ಮನೆ ರಾಜ್ಯ ಶಿರಾಳಕೊಪ್ಪದಲ್ಲಿ  ಭೂಮಿ ಕಂಪಿಸಿದ ಅನುಭವ

ಶಿರಾಳಕೊಪ್ಪದಲ್ಲಿ  ಭೂಮಿ ಕಂಪಿಸಿದ ಅನುಭವ

0

ಶಿವಮೊಗ್ಗ(Shivamogga): ಶಿರಾಳಕೊಪ್ಪ ಸುತ್ತಮುತ್ತಲು ಭೂಮಿ ಕಂಪಿಸಿದ ಅನುಭವವಾಗಿದ್ದು, ಯಾವುದೇ, ಹಾನಿಯಾದ ಬಗ್ಗೆ ಇನ್ನೂ ವರದಿಯಾಗಿಲ್ಲ.

ಬೆಳಗ್ಗಿನ ಜಾವ 3.55 ರ ಸಮಯದಲ್ಲಿ ಎರಡು ಸಾರಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ.  ಮೊದಲ ಸಲ ಜೋರಾಗಿ ಭೂಮಿ ಕಂಪಿಸಿದ ಅನುಭವ ಆದರೇ, ಎರಡನೇ ಸಲ ಕಂಪಿಸಿದ ಪ್ರಮಾಣ ಕಡಿಮೆ ಎನ್ನಿಸಿದೆ.

4.1 ರ ಪ್ರಮಾಣದಲ್ಲಿ ಭೂಮಿ ಹಂಪಿಸಿದೆ, ಶಿರಾಳಕೊಪ್ಪ ಪಟ್ಟಣದ 3 ಕಿ.ಮೀ ಸುತ್ತಳತೆಯಲ್ಲಿ ಭೂಕಂಪನ ಕೇಂದ್ರಿತವಾಗಿದೆ ಎಂದೂ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರಿದಾಡುತ್ತಿದೆ.

ಈ ಬಗ್ಗೆ ಭೂಗರ್ಭ ಶಾಸ್ತ್ರಜ್ಞರು ಸ್ಪಷ್ಟನೆ ನೀಡಬೇಕಾಗಿದೆ.

ಈ ಬಗ್ಗೆ ಬಳ್ಳಿಗಾವಿ ಕೇದಾರೇಶ್ವರ ದೇವಸ್ಥಾನದ ಕಾವಲುಗಾರ ಚಂದ್ರು ಮಾತನಾಡಿ, ತಾವೂ ಇಬ್ಬರು ರಾತ್ರಿ ದೇವಸ್ಥಾನದ ಕಾವಲು ಕಾಯುತ್ತಿದ್ದೆವು, ಬೆಳಗ್ಗಿನ ಜಾವ ಇಡೀ ದೇವಸ್ಥಾನವೇ ಅಲುಗಾಡಿದ ಅನುಭವ ಆಯಿತು ಎಂದರು.

ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮಾತನಾಡಿ, ಭೂ ಕಂಪನ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಶಿಕಾರಿಪುರ ತಹಶೀಲ್ದಾರ್ ಅವರನ್ನು ಶಿರಾಳಕೊಪ್ಪಕ್ಕೆ ಕಳುಹಿಸಿದ್ದೇನೆ. ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಉಸ್ತುವಾರಿ ಕೋಶಕ್ಕೂ ಮಾಹಿತಿ ಕೇಳಲಾಗಿದೆ ಎಂದು ತಿಳಿಸಿದರು.