ಮನೆ ಆರೋಗ್ಯ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾಗಿದ್ದರೆ ಈ ಆಹಾರಗಳನ್ನು ಸೇವಿಸಿ

ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾಗಿದ್ದರೆ ಈ ಆಹಾರಗಳನ್ನು ಸೇವಿಸಿ

0

ಮನುಷ್ಯನಿಗೆ ಅಥವಾ ಯಾವುದೇ ಪ್ರಾಣಿ ಸಂಕುಲದ ದೇಹದಲ್ಲಿ ಹರಿಯುವ ಕೆಂಪು ರಕ್ತದಲ್ಲಿ ಕಂಡುಬರುವ ಒಂದು ವಿಶೇಷವಾದ ಅಂಶ ಎಂದರೆ ಅದು ಹಿಮೋ ಗ್ಲೋಬಿನ್. ಒಂದು ವೇಳೆ ಹಿಮೋಗ್ಲೋಬಿನ್ ಮಟ್ಟದಲ್ಲಿ ಏರುಪೇರಾದರೆ ಅಥವಾ ಕಡಿಮೆ ಆಗುತ್ತಾ ಹೋದರೆ, ಆರೋಗ್ಯದಲ್ಲಿ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.

Join Our Whatsapp Group

ಹೀಗಾಗಿ ಹಿಮೋಗ್ಲೋಬಿನ್ ಅಂಶ ಕಡಿಮೆ ಇರುವವರು, ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಕಬ್ಬಿಣಾಂಶ ಹಾಗೂ ವಿಟಮಿನ್ಸ್ ಅಂಶ ಹೇರಳವಾಗಿ ಕಂಡು ಬರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು

• ಒಬ್ಬ ಪುರುಷರಿಗೆ ಇರಬೇಕಾದ ಸಾಮಾನ್ಯ ಹಿಮೋಗ್ಲೋಬಿನ್ ಮಟ್ಟ ಎಂದರೆ 1dc (ಡೆಸಿಲಿಟರ್) ಲೀಟರ್‪ಗೆ 13.2 ರಿಂದ 16.6 ಗ್ರಾಂ ಹಾಗೂ ಮಹಿಳೆಯರಿಗೆ, ಪ್ರತಿ 1dc (ಡೆಸಿಲಿಟರ್) 11.6 ರಿಂದ 15 ಗ್ರಾಂ ಇರಬೇಕು.

• ಆದರೆ ಇದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ, ವ್ಯಕ್ತಿಯಿಂದ-ವ್ಯಕ್ತಿಗೆ ಹಿಮೊಗ್ಲೋಬಿನ್ ಮಟ್ಟ ಬೇರೆ ಬೇರೆಯಾಗಿರುತ್ತದೆ. ಹಾಗಾದ್ರೆ ಹಿಮೋ ಗ್ಲೋಬಿನ್ ಮಟ್ಟ ಉತ್ತಮವಾಗಿಟ್ಟುಕೊಳ್ಳಲು, ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಯಾವೆಲ್ಲಾ ಆಹಾರ ಪದಾರ್ಥಗಳನ್ನು ಸೇರಿಸಿಕೊಳ್ಳಬೇಕು.

ಮೂರು-ನಾಲ್ಕು ಖರ್ಜೂರ ತಿನ್ನಿ!

• ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಿ, ರಕ್ತಹೀನತೆ ಸಮಸ್ಯೆಯನ್ನು ದೂರ ಮಾಡುವುದೇ ಕಬ್ಬಿಣಾಂಶ ಇರುವ ಆಹಾರಗಳು. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಖರ್ಜೂರ!

• ಹೌದು ತನ್ನಲ್ಲಿ ನೈಸರ್ಗಿಕ ಸಿಹಿ ಅಂಶವನ್ನು ಒಳಗೊಂಡಿರುವ ಖರ್ಜೂರ, ತನ್ನಲ್ಲಿ ತ 7.3 ಮಿಲಿ ಗ್ರಾಂನಷ್ಟು ಕಬ್ಬಿಣದ ಅಂಶ ವನ್ನು ಒಳಗೊಂಡಿರುವುದರಿಂದ, ದೇಹದಲ್ಲಿ ಹಿಮೋ ಗ್ಲೋಬಿನ್ ಮಟ್ಟವನ್ನು ನೈಸರ್ಗಿಕವಾಗಿ ಹೆಚ್ಚಿಸಲು ನೆರವಾಗುತ್ತದೆ. ಹೀಗಾಗಿ ಪ್ರತಿದಿನ ಮೂರ- ನಾಲ್ಕು ಹಸಿ ಖರ್ಜೂರಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ.

ಕಬ್ಬಿಣಾಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಿ

• ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ ಆಗಿದೆ, ಎಂದು ವೈದ್ಯರು ಹೇಳಿದರೆ, ದೈನಂದಿನ ಆಹಾರ ಪದ್ಧತಿಯಲ್ಲಿ ಕಬ್ಬಿಣ ದಾಂಶ ಹೆಚ್ಚಿನ ಪ್ರಮಾಣದಲ್ಲಿ ಸಿಗುವ ಆಹಾರ ಪದಾರ್ಥಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

• ಉದಾಹರಣೆಗೆ ಪಾಲಕ್ ಸೊಪ್ಪು, ಹರಿವೆ ಸೊಪ್ಪು, ಮೆಂತೆ ಸೊಪ್ಪು, ಕಾಳುಗಳಾದ ಹೆಸರುಬೇಳೆ, ತೊಗರಿಬೇಳೆ, ಉದ್ದಿನಬೇಳೆ, ಕಡಲೆಕಾಳು ಗಳು, ಇಂತಹ ಆಹಾರ ಪದಾರ್ಥಗಳನ್ನು, ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಿ

ನೆನೆಸಿಟ್ಟ ಒಣದ್ರಾಕ್ಷಿ ಸೇವಿಸಿ

• ವರ್ಷಕ್ಕೆ ಎರಡು-ಮೂರು ಬಾರಿ ಬರುವ ವಿಶೇಷ ಹಬ್ಬ ಹರಿ ದಿನಗಳು ಅಥವಾ ಮನೆಯಲ್ಲಿಕಾರ್ಯ ಕ್ರಮಗಳು ಇದ್ದರೆ, ಇಲ್ಲಾಂದ್ರೆ ನೆಂಟರು ಬಂದರೆ, ಆಗ ಮಾತ್ರ ನಮಗೆ ಒಣದ್ರಾಕ್ಷಿ ಹಣ್ಣುಗಳು ನೆನಪಾಗುತ್ತವೆ!

• ಯಾಕೆಂದ್ರೆ ನಾವು ತಯಾರುಮಾಡುವ ಹೆಚ್ಚಿನ ಸಿಹಿ ಪದಾರ್ಥ ಗಳ ರುಚಿ ಹೆಚ್ಚಾಗಲು ಇವುಗಳನ್ನು ಬಳಕೆ ಮಾಡುತ್ತೇವೆ. ಉದಾ ಹರಣೆಗೆ ಪಾಯಸ ಮಾಡುವಾಗ, ಒಣ ದ್ರಾಕ್ಷಿಯನ್ನು ಕೂಡ ಹಾಕಿದರೆ, ದುಪ್ಪಟ್ಟು ಆಗುತ್ತದೆ.

• ಅದು ಇರಲಿ, ಆದರೆ ಒಣದ್ರಾಕ್ಷಿಯ ಪ್ರಯೋಜನಗಳು ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ಇದರ ಹೊರತಾಗಿ ಈ ಒಣಫಲದಲ್ಲಿ ಕಬ್ಬಿಣಾಂಶ, ತಾಮ್ರ ಪೊಟ್ಯಾಸಿಯಮ್ ಹಾಗೂ ಕ್ಯಾಲ್ಸಿಯಂ ಅಂಶಗಳು ಯಥೇಚ್ಛವಾಗಿ ಕಂಡುಬರುತ್ತದೆ.

• ಇವು ದೇಹದ ರೋಗ-ನಿರೋಧಕ ಶಕ್ತಿಯನ್ನು ಹೆಚ್ಚಿರುವುದು ಮಾತ್ರವಲ್ಲದೆ, ಕೆಂಪು ರಕ್ತ ಕಣಗಳ ಹರಿವನ್ನು ಸುಧಾರಿಸಿ, ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ. ಹೀಗಾಗಿ ಪ್ರತಿದಿನ ಮೂರು-ನಾಲ್ಕು ಒಣದ್ರಾಕ್ಷಿಯನ್ನು ನೀರಿ ನಲ್ಲಿ ನೆನೆಸಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ಒಳ್ಳೆಯದು.

ವಿಟಮಿನ್ ಸಿ ಅಂಶ ಹೆಚ್ಚಿರುವ ಹಣ್ಣು-ತರಕಾರಿಗಳನ್ನು ಸೇವಿಸಿ

• ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಹಣ್ಣುಗಳಾದ ಕಿತ್ತಳೆ ಮೂಸಂಬಿ, ಪಪ್ಪಾಯ, ಸೀಬೆ, ಸ್ಟ್ರಾಬೆರಿ, ದ್ರಾಕ್ಷಿ ಹಾಗೂ ಕಿವಿ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವ ಅಭ್ಯಾಸ ಮಾಡಿ ಕೊಂಡರೆ ಒಳ್ಳೆಯದು.

• ಇನ್ನು ವಿಟಮಿನ್ ಸಿ ಅಂಶ ಹೆಚ್ಚಾಗಿರುವ ತರಕಾರಿಳಾದ, ಪಾಲಕ್ ಸೊಪ್ಪು, ಬ್ರೊಕೋಲಿ, ಕ್ಯಾಪ್ಸಿಕಂ, ಎಲೆಕೋಸು, ಟೊಮೆಟೊ ಇತ್ಯಾದಿ ತರಕಾರಿಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

ರಾಗಿ ಮುದ್ದೆ ಸೇವಿಸಿ

• ರಾಗಿ ಸೇವನೆಯಿಂದ ರೋಗವಿಲ್ಲ ಎನ್ನುವ ಮಾತಿದೆ. ಮಕ್ಕಳಿಂದ ಹಿಡಿದು, ವಯಸ್ಸಾದವರಿಗೂ ಕೂಡ ರಾಗಿಮುದ್ದೆಯನ್ನು ತಿನ್ನಲು ಕೊಡುತ್ತಾರೆ. ಇದಕ್ಕೆ ಪ್ರಮುಖ ಕಾರಣ, ರಾಗಿಯಲ್ಲಿ ಸಿಗುವ ಪೌಷ್ಟಿಕ ಸತ್ವಗಳು.

• ವಿಶೇಷವಾಗಿ ರಾಗಿ ಬಳಸಿ ಮಾಡುವ ರಾಗಿಮುದ್ದೆ, ರಾಗಿ ದೋಸೆ, ಇಲ್ಲಾಂದ್ರೆ ಇತರ ರಾಗಿ ರೆಸಿಪಿಗಳನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವು ದರಿಂದ, ದೇಹದಲ್ಲಿ ಕಬ್ಬಿಣ ದಾಂಶವನ್ನು ಹೆಚ್ಚಿಸಿ, ರಕ್ತಹೀನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

• ಇವೆಲ್ಲಾದರ ಜೊತೆಗೆ, ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ಪೌಷ್ಟಿಕಾಂ ಶಗಳನ್ನು ಒಳಗೊಂಡಿರುವ ರಾಗಿ ಹಿಮೋಗ್ಲೋಬಿನ್ ಮಟ್ವ ವನ್ನು ಹೆಚ್ಚಿಸಲು ಬಹಳ ಒಳ್ಳೆಯದು.