ಮನೆ ದೇವಸ್ಥಾನ ಮಾಡಾಯಿಕಾವಿಲಮ್ಮ

ಮಾಡಾಯಿಕಾವಿಲಮ್ಮ

0

ಶಿವ ಮಹಾದೇವ :-

ಭಗವತಿ ಮಂಟಪಕ್ಕೆ ತಾಗಿಕೊಂಡು ಪಡುದಿಕ್ಕಿಗೆ ಶಿವನ ಗುಡಿ ಇದೆ. ಇಲ್ಲಿರುವುದು ಸ್ವಯಂಭೂಲಿಂಗವಾಗಿದೆ. ಪೂರ್ವಮುಖವಾಗಿರುವ ಶಿವನಿಗೆ ನಿತ್ಯ ಪೂಜೆಗಳಾಗಿ, ಬೆಳಗ್ಗೆ ಅಭಿಷೇಕ, ದೀಪ ಪ್ರಜ್ವಲನೆ, ಮಧ್ಯಾನ ಪೂಜೆ, ನೈವೇದ್ಯ, ಸಂಧ್ಯಾವೇಳೆಗೆ ದೀಪಾರಾಧನೆ ಪೂಜೆಗಳು ಸಲ್ಲುತ್ತದೆ. ಪ್ರದೋಷ ದಿನದಂದು ಮತ್ತು ಮಹಾಶಿವರಾತ್ರಿಗೆ ವಿಶೇಷ ಪೂಜೆಗಳಿರುತ್ತದೆ.

ಶಾಸ್ತಾರ :-

ಶಿವಗುಡಿಯ ಪಶ್ಚಿಮ-ಪಡು ದಿಕ್ಕಿನಲ್ಲಿ ಪೂರ್ವಭಿಮುಖವಾಗಿ ಶಾಸ್ತಾರ ಪುಟ್ಟ ಗುಡಿ ಇದೆ, ಇಲ್ಲಿ ಶಾಸ್ತಾರನ ಲಿಂಗ ಪ್ರತಿಷ್ಠೆ ಇದೆ. ಶಾಸ್ತಾರದೊಂದಿಗೆ ಪತ್ನಿಯರಾದ ಪೂರ್ಣ ಮತ್ತು ಸತ್ಯೆಯರಿಗೂ ಲಿಂಗ ಪ್ರತಿಷ್ಠೆಗಳಿಂದ ಪೂಜೆಗಳು ಸಲ್ಲುತ್ತದೆ. ಬೆಳಗ್ಗೆ ಅಭಿಷೇಕ, ದೀಪ ಪ್ರಜ್ವಲನೆ, ಮಧ್ಯಾನ ಪೂಜೆ, ದೀಪಾರಾಧನೆ ಪೂಜೆಗಳು ಸಲ್ಲುತ್ತದೆ. ಶಿವನ ದರ್ಶನದ ನಂತರ ಶಾಸ್ತಾರನ ದರ್ಶನ ಮಾಡುವುದಾಗಿದೆ.

ಕ್ಷೇತ್ರಪಾಲ :-

ಶಾಸ್ತಾರ ನ ಗುಡಿಯ ಎದುರಿಗೆ ದೇಗುಲ ಈಶಾನ್ಯ ಭಾಗದಲ್ಲಿ, ಪಶ್ಚಿಮ ಮುಖ ಮಾಡಿ ಕ್ಷೇತ್ರ ಪಾಲನ ಪಂಚಲೋಹ ನಿರ್ಮಿತ ಪ್ರತಿಷ್ಠೆಯ ಗುಡಿ ಇದೆ. ಶಾಸ್ತಾರನ ದರ್ಶನ ಮಾಡಿ ಕ್ಷೇತ್ರ ಪಾಲವನ ಕಾಣುವುದಾಗಿದೆ. ಇಲ್ಲಿ ಬೆಳಿಗ್ಗೆ ಅಭಿಷೇಕ, ದೀಪ ಪ್ರಜ್ವಲನೆ, ಅಭಿಷೇಕ, ಮಧ್ಯಾಹ್ನ ಪೂಜೆ, ಸಂಜೆಗೆ ದೀಪಾರಾಧನೆ- ಪೂಜೆಗಳಿರುತ್ತದೆ. ಶಾಸ್ತಾರ ದಕ್ಷಿಣದ ನಂತರ ಕ್ಷೇತ್ರ ಪಾಲನನ್ನ ಕಾಣುವುದಾಗಿದೆ.

ಸಪ್ತಮಾತೃಕೆಯರು :-

ಕ್ಷೇತ್ರ ಪಾಲನ ದರ್ಶನದ ನಂತರ ಪುನಃ ನಮಸ್ಕಾರ ಮಂಟಪದ ಎದುರಾಗಿ ಶಿವನ ಗುಡಿಯ ದಕ್ಷಿಣ ಭಾಗಕ್ಕೆ ಬಡಗು ಅಭಿಮುಖವಾಗಿ ಬ್ರಾಹ್ಮಣಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರವಿ, ಇಂದ್ರಾಣಿ ಚಾಮುಂಡಿ, ಎಂಬಿ ಸಪ್ತಮಾತೃಕೆಯಕರ ಕಡುಶರ್ಕರ ಪ್ರತಿಷ್ಠೆಗಳಿವೆ.       ಈ ಸಪ್ತ ಮಾತೃಕೆಯರಿಗೆ ತೆಂಗಿನಕಾಯಿ ಇಡುವ ಸೇವೆ ಇದೆ.

ವೀರಭದ್ರ :-

ಶಿವಗಣನಾದ ವೀರಭದ್ರನ ಕಡುಶರ್ಕರ ಪ್ರತಿಷ್ಠೆಯು ಸಪ್ತಮಾತೃಕೆಯರ ಗುಡಿಯಲ್ಲಿ ಪೂರ್ವದಿಕ್ಕಿನಲ್ಲಿ ಪಶ್ಚಿಮಮುಖ ಮಾಡಿ ಇರುವುದಾಗಿದೆ.

ಗಣಪತಿ :-

ಸಪ್ತಮಾತೃಕೆಯರ ಗುಡಿಯಲ್ಲಿ ಪಶ್ಚಿಮ ಭಾಗಕ್ಕೆ, ಪೂರ್ವಕ್ಕೆ ಮುಖ ಮಾಡಿ ಮಹಾಗಣಪತಿಯ ಕಡುಶರ್ಕರ ಪ್ರತಿಷ್ಠೆ ಇದೆ. ಸಪ್ತಮಾತೃಕೆ ಗುಡಿಯಲ್ಲಿರುವ ಈ ಎಲ್ಲಾ ಶಕ್ತಿಗಳಿಗೂ ಬೆಳಗ್ಗೆ ದೀಪ ಪ್ರಜ್ವಲನೆ, ಅಭಿಷೇಕ, ಮಧ್ಯಾಹ್ನ ಪೂಜೆ, ನೈವೇದ್ಯ, ಸಂಜೆಗೆ ದೀಪಾರಾಧನೆ ಪೂಜೆಗಳನ್ನು ನೆರವೇರಿಸಲಾಗುತ್ತದೆ.

ಭಗವತಿ ದೇವಿ :-

ಶಿವಮಹದೇವನ ಗುಡಿಯ ದಕ್ಷಿಣ ಭಾಗಕ್ಕೆ ಸಪ್ತಮಾತೃಕೆಯರ ಗುಡಿಗೆ ತಾಗಿಕೊಂಡು ಪಶ್ಚಿಮಕ್ಕೆ ಮುಖಮಾಡಿ ದೇವಿಯ ಕಡುಶರ್ಕರ ಪ್ರತಿಷ್ಠೆ ಇದೆ. ಭಗವತಿಯಬಿಂಬವು ಅಷ್ಟ ಬಾಹುಗಳಿದ್ದು ವಿವಿಧ ಆಯುಧ ದಾರಿಯಾಗಿ ಅಭಯವರದ ಹಸ್ತೆಯಾಗಿ ಶಿವ ದೇಹದಲ್ಲಿ ಕಾಲಿಟ್ಟು ಕುಳಿತುಕೊಂಡ ಭಂಗಿಯಲ್ಲಿದೆ. ಭಗವತಿಯ ಅರ್ಚನಾಬಿಂಬವು ಪ್ರತಿಷ್ಠಾ ಬಿಂಬದ ಎದುರಿಗಿದ್ದು ಪೂಜೆಗೊಳ್ಳುವುದಾಗಿದೆ. ಅಲ್ಲದೆ ಭಗವತಿಯ ಉತ್ಸವ ಬಲಿಮೂರ್ತಿ, ತಿರುವಾಯುಧ ಮತ್ತು ನಾದಂಗಂ (ಸ್ವರ್ಣಯುಧ)ವನ್ನು ಪ್ರತಿಷ್ಠೆಯ ಸನಿಹದಲ್ಲಿವುದಾಗಿದೆ. ದೊಡ್ಡದಾದ ಗುಡಿಯಲ್ಲಿ ಶಿವನು ಪ್ರಧಾನವಾಗಿ ಪೂಜೆಗೊಳುತ್ತಾನಾದರೂ ಕಿರಿದಾದ ಗುಡಿಯಲ್ಲಿ ಆರಾಧಿಸಲ್ಪಡುವ ಭಗವತಿಯ ಆರಾಧನೆ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.

ಬೇತಾಳ-ಬೈರವಿ-ಭೈರವ – ಮತ್ತಿತರ ಸಂಕಲ್ಪ ಸಾನಿಧ್ಯ ಶಕ್ತಿಗಳು :-

ಭಗವತಿಯ ವಾಹನವಾಗಿದ್ದ ಬೇತಾಳ, ಶತ್ರು ಸಂಹಾರ, ಶಕ್ತಿಗಳಾಗಿರುವ ಭೈರವ-ಭೈರವಿ ಎಂಬೀ ದೇವತೆಗಳಿಗೆ ಭಗವತಿಯ ಎಡ -ಬಲಭಾಗಗಳಲ್ಲಾಗಿ ಪಂಚಲೋಹ ಪ್ರತಿಷ್ಠೆಗಳಿವೆ. ಅಲ್ಲದೆ ಹಿಂಬದಿಯಲ್ಲಿ ಯೋಗಿನಿ, ಯೋಗೇಶ್ವರ್ ಇತ್ಯಾದಿ ಶಕ್ತಿಗಳ ಸಂಕಲ್ಪ ಸಾನಿಧ್ಯಗಳಿವೆ.

ದೇವಿಗೆ ಮತ್ತು ಇತರ ಈ ಎಲ್ಲಾ ದೇವತೆಗಳಿಗೆ ಬೆಳಗ್ಗೆ ದೀಪ ಪ್ರಜ್ವಲನೆ, ಅಭಿಷೇಕ ನಂತರ ಮಲರ್ (ಹೊದಳು) ನಿವೇದ್ಯ ಅರ್ಪಿಸುವುದಾಗಿದೆ. 11:00ಗೆ ಪೂಜೆ, ಆನಂತರ ಮಧ್ಯಾನ ಪೂಜೆ, ಅನ್ನನೇ ನಿವೇದ್ಯ ಅಲ್ಲದೆ ಕೋಳಿ, ಪಚ್ಚೆ ಹೆಸ್ರು, ತೆಂಗಿನ ಹೋಳುಗಳು, ಉಪ್ಪು ಕಾಳುಮೆಣಸು ಮಿಶ್ರಿತವಾದ ವಿಶಿಷ್ಟ ಪದಾರ್ಥವನ್ನು ನಿವೇದಿಸಲಾಗುತ್ತದೆ. ಸಂಧ್ಯಾಕಾಲಕ್ಕೆ ದೀಪಾರಾಧನೆ ಪೂಜೆಗಳಿವೆ. ಶಾಕ್ತೇಯರು ಭಗವತಿಯನ್ನು ತ್ರಿಗುಣಾತ್ಮಕಗಳೆಂದು ಕಲ್ಪಿಸಿ, ಕಪ್ಪು ಬಣ್ಣದ ಕಾಳಿ-  ಮಹಾಕಾಳಿ ಎಂದು, ಕೆಂಪು ಬಣ್ಣದ ಲಕ್ಷ್ಮಿ – ಮಹಾಲಕ್ಷ್ಮಿಯಾಗಿಯೂ, ಬಿಳಿ ಬಣ್ಣದ ಸರಸ್ವತಿ – ಮಹಾ ಸರಸ್ವತಿ ಎಂದು ಪೂಜಿಸುವುದಾಗಿದೆ. ಆದುದರಿಂದ ಇಲ್ಲಿ ದೇವಿ ಭಗವತಿಯು ನಿತ್ಯವೂ ಬೆಳಗೆ ಸರಸ್ವತಿಯಾಗಿ, ಮಧ್ಯಾಹ್ನ ಅನ್ನಪೂರ್ಣೇಶ್ವರಿಯಾಗಿ, ಸಂಧ್ಯೆಯಲ್ಲಿ ದುರ್ಗೆಯಾಗಿ, ಆರಾಧನೆ ಗೊಳ್ಳುವುದರಿಂದ ಭಕ್ತರ ಮರಣಾದಿ ದೋಷಗಳು ಪರಿಹಾರವಾಗಿ, ಶತ್ರುಗಳ ಸಂಹಾರವಾಗುವುದೊಡನೆ, ಭಕ್ತರ ಸಂಕಲ್ಪ ಇಷ್ಟಾರ್ಥಗಳು ನೆರವೇರುತ್ತದೆ ಎಂಬುದಕ್ಕೆ ಪ್ರಸಿದ್ಧಿಯಾಗಿದೆ. ಈ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ದೇವರುಗಳಿಗೆ ಮೂರು ಸುತ್ತು ಪ್ರದಕ್ಷಣೆ ಬಂದು ಪ್ರಸಾದ ಸ್ವೀಕರಿಸುವುದು ಕ್ರಮವಾಗಿದೆ. ಭಗವತಿಗೆ ಮಂಗಳವಾರ ಮತ್ತು ಶುಕ್ರವಾರಗಳಲ್ಲಿ ವಿಶೇಷ ಪೂಜೆಗಳು ಸಲ್ಲುತ್ತದೆ.

ದೇವಿಯ ಅಲಂಕಾರ :-

ಬೆಳಗಿನ ಪೂಜೆಯಾದ ನಂತರ ಭಗವತಿಯನ್ನು ಅವಳ ತಿರುವಾಭರಣಗಳಿಂದ ಮತ್ತು ಭಕ್ತರು ಅರ್ಪಿಸಿದ ಕೇಪುಳ ಹೂಗಳಿಂದ ಅಲಂಕರಿಸುವುದಾಗಿದೆ. ಅಲಂಕಾರ ವಿಗ್ರಹವು ಕಾಣುವವರಲ್ಲಿ ಭಯ-ಭಕ್ತಿಯನ್ನು ಮೂಡಿಸುತ್ತದೆ.

ಹಿಂದಿನ ಲೇಖನಜ್ಯೇಷ್ಠಾ- ನಕ್ಷತ್ರ
ಮುಂದಿನ ಲೇಖನನಾಯಿ ಕಡಿತ ಪ್ರಕರಣ: ಪ್ರತಿ ಹಲ್ಲಿನ ಗುರುತಿಗೆ 10 ಸಾವಿರ ಆರ್ಥಿಕ ನೆರವು ನೀಡಬೇಕು- ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್