ಮನೆ ಕಾನೂನು ಸರ್ವೋಚ್ಚ ನ್ಯಾಯಾಲಯದ ಪ್ರತಿ ಪೀಠವು ದಿನಂಪ್ರತಿ 10 ಜಾಮೀನು, 10 ವರ್ಗಾವಣೆ ಮನವಿ ಆಲಿಸಲಿವೆ: ಸಿಜೆಐ...

ಸರ್ವೋಚ್ಚ ನ್ಯಾಯಾಲಯದ ಪ್ರತಿ ಪೀಠವು ದಿನಂಪ್ರತಿ 10 ಜಾಮೀನು, 10 ವರ್ಗಾವಣೆ ಮನವಿ ಆಲಿಸಲಿವೆ: ಸಿಜೆಐ ಚಂದ್ರಚೂಡ್

0

ಪೂರಕ ಪಟ್ಟಿಯಲ್ಲಿನ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡುವುದಕ್ಕಾಗಿ ಪ್ರತಿದಿನ ಸುಪ್ರೀಂ ಕೋರ್ಟ್’ನ ಪ್ರತಿ ಪೀಠವು ತಲಾ 10 ವರ್ಗಾವಣೆ ಮತ್ತು ಜಾಮೀನು ಅರ್ಜಿಗಳ ವಿಚಾರಣೆ ನಡೆಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಶುಕ್ರವಾರ ಹೇಳಿದ್ದಾರೆ.

ಈಚೆಗೆ ನಡೆದಿದ್ದ ಪೂರ್ಣ ನ್ಯಾಯಾಲಯದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಿಜೆಐ ಹೇಳಿದರು.

13 ಪೀಠಗಳು ಪ್ರತಿ ದಿನ 130 ಪ್ರಕರಣ ನಿರ್ಧರಿಸಲಿದ್ದು, ಒಂದು ವಾರಕ್ಕೆ 650 ಪ್ರಕರಣಗಳನ್ನು ತೀರ್ಮಾನಿಸಲಿವೆ. ಇಲ್ಲಿ ಜಾಮೀನು ಪ್ರಕರಣಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಪ್ರಸ್ತುತ ಸುಪ್ರೀಂ ಕೋರ್ಟ್ ಮುಂದೆ ಪ್ರಸ್ತುತ ಸುಮಾರು 13 ಸಾವಿರ ವರ್ಗಾವಣೆ ಪ್ರಕರಣಗಳಿವೆ. ಇಲ್ಲಿ ಜಾಮೀನು ಪ್ರಕರಣಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಜಾಮೀನು ಅರ್ಜಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಸಿಜೆಐ ಹೇಳಿದ್ದು, “ನ್ಯಾಯಮೂರ್ತಿಗಳು ಮಧ್ಯರಾತ್ರಿ 12ರವರೆಗೆ ಮತ್ತು ಮುಂಜಾವಿನಿಂದಲೇ ಪ್ರಕರಣಗಳನ್ನು ಓದುತ್ತಿರುವುದಾಗಿ ತಿಳಿಸಿದ್ದು ಈಗ ಮತ್ತೆ ಹೆಚ್ಚುವರಿಯಾಗಿ ಹತ್ತು ಪ್ರಕರಣಗಳನ್ನು ಆಲಿಸಬೇಕಿದೆ ಎಂದಿದ್ದಾರೆ. ಹಾಗಾಗಿ ಪೂರಕ ಅರ್ಜಿಗಳನ್ನು ನೀಡದಂತೆ ಕೋರಿಕೊಂಡಿದ್ದಾರೆ. ಈ ಕಾರಣಕ್ಕಾಗಿ ನಾನು ಪೂರಕ ಪಟ್ಟಿಯನ್ನು ಕಡಿತ ಮಾಡಲು ಯತ್ನಿಸುತ್ತಿದ್ದೇನೆ” ಎಂದು ಸಿಜೆಐ ಹೇಳಿದ್ದಾರೆ. ಎಲ್ಲಾ ಪೀಠಗಳು 10 ಜಾಮೀನು ಅರ್ಜಿಗಳ ವಿಚಾರಣೆ ನಡೆಸಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಹಿಂದಿನ ಲೇಖನಮುಂದಿನ ಚುನಾವಣೆಯಲ್ಲಿ ಒಂದೇ ಕ್ಷೇತ್ರದಿಂದ ಸ್ಪರ್ಧೆ: ಸಿದ್ದರಾಮಯ್ಯ
ಮುಂದಿನ ಲೇಖನಕಿತ್ತಳೆ ಹಣ್ಣಿನ ರಸದಲ್ಲಿದೆ ಉತ್ತಮ ಆರೋಗ್ಯ ಪ್ರಯೋಜನ