್ತು ತಂಡದ ವತಿಯಿಂದ ರಂಗಗೀತೆಗಳ ಕಾರ್ಯಕ್ರಮ ಅ.19ರಂದು ಡಾ. ಎಂ. ಖಾಸಿಂ ಮಲ್ಲಿಗೆ ಮತ್ತು ತಂಡದ ವತಿಯಿಂದ ಸುಗಮ ಸಂಗೀತ ಅ. 20ರಂದು ಉಷಾ .ಬಿ ಅವರಿಂದ ನೃತ್ಯ ಅ. 21 ರಂದು ಗಂಗಾಧರ ಮೂರ್ತಿ ಅವರಿಂದ ಪ್ರಾತ್ಯಕ್ಷಿಕೆ ಹಾಗೂ ಅ.22ರಂದು ಡಾ. ರಾಘವೇಂದ್ರ ಹೆಚ್. ಕುಲಕರ್ಣಿ ಅವರಿಂದ ಕರ್ನಾಟಕದಲ್ಲಿ ಶಿಲ್ಪಕಲೆ ವೈವಿಧ್ಯಗಳ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ .

ಹಿಂದಿನ ಲೇಖನಯುದ್ಧಪೀಡಿತ ಇಸ್ರೇಲ್ ನಿಂದ 2ನೇ ವಿಮಾನದಲ್ಲಿ ತಾಯ್ನಾಡಿಗೆ ಬಂದಿಳಿದ 235 ಭಾರತೀಯರು
ಮುಂದಿನ ಲೇಖನ58 ಮಂದಿ ಸಬ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ