ಮನೆ ರಾಜ್ಯ ನಾಡಹಬ್ಬ ದಸರಾ: ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ

ನಾಡಹಬ್ಬ ದಸರಾ: ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ

0

ಮೈಸೂರು(Mysuru): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ದಸರಾ ವೇಳೆ ಕೆಲವು ದಿನಗಳಲ್ಲಿ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.

ಸೆ. 26 ರಂದು ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ನ ಪೂಜಾ ಕಾರ್ಯ ನಡೆಯುವ ಹಿನ್ನೆಲೆ  ಅಂದು ಬೆಳಿಗ್ಗೆ 10 ರಿಂದ 1.30 ಗಂಟೆ ತನಕ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.

ಅಕ್ಟೋಬರ್  4 ರಂದು ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಅವರಿಂದ ಆಯುಧ ಪೂಜಾ ಕಾರ್ಯಕ್ರಮ ನಡೆಯಲಿದ್ದು , ಈ ಹಿನ್ನೆಲೆಯಲ್ಲಿ ಅ.4 ರಂದು ಬೆಳಿಗ್ಗೆ 10 ರಿಂದ 1.30 ಗಂಟೆವರೆಗೆ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.

ಅ. 5 ರಂದು ಅರಮನೆಯಲ್ಲಿ ಯದುವೀರ್ ರಿಂದ  ವಿಜಯದಶಮಿಯ ಪೂಜಾ ಕೈಂಕರ್ಯ  ನಡೆಯಲಿದ್ದು,  ಇಡೀ ದಿನ ಮೈಸೂರು ಅರಮನೆಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಅಂತಿಮವಾಗಿ ಅಕ್ಟೋಬರ್ 20 ರಂದು ಸಿಂಹಾಸನ ವಿಸರ್ಜನೆ ನಡೆಯಲಿದ್ದು, ಅಂದು  ಮೈಸೂರು ಅರಮನೆಗೆ ಬೆಳಿಗ್ಗೆ 10 ರಿಂದ 1.30 ಗಂಟೆ ತನಕ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸಿ ಮೈಸೂರು ಅರಮನೆ ಮಂಡಳಿ ಆದೇಶ ಹೊರಡಿಸಿದೆ.

ಹಿಂದಿನ ಲೇಖನವೈದ್ಯನಾಥೇಶ್ವರ ದೇವಾಲಯ
ಮುಂದಿನ ಲೇಖನವಿಶ್ವವಿಖ್ಯಾತ ದಸರಾ: ಸೆ.20 ರಂದು ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ