ದ್ವಿಪಾದ ಕಂದರಾಸನಕ್ಕೆ ದ್ವಿಪಾದ ಶೀರ್ಷಾಸನ ಎಂಬ ಹೆಸರೂ ಇದೆ.
ಮಾಡುವ ಕ್ರಮ:
1) ಪ್ರಾರಂಭದಲ್ಲಿ ಯೋಗಾಭ್ಯಾಸಿಯೂ ತನ್ನ ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ, ಎದೆ ಎತ್ತಿ ನೆಲದ ಮೇಲೆ ಕುಳಿತುಕೊಳ‍್ಳಬೇಕು.
2) ಅನಂತರ ಯಾವುದಾದರೂ ಒಂದು ಕಾಲನ್ನು (ಯೋಗಾಸನ ಕ್ರ. 38ರಲ್ಲಿ ವಿವರಿಸಿದಂತೆ) ನಿಧಾನವಾಗಿ ನೆಲದಿಂದ ಮೇಲಕ್ಕೆ ಎತ್ತಿ, ಮಂಡಿಯ ಬಳಿ ಬಗ್ಗಿಸಿ, ಕುತ್ತಿಗೆಯ ಹಿಂಬದಿಯಲ್ಲಿಡಬೇಕು. ಈ ಸ್ಥಿತಿಯಲ್ಲಿ ಎರಡೂ ಕಾಲುಗಳು ಬೆನ್ನ ಮೇಲೆ ಒಂದನ್ನೊಂದು ಛೇದಿಸಿರುತ್ತವೆ ಹಾಗೂ ಕಾಲುಗಳ ಪಾದಗಳೆರಡೂ ಚಿತ್ರದಲ್ಲಿರುವಂತೆ ಕಾಣುತ್ತವೆ. ಈ ಸ್ಥಿತಿಯಲ್ಲಿ ಕುಳಿತುಕೊಳ್ಳುವುದು ಕಷ್ಟ. ನಿಧಾನವಾಗಿ ಸಮತೋಲನ ಪಡೆದನಂತರ ಕೈಗಳಿಂದ ನಮಸ್ಕಾರ ಮುದ್ರೆ ಮಾಡಬೇಕು ಈ ಸ್ಥಿತಿಯಲ್ಲಿ ಇಡೀ ಶರೀರದ ಭಾರವು ಕೇವಲ ಪೃಷ್ಠಭಾರದ ಮೇಲೆ ಬಿದ್ದಿರುತ್ತದೆ.
ಲಾಭಗಳು:
ದ್ವಿಪಾದ ಕಂದರಾಸನದ ಅಭ್ಯಾಸದಿಂದ ತೊಡೆಗಳು, ಕತ್ತು, ಸೊಂಟ ಬಲಗೊಳ್ಳುವವು. ಹೃದಯ – ಶ್ವಾಸಕೋಶಗಳು ಹೆಚ್ಚು ಸುದೃಢಗೊಳ್ಳುವವು. ಕಿಬ್ಬೊಟ್ಟೆಯ ಅನೇಕ ದೋಷಗಳು ದೂರವಾಗುವವು. ಮೂಳೆ ರೋಗದವರಿಗೆ ಈ ಆಸನ ಹೆಚ್ಚು ಉಪಕಾರಿ, ಆದರೆ ಅಂತಹವರು ಬಹಳ ಎಚ್ಚರಿಕೆಯಿಂದ ಅಭ್ಯಾಸ ಮಾಡಬೇಕಾಗುತ್ತದೆ.