ಮನೆ ಅಪರಾಧ ಇ ಖಾತೆ ಅಕ್ರಮ ಆರೋಪ: ಅಮಾನತುಗೊಂಡಿದ್ದ ಪಿಡಿಓ ಆತ್ಮಹತ್ಯೆ

ಇ ಖಾತೆ ಅಕ್ರಮ ಆರೋಪ: ಅಮಾನತುಗೊಂಡಿದ್ದ ಪಿಡಿಓ ಆತ್ಮಹತ್ಯೆ

0

ರಾಮನಗರ(Ramnagara): ಇ-ಖಾತೆ ಅಕ್ರಮ ಆರೋಪದ(E-Account Illegal Accusation) ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ(Suspended) ಬಿಡದಿ ಹೋಬಳಿಯ ಬೈರಮಂಗಲ ಗ್ರಾಮ ಪಂಚಾಯಿತಿ ಪಿಡಿಒ(PDO) ರವಿ(Ravi) ನೇಣುಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾರೆ.

ಕನಕಪುರ ತಾಲ್ಲೂಕಿನ ಕೊಳ್ಳಿಗನಹಳ್ಳಿಯ ನಿವಾಸದಲ್ಲಿ ಅವರ ಶವ ಪತ್ತೆಯಾಗಿದ್ದು, ಈ ಹಿಂದೆ ಹಾರೋಹಳ್ಳಿ, ಬೈರಮಂಗಲ ಸೇರಿದಂತೆ ವಿವಿಧೆಡೆ ಅಕ್ರಮವಾಗಿ ಇ-ಖಾತೆ ಮಾಡಿಕೊಟ್ಟ ಆರೋಪದ ಮೇಲೆ ಪ್ರಕರಣಗಳು ದಾಖಲಾಗಿದ್ದವು.

ಬೆಂಗಳೂರು ಸೈಬರ್ ಪೊಲೀಸರು ಕೆಲವು ತಿಂಗಳ ಹಿಂದೆ ಬೈರಮಂಗಲ ಗ್ರಾಪಂ ಕಚೇರಿ ಮೇಲೂ ದಾಳಿ ನಡೆಸಿ‌ ದಾಖಲೆ ಪರಿಶೀಲಿಸಿದ್ದರು. ಈ ಸಂದರ್ಭ ರವಿ ನಾಪತ್ತೆ ಆಗಿದ್ದರು.ಆರೋಪಗಳು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ರವಿ ಅವರನ್ನು ಜಿ.ಪಂ. ಸಿಇಒ ಇಕ್ರಂ ಸೇವೆಯಿಂದ ಅಮಾನತು‌ ಮಾಡಿದ್ದರು.