ಮನೆ ರಾಜ್ಯ ಮೈಸೂರು: ಸೆ.26 ರಿಂದ ಅಕ್ಟೋಬರ್ 9 ರವರೆಗೆ ದಸರಾ ರಜೆ

ಮೈಸೂರು: ಸೆ.26 ರಿಂದ ಅಕ್ಟೋಬರ್ 9 ರವರೆಗೆ ದಸರಾ ರಜೆ

0

ಮೈಸೂರು(Mysuru): ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ  ಜಿಲ್ಲೆಯ ಶಾಲೆಗಳಿಗೆ ಸೆಪ್ಟಂಬರ್ 26 ರಿಂದ ಅಕ್ಟೋಬರ್ 9ರವರೆಗೆ ದಸರಾ ರಜೆ ಘೋಷಿಸಲಾಗಿದೆ.

ಅಕ್ಟೋಬರ್ 2 ರಂದು ಮಹಾತ್ಮ ಗಾಂಧಿ ಜಯಂತಿ ಮತ್ತು ಅಕ್ಟೋಬರ್ 9 ರಂದು ವಾಲ್ಮೀಕಿ ಜಯಂತಿಯನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಆಚರಿಸುವ ಷರತ್ತಿನೊಂದಿಗೆ ಮೈಸೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಂದ ಆದೇಶ ಹೊರಡಿಸಲಾಗಿದೆ.