ಮನೆ ಸುದ್ದಿ ಜಾಲ ಬನ್ನೇರುಘಟ್ಟ ಮೃಗಾಲಯದಲ್ಲಿ ಮೂರು ತಿಂಗಳಲ್ಲಿ 3 ಹುಲಿ ಸಾವು: ಸೋಂಕು ಹರಡಿರುವ ಶಂಕೆ

ಬನ್ನೇರುಘಟ್ಟ ಮೃಗಾಲಯದಲ್ಲಿ ಮೂರು ತಿಂಗಳಲ್ಲಿ 3 ಹುಲಿ ಸಾವು: ಸೋಂಕು ಹರಡಿರುವ ಶಂಕೆ

0

ಆನೇಕಲ್(Anekal):  ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಮೂರು ತಿಂಗಳಲ್ಲಿ ಮೂರು ಹುಲಿಗಳು ಸಾವನ್ನಪ್ಪಿವೆ.

ಮೃಗಾಲಯದಲ್ಲಿನ ಬೆಂಗಾಲ್ ಟೈಗರ್​ಗಳಿಗೆ ವಿಚಿತ್ರ ಸೋಂಕು ತಗುಲಿದ್ದು, ಬ್ಯಾರೆಕ್ ಒಳಗಡೆ ಹರಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಇತರ ಹುಲಿಗಳಿಗೂ ಸೋಂಕು ಹರಡುವ ಭೀತಿ ಎದುರಾಗಿದೆ.

ಮೂರು ವರ್ಷ ಕಿರಣ್, ಐದು ವರ್ಷದ ಶಿವು ಸೇರಿದಂತೆ ಒಟ್ಟು ಮೂರು ಹುಲಿಗಳು ಕಳೆದ ಮೂರು ತಿಂಗಳಲ್ಲಿ ಸಾವನ್ನಪ್ಪಿವೆ.
ಸದ್ಯ ಹುಲಿಗಳ ಸಾವಿನ ಪರಿಣಾಮ ದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿದೆ. ಹುಲಿಗಳ ಆರೋಗ್ಯಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗುತ್ತದೆ. ಹಲವು ಗಣ್ಯ ವ್ಯಕ್ತಿಗಳು ಕೆಲವೊಂದು ಹುಲಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಆದರೆ ಹುಲಿಗಳ ಸಾವುಗಳನ್ನು ನೋಡಿದಾಗ ಹುಲಿಗಳಿಗೆ ಮಾಡಬೇಕಾದ ವ್ಯವಸ್ಥೆ ಕುಂಠಿತವಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹೊಟ್ಟೆ ನೋವು, ಅಜೀರ್ಣ, ಮಲಬದ್ಧತೆಯಿಂದ ನರಳಿದ್ದ ಹುಲಿಗಳ ಆರೋಗ್ಯದ ಬಗ್ಗೆ ಪಾರ್ಕ್ ಆಡಳಿತ ಮಂಡಳಿ ಅಷ್ಟಾಗಿ ತಲೆ ಕೆಡಿಸಿಕೊಳ್ಳದಿರುವುದು ಬೇಸರದ ಸಂಗತಿಯಾಗಿದೆ.

ಹಿಂದಿನ ಲೇಖನತೂಕ ಕಡಿಮೆ ಮಾಡಿಕೊಳ್ಳಲು ಉಪ್ಪಿಟ್ಟು-ದೋಸೆ ತಿನ್ನಿ!
ಮುಂದಿನ ಲೇಖನ`ಕಬ್ಜ’ ಚಿತ್ರ ಟೀಸರ್ ರಿಲೀಸ್