ಮನೆ ಸುದ್ದಿ ಜಾಲ ಜಮ್ಮು-ಕಾಶ್ಮೀರದಲ್ಲಿ ಲಘು ಭೂಕಂಪ

ಜಮ್ಮು-ಕಾಶ್ಮೀರದಲ್ಲಿ ಲಘು ಭೂಕಂಪ

0

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ ಲಘು ಭೂಕಂಪ ಸಂಭವಿಸಿದ್ದು, ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ.

ಕಣಿವೆಯ ಪ್ರಸಿದ್ಧ ಪ್ರವಾಸಿ ತಾಣ ಗುಲ್‌ಮಾರ್ಗ್‌,ಬಂಡಿಪೋರಾ, ಸೋಪುರೆ, ಗಂದರ್‌ಬಲ್‌, ರಾಜೌರಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಂಪನದ ಅನುಭವ ಉಂಟಾಗಿದ್ದು, ಗುರುವಾರ ಮಧ್ಯಾಹ್ನ 12.25ಕ್ಕೆ ಭೂಕಂಪ ಸಂಭವಿಸಿದೆ.

ಪಾಕಿಸ್ತಾನದ ಗಿಲ್ಗಿಟ್‌ ಬಾಲಿಸ್ತಾನ್‌ ಎಂಬ ಪ್ರದೇಶದ 20 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ. ಭೂಕಂಪನದ ತೀವ್ರತೆಯು ರಿಕ್ಟರ್‌ ಮಾಪಕದಲ್ಲಿ 3.8 ದಾಖಲಾಗಿದೆ. ಭೂಕಂಪನದ ಕೇಂದ್ರಬಿಂದು ಉತ್ತರ ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣ ಗುಲ್‌ಮಾರ್ಗ್‌ನಿಂದ 96 ಕಿ.ಮೀ ದೂರದಲ್ಲಿ ಕಂಡು ಬಂದಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಟ್ವೀಟ್‌ ಮಾಡಿದೆ.

ಹಿಂದಿನ ಲೇಖನನಿರುದ್ಯೋಗದಿಂದ 9140 ಮಂದಿ ಆತ್ಮಹತ್ಯೆ
ಮುಂದಿನ ಲೇಖನಶೇ.40 ರಷ್ಟು ಕಮೀಷನ್ ಪಡೆಯುತ್ತಿರುವುದೇ ಕಳಪೆ ಕಾಮಗಾರಿಗೆ ಕಾರಣ