ಉತ್ತಮ ಆರೋಗ್ಯಕ್ಕೆ ಯಾವುದೇ ಅಡ್ಡಪರಿಣಾಮಗಳಿಲ್ಲದೆ ದೇಹದ ತೂಕ ಇಳಿಸಿಕೊಂಡು ಸಮತೋಲನ ಕಾಯ್ದುಕೊಳ್ಳಬೇಕು ಎಂದು ಬಯಸುವವರಿಗೆ ಪ್ರೋಟೀನ್ ಭರಿತವಾಗಿರುವ ಉಪಾಹಾರದ ಬಗ್ಗೆ ಮಾಹಿತಿ ನೀಡಿದ್ದೇವೆ.
• ಹೆಸರು ಬೇಳೆಯ ಆರೋಗ್ಯ ಪ್ರಯೋಜನಗಳು ನಮಗೆಲ್ಲಾ ಗೊತ್ತೇ ಇದೆ. ಇದರಲ್ಲಿ ಅಗಾಧ ಪ್ರಮಾಣ ದಲ್ಲಿ ಸಿಗುವ ಪ್ರೋಟೀನ್ ಅಂಶ ಹಾಗೂ ಕರಗುವ ನಾರು ತೂಕ ಇಳಿಸುವವರಿಗೆ ತುಂಬಾನೇ ಸಹಾಯಕ್ಕೆ ನಿಲ್ಲುತ್ತದೆ.
• ಅಷ್ಟೇ ಅಲ್ಲದೆ ಈ ಬೇಳೆಕಾಳಿನಲ್ಲಿ ಯಥೇಚ್ಛವಾಗಿ ಪೊಟ್ಯಾಶಿಯಂ, ಮೆಗ್ನೀಸಿಯಮ್, ಕಬ್ಬಿಣ ಮತ್ತು ತಾಮ್ರದಂತಹ ಖನಿಜಗಳು, ಹಾಗೂ ಮೊದಲೇ ಹೇಳಿದ ಹಾಗೆ ಇದರಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್, ಕರಗುವ ನಾರು, ವಿಟಮಿನ್ ಬಿ 6, ಬಿ-ಕಾಂಪ್ಲೆಕ್ಸ್ ವಿಟಮಿನ್ಸ್ ಗಳು ಕೂಡ ಹೇರಳವಾಗಿ ಸಿಗುವುದರಿಂದ, ತೂಕ ಇಳಿಸುವವರಿಗೆ ತುಂಬಾನೇ ಸಹಾಯಕ ಈ ಹೆಸರುಬೇಳೆ ಕಾಳುಗಳು.
• ಇದರ ಸಂಪೂರ್ಣ ಲಾಭ ಪಡೆಯಬೇಕೆಂದರೆ ಬೆಳಗಿನ ಉಪಹಾರಕ್ಕೆ ಹೆಸರುಬೇಳೆ ದೋಸೆ ಮಾಡಿಕೊಂಡು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ಅದರಿಂದ ದೀರ್ಘಕಾಲ ತನಕ ಹೊಟ್ಟೆಯು ತುಂಬಿದಂತೆ ಇರುವುದು.
ಮೊಸರು ಮತ್ತು ಬೆರ್ರಿಗಳು
• ಹಾಲಿನ ಉಪ ಉತ್ಪನ್ನವಾದ ಮೊಸರಿನಲ್ಲಿ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು, ಸಿಗುವುದರ ಜೊತೆಗೆ ಯಥೇಚ್ಛವಾಗಿ ಪ್ರೋಟೀನ್ ಹಾಗೂ ಕಡಿಮೆ ಕ್ಯಾಲೋರಿ ಕಂಡು ಬರುತ್ತದೆ. ಹೀಗಾಗಿ ದೇಹದ ತೂಕವನ್ನು ಕೂಡ ಇಳಿಸುವಲ್ಲಿ ಮೊಸರಿನ ಪಾತ್ರ ಮರೆಯುವ ಹಾಗಿಲ್ಲ!
• ಇನ್ನು ಈ ಬಗ್ಗೆ ತಜ್ಞರು ಹೇಳುವುದೇನೆಂದರೆ ಬರೋಬ್ಬರಿ 100 ಗ್ರಾಂ ಮೊಸರಿನಲ್ಲಿ 10 ಗ್ರಾಂ ಪ್ರೋಟೀನ್ ಅಂಶ ಕಂಡು ಬರುತ್ತದೆಯಂತೆ. ಹೀಗಾಗಿ ಉಪಹಾರಕ್ಕೆ ಒಂದು ಮೊಸರನ್ನು ಬೀಜಗಳು ಮತ್ತು ಬೆರ್ರಿಗಳ ಜತೆಗೆ ಸೇರಿಸಿಕೊಂಡು ಸೇವಿಸಬಹುದು.
ಅಧಿಕ ಪ್ರೋಟೀನ್ ಅಂಶ ಇರುವ ಮೊಟ್ಟೆ
• ನೋಡಲು ಗುಂಡಗೆ ಹಾಗೂ ಸಣ್ಣದಾಗಿ ಕಂಡು ಬಂದರೂ ಕೂಡ ಮೊಟ್ಟೆಗಳಲ್ಲಿ ಅಗತ್ಯ ಕ್ಕಿಂತಲೂ ಹೆಚ್ಚಾದ ಪೌಷ್ಟಿಕ ಸತ್ವಗಳು ಅಡಗಿವೆ. ಇದಕ್ಕೆ ನಮ್ಮ ಹಿರಿಯರು ಹೇಳುವುದು ದಿನಕ್ಕೊಂದು ಬೇಯಿಸಿದ ಮೊಟ್ಟೆ ತಿನ್ನಿ, ವೈದ್ಯರಿಂದ ದೂರವಿರಿ ಎಂದು.
• ಇನ್ನು ವಿಶೇಷವಾಗಿ ಮೊಟ್ಟೆಯಲ್ಲಿ ಮೊಟ್ಟೆಯಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿ ಅಂಶ ಇರುವುದರ ಜೊತೆಗೆ ಮತ್ತು ಅಧಿಕ ಪ್ರಮಾಣದಲ್ಲಿ ಪ್ರೋಟೀನ್ ಅಂಶ ಸಿಗುವುದರಿಂದ, ದೇಹದ ತೂಕ ಇಳಿಸುವಲ್ಲಿ ತುಂಬಾನೇ ಸಹಾಯಕವಾಗಿದೆ.
• ಮೊಟ್ಟೆಯ ಇನ್ನೊಂದು ಲಾಭವೆಂದರೆ ಇದನ್ನು ಹಲವಾರು ವಿಧದಿಂದ ತಯಾರಿಸಿಕೊಳ್ಳಬಹುದು. ಮೊಟ್ಟೆಯನ್ನು ಬೇಯಿಸಿ ಅಥವಾ ಆಮ್ಲೆಟ್ ಮಾಡಿ ಕೊಂಡು ಕೂಡ ಸೇವಿಸಬಹುದು. ಆದರೆ ಮೊಟ್ಟೆ ಯಿಂದ ಹೆಚ್ಚಿನ ಲಾಭ ಪಡೆಯಬೇಕು ಎಂದರೆ ದಿನಕ್ಕೊಂದು ಮೊಟ್ಟೆ ಬೇಯಿಸಿ ಸೇವಿಸಬೇಕು.
ಪ್ರೋಟೀನ್ ಅಂಶ
ನೆನಪಿಡಿ: ಮೊಟ್ಟೆ ಅಂದಿನಿಂದ ಇಂದಿನವರೆಗೂ ಅತಿ ಹೆಚ್ಚಿನ ಪ್ರೋಟೀನ್ ಅಂಶವನ್ನು ಹೊಂದಿರುವ ಆಹಾರ ಪದಾರ್ಥವಾಗಿದೆ. ಬೇರೆ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಕೋಳಿ ಮೊಟ್ಟೆಯಲ್ಲಿ ತುಂಬಾ ಹೇರಳವಾದ ಪ್ರೋಟೀನ್ ಅಂಶಗಳು ಸಿಗುತ್ತವೆ. ಹೀಗಾಗಿ ದಿನಕ್ಕೆ ಒಂದು ಬೇಯಿಸಿದ ಮೊಟ್ಟೆ ಸೇವನೆ ಮಾಡುವುದರಿಂದ ಆರೋಗ್ಯ ವೃದ್ಧಿಯಾವುದು ಮಾತ್ರವಲ್ಲದೆ ದೇಹದ ತೂಕ ಕೂಡ ನಿಯಂತ್ರಣಕ್ಕೆ ಬರುತ್ತದೆ.
ರವೆ ಉಪ್ಪಿಟ್ಟು
• ಮನೆಯಲ್ಲಿ ಉಪ್ಪಿಟ್ಟು ಮಾಡಿದರೆ, ಮುಖ ಗಂಟು ಹಾಕಿಕೊಂಡು ಮಾರುದ್ದ ಓಡುವವರೇ ಜಾಸ್ತಿ! ಆದರೆ ನಿಮಗೆ ಗೊತ್ತಿರಲಿ, ಸಾಕಷ್ಟು ತರಕಾರಿಗಳು ಹಾಗೂ ಕಾಳುಗಳನ್ನು ಹಾಕಿ ಮಾಡಿರುವ ಉಪ್ಪಿಟ್ಟಿನಲ್ಲಿ, ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಪೌಷ್ಟಿಕ ಸತ್ವಗಳು ಸಿಗುವುದರ ಜೊತೆಗೆ ದೇಹದ ತೂಕವನ್ನು ಕೂಡ ಇಳಿಸಲು ನೆರವಾಗುತ್ತದೆ.
• ಕಡಿಮೆ ಎಣ್ಣೆ ಹಾಕಿ ತಯಾರು ಮಾಡಲು ಹೊರಟಿರುವ ಉಪ್ಪಿಟ್ಟಿಗೆ ಸಾಕಷ್ಟು ಸಮಯ ಬೇಕಿರುವುದಿಲ್ಲ. ಹಾಗಾಗಿ ತೂಕ ಇಳಿಸಲು ಬಯಸುವವರು ಬೆಳಗಿನ ಉಪಹಾರಕ್ಕೆ, ರವೆ ಉಪ್ಪಿಟ್ಟು ತಿನ್ನುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು.
• ಇನ್ನೂ ಒಂದೇ ಮಾತಿನಲ್ಲಿ ಹೇಳುವುದಾದರೆ, ಉಪ್ಪಿಟ್ಟಿಗೆ ಬಳಸುವ ಈ ರವೆಯಲ್ಲಿ ಕೊಲೆಸ್ಟ್ರಾಲ್ ಅಂಶ ತುಂಬಾನೇ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿ ಕಂಡು ಬರುವ ಪೌಷ್ಟಿಕಾಂಶ ಸತ್ವಗಳು ಹೊಟ್ಟೆ ಹಸಿವನ್ನು ದೂರ ಮಾಡಿ, ಪದೇ ಪದೇ ತಿನ್ನುವ ಅಭ್ಯಾಸಕ್ಕೆ ಕಡಿವಾಣ ಹಾಕುವುದರಿಂದ, ತೂಕ ಇಳಿಸುವವರಿಗೆ ಉಪ್ಪಿಟ್ಟು ಬಹಳ ಒಳ್ಳೆಯದು ಎಂದೇ ಹೇಳ ಬಹುದು. ಅಷ್ಟೇ ಯಾಕೆ ಉಪ್ಪಿಟ್ಟು ರೆಡಿ ಮಾಡುವಾಗ ಕೆಲವೊಂದು ಬಗೆಯ ತರಕಾರಿಗಳನ್ನು ಸೇರಿಸುವುದರಿಂದ ಆರೋಗ್ಯದ ಲಾಭಗಳು ಕೂಡ ಸಿಗುತ್ತದೆ.