ಮನೆ ಆರೋಗ್ಯ ಸಿಪ್ಪೆ ಸಮೇತ ಸೀಬೆ ಹಣ್ಣನ್ನು ತಿನ್ನಿ, ಶುಗರ್ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತೆ

ಸಿಪ್ಪೆ ಸಮೇತ ಸೀಬೆ ಹಣ್ಣನ್ನು ತಿನ್ನಿ, ಶುಗರ್ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತೆ

0

ನಮಗೆಲ್ಲಾ ಗೊತ್ತೇ ಇರುವ ಹಾಗೆ, ಪ್ರಕೃತಿದತ್ತವಾಗಿ ಸಿಗುವಂತಹ ಹಲವಾರು ಬಗೆಯ ಹಣ್ಣುಗಳು ತರಕಾರಿಗಳನ್ನು ಆಹಾರ ಕ್ರಮದಲ್ಲಿ ಬಳಸಿ ಕೊಂಡರೆ, ಆರೋಗ್ಯಕ್ಕೆ ಸಾಕಷ್ಟು ಬಗೆಯ ಪ್ರಯೋಜನಗಳು ಸಿಗುತ್ತದೆ, ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ, ಸೀಬೆ ಹಣ್ಣು. ಹೌದು, ತನ್ನಲ್ಲಿ ಹಲವಾರು ಬಗೆಯ ಪೌಷ್ಟಿಕ ಸತ್ವಗಳನ್ನು ಒಳ ಗೊಂಡಿರುವ ಈ ಹಣ್ಣು, ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವುದು, ಈಗಾಗಲೇ ಹಲವು ಬಾರಿ ಸಾಬೀತಾಗಿದೆ.

ಪ್ರಮುಖವಾಗಿ ಈ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಇ, ಮೆಗ್ನೀಷಿಯಂ, ಪೊಟ್ಯಾಶಿಯಂ, ನಾರಿ ನಾಂಶ, ಮ್ಯಾಂಗನೀಸ್ ಮತ್ತು ಫಾಸ್ಪರಸ್ ಅಂಶದ ಜೊತೆಗೆ ಇನ್ನಿತರ ಆಂಟಿ ಆಕ್ಸಿಡೆಂಟ್ ಅಂಶಗಳು ಕೂಡ ಕಂಡು ಬರುವುದರಿಂದ, ಹಲವಾರು ಕಾಯಿಲೆಗಳನ್ನು ನಮ್ಮಿಂದ ದೂರವಿರಲು ಸಹಾಯ ಮಾಡುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಸೀಬೆ ಹಣ್ಣಿನ ಸಿಪ್ಪೆಯಲ್ಲಿ ಸಿಗುವ ಆರೋಗ್ಯದ ಲಾಭಗಳ ಬಗ್ಗೆ ನೋಡೋಣ…

ಡಯಾಬಿಟಿಸ್ ಸೀಬೆಕಾಯಿ ಸಿಪ್ಪೆ ನಡುವಿನ ನಂಟು!

• ಡಯಾಬಿಟಿಸ್ ಅಥವಾ ಮಧುಮೇಹ ಎನ್ನುವುದು, ಸೈಲೆಂಟ್ ಕಿಲ್ಲರ್ ಕಾಯಿಲೆ ಎನ್ನುವ ವಿಚಾರ ನಮಗೆಲ್ಲಾ ಗೊತ್ತೇ ಇದೆ.

• ಒಂದು ವೇಳೆ ಈ ಕಾಯಿಲೆಗೆ ಸರಿಯಾಗಿ ಚಿಕಿತ್ಸೆಯನ್ನು ನೀಡದೇ ಇದ್ದರೆ, ಹಾಗೂ ಕಟ್ಟುನಿಟ್ಟಿನ ಆಹಾರ ಪದ್ಧತಿ ಅನುಸರಿಸ ದಿದ್ದರೆ ಬಹುಅಂಗಾಂಗಗಳ ವೈಫಲ್ಯಕ್ಕೆ ಕಾರಣವಾಗಬಹುದು.

• ಪ್ರಮುಖವಾಗಿ ಹೃದಯ ಮತ್ತು ಕಿಡ್ನಿಗಳಿಗೆ ತೊಂದರೆ ಗಳು ಕಾಣಿಸಿಕೊಳ್ಳಬಹುದು.

• ಹೀಗಾಗಿ ಈ ಕಾಯಿಲೆಯಿಂದ ಬಳಲುತ್ತಿರುವವರು ಕಟ್ಟು ನಿಟ್ಟಿನ ಆಹಾರ ಪದ್ಧತಿ, ವೈದ್ಯರು ಸೂಚಿಸಿರುವ ಔಷಧಿ ಗಳನ್ನು ತೆಗೆದು ಕೊಳ್ಳುವುದರ ಜೊತೆಗೆ, ಮಿತವಾಗಿ ಸೀಬೆ ಹಣ್ಣನ್ನು ಸಿಪ್ಪೆ ಸಮೇತ ತಿನ್ನುವ ಅಭ್ಯಾಸ ಮಾಡಿ ಕೊಂಡರೆ ಬಹಳ ಒಳ್ಳೆಯದು.

ಮಧುಮೇಹ ವಿರೋಧಿ ಗುಣಲಕ್ಷಣಗಳು

• ಪ್ರಮುಖವಾಗಿ ಸೀಬೆಕಾಯಿ ಸಿಪ್ಪೆಯಲ್ಲಿ, ಮಧುಮೇಹ ವಿರೋಧಿ ಗುಣಲಕ್ಷಣಗಳು ಕಂಡು ಬರುವುದರಿಂದ, ರಕ್ತದಲ್ಲಿ ಗ್ಲುಕೋಸ್ ಮಟ್ಟ ಏರಿಕೆ ಆಗದಂತೆ ತಡೆ ಯುತ್ತದೆ.

• ತಜ್ಞರು ಹೇಳುವ ಪ್ರಕಾರ ಟೈಪ್ 2 ಮಧುಮೇಹ ಇರುವ ರೋಗಿಗಳು, ಆದಷ್ಟು ಸಿಪ್ಪೆ ಸಮೇತ ಈ ಹಣ್ಣು ಸೇವಿಸಿ ದರೆ, ತುಂಬಾನೇ ಪ್ರಯೋಜನಕಾರಿಯಂತೆ.

ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕೂಡ ಕಡಿಮೆ ಮಾಡುತ್ತದೆ

• ದೇಹದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಜಾಸ್ತಿ ಗೊಂಡರೆ, ಮೊತ್ತಮೊದಲು ಹೃದಯದ ಕಾರ್ಯ ಚಟು ವಟಿಕೆಯಲ್ಲಿ ಸಮಸ್ಯೆಗಳು ಕಂಡುಬರುತ್ತದೆ.

• ಇದರಿಂದಾಗಿ ಅಂಗಾಂಗಳಿಗೆ ಸರಿಯಾಗಿ ರಕ್ತಪರಿಚಲನೆ ಸರಿಯಾಗಿ ನಡೆಯದೇ, ಯಾವುದೇ ಸಂದರ್ಭದಲ್ಲಿ ರಕ್ತದೊತ್ತಡ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಿ ರುತ್ತದೆ.

• ಇದರಿಂದ ಹೃದಯಾಘಾತ ಅಥವಾ ಪಾರ್ಶ್ವ ವಾಯು ಸಮಸ್ಯೆ ಎದುರಾಗಬಹುದು. ಹೀಗಾಗಿ ಈ ಎಲ್ಲಾ ಸಮಸ್ಯೆ ಗಳಿಂದ ದೂರ ಇರಬೇಕೆಂದರೆ, ಕೆಟ್ಟ ಕೊಲೆಸ್ಟ್ರಾಲ್ ಅಂಶ ಕಡಿಮೆ ಮಾಡುವ ಆಹಾರಗಳನ್ನು ಸೇವನೆ ಮಾಡ ಬೇಕು. ಇದ ಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ, ಸೀಬೆಹಣ್ಣು.

ಕೆಟ್ಟ ಕೊಲೆಸ್ಟ್ರಾಲ್ ದೂರ ಮಾಡುತ್ತೆ!

ಹೌದು ಸೀಬೆಹಣ್ಣಿನ ಸಿಪ್ಪೆಯಲ್ಲಿ ಮಧುಮೇಹ ವಿರೋಧಿ ಗುಣಗಳು ಇರುವ ಹಾಗೆ, ರಕ್ತದಲ್ಲಿ ಕಂಡುಬರುವ ಕೆಟ್ಟ ಕೊಲೆ ಸ್ಟ್ರಾಲ್ ಅಂಶಗಳನ್ನು ದೂರ ಮಾಡುವ ಗುಣ ಲಕ್ಷಣಗಳು ಇವೆ ಈ ಹಣ್ಣಿನ ಸಿಪ್ಪೆಯಲ್ಲಿ ಕಂಡು ಬರುತ್ತದೆ.

ದೇಹದ ಲಿವರ್ ಆರೋಗ್ಯಕ್ಕೂ ಒಳ್ಳೆಯದು…

• ಒಂದು ಸಂಶೋಧನೆಗಳ ಪ್ರಕಾರ, ಸೀಬೆಹಣ್ಣನ್ನು ಸಿಪ್ಪೆ ಸಮೇತ ತಿನ್ನುವುದರಿಂದ, ನಮ್ಮ ದೇಹದ ಪ್ರಮುಖ ಅಂಗ ವಾದ ಲಿವರ್ ಅಥವಾ ಯಕೃತ್ ಭಾಗಕ್ಕೆ ಮುಂದಿನ ದಿನ ಗಳಲ್ಲಿ ಆರೋಗ್ಯ ಸಮಸ್ಯೆಗಳು ಬರದೇ ಇರುವ ಹಾಗೆ ನೋಡಿಕೊಳ್ಳುವ ಎಲ್ಲಾ ಗುಣಲಕ್ಷಣಗಳು ಕೂಡ ಈ ಹಣ್ಣಿನಲ್ಲಿ ಕಂಡು ಬರುತ್ತದೆ.

• ನೋಡಿ ಇಷ್ಟೆಲ್ಲಾ ಗುಣಗಳು ಹೊಂದಿರುವ, ಸೀಬೆ ಹಣ್ಣನ್ನು, ಇನ್ನು ಮುಂದೆಯಾದರೂ ಸಿಪ್ಪೆ ಸಮೇತ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಕೂಡ ತಿನ್ನುವಾಗ ಅದರ ಸಿಪ್ಪೆಯನ್ನು ತೆಗೆದು ಹಾಕ ಬೇಡಿ.

• ಅದರ ಬದಲು ನೀರಿನಲ್ಲಿ ಎರಡು ಮೂರು ಬಾರಿ ಚೆನ್ನಾಗಿ ತೊಳೆದು, ಇದರ ಮೇಲೆ ಅಂಟಿರುವ ರಾಸಾಯನಿಕ ಅಂಶಗಳನ್ನು ಸ್ವಚ್ಛ ಮಾಡಿ ಸೇವನೆ ಮಾಡಿ.

ಹಿಂದಿನ ಲೇಖನಆಪರೇಷನ್‌ ಕಮಲದ ಅನೈತಿಕ ದಾರಿಯಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ: ಸಿದ್ದರಾಮಯ್ಯ
ಮುಂದಿನ ಲೇಖನಬೆಂಗಳೂರು: ಮನೆಯಲ್ಲಿ ಅಗ್ನಿ ಅವಘಡ- ಮಹಿಳೆ ಸಜೀವ ದಹನ