ಮನೆ ಸ್ಥಳೀಯ ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು: ದಿಕ್ಕೆಟ್ಟು ಓಡಿದ ಜನ

ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು: ದಿಕ್ಕೆಟ್ಟು ಓಡಿದ ಜನ

0

 ಮೈಸೂರು: ಅರಮನೆಯ ಆವರಣದಲ್ಲಿರುವ ದಸರಾ  ಗಜಪಡೆಯ ಕಂಜನ್​​ ಹಾಗೂ ಧನಂಜಯ ಆನೆ ನಡುವೆ ಊಟ ಮಾಡುವಾಗ ಗಲಾಟೆ ನಡೆದಿದೆ.‌

Join Our Whatsapp Group

ಆಕ್ರೋಶಗೊಂಡ ಧನಂಜಯ ಆನೆ ಕಂಜನ್ ಆನೆ‌ ಮೇಲೆ ದಾಳಿಗೆ ಮುಂದಾಗಿದೆ. ಇದರಿಂದ ಬೆದರಿದ ಕಂಜನ್ ಆನೆ ಮಾವುತನಿಲ್ಲದೆ ಅರಮನೆಯ ಜಯ ಮಾರ್ತಾಂಡ ಮುಖ್ಯ ದ್ವಾರದ ಪಕ್ಕದ ಕೋಡಿ ಸೋಮೇಶ್ವರ ದೇಗುಲದ ದ್ವಾರದಿಂದ ಆಚೆ ಓಡಿ ಬಂದಿದೆ. ಆದರೂ ಬೆನ್ನು ಬಿಡದ ಧನಂಜಯ ಆನೆ ಕಂಜನ್ ಆನೆಯನ್ನು ಅಟ್ಟಿಸಿಕೊಂಡು ಬಂದಿದೆ.

ಇದರಿಂದ ಮತ್ತಷ್ಟು ಬೆದರಿದ ಕಂಜನ್ ದೊಡ್ಡಕೆರೆ ಮೈದಾನ ಬಳಿ ಬ್ಯಾರಿಕೇಡ್ ತಳ್ಳಿಕೊಂಡು ಜನರ ಬಳಿ‌ ಹೋಗಿದೆ. ಈ ವೇಳೆ ಧನಂಜಯ ಅನೆ ಮೇಲೆ ಇದ್ದ ಮಾವುತ ಧೈರ್ಯದಿಂದ ಸಮಯಪ್ರಜ್ಞೆಯಿಂದ ಕೋಪಗೊಂಡಿದ್ದ ಧನಂಜಯನನ್ನು ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಯಾವಾಗ ಧನಂಜಯ ಅಟ್ಟಾಡಿಸುವುದನ್ನು ನಿಲ್ಲಿಸಿತೋ  ಕಂಜನ್ ಆನೆ ಸಹಾ ನಿಂತುಕೊಂಡಿದೆ. ತಕ್ಷಣ ಕಂಜನ್ ಆನೆಯ‌ ಬಳಿ ತೆರಳಿದ ಮಾವುತ, ಕಂಜನ್ ಆನೆಯನ್ನು ಅರಮನೆ‌ ಒಳಗೆ ಕರೆ ತಂದಿದ್ದಾನೆ.   ಅರಣ್ಯ ಇಲಾಖೆ ಅಧಿಕಾರಿಗಳು ಮಾವುತರ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.