ಮನೆ ಮನೆ ಮದ್ದು ಬೆಳ್ಳುಳ್ಳಿ ತಿನ್ನುವುದರಿಂದ ರಕ್ತನಾಳ ಬ್ಲಾಕ್ ಹಾಗೂ ಕೊಲೆಸ್ಟ್ರಾಲ್ ಅನ್ನು ಕೂಡ ಕ್ಲಿಯರ್ ಮಾಡುತ್ತೆ..!

ಬೆಳ್ಳುಳ್ಳಿ ತಿನ್ನುವುದರಿಂದ ರಕ್ತನಾಳ ಬ್ಲಾಕ್ ಹಾಗೂ ಕೊಲೆಸ್ಟ್ರಾಲ್ ಅನ್ನು ಕೂಡ ಕ್ಲಿಯರ್ ಮಾಡುತ್ತೆ..!

0

ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಜನರ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತಿದೆ. ಯಾಕೆ ಹೀಗೆ ಎಂದು ಮೇಲ್ನೋಟಕ್ಕೆ ನೋಡುವುದಾದರೆ, ಜನರು ಅನುಸರಿಸುತ್ತಿರುವ ಅನಾರೋಗ್ಯ ಆಹಾರ ಪದ್ಧತಿ ಹಾಗೂ ಜಡ ಜೀವನಶೈಲಿ ಪ್ರಮುಖ ಕಾರಣ ಎಂದು ತಿಳಿದು ಬರುತ್ತದೆ.

ಕೊಲೆಸ್ಟ್ರಾಲ್ ಎಂದರೆ ಒಂದು ರೀತಿಯ ಅಂಟಾದ ಮೇಣವಾಗಿದ್ದು, ದೇಹದಲ್ಲಿ ಹೊಸ ಅಂಗಾಂಶಗಳನ್ನು ಹಾಗೂ ಹಾರ್ಮೋನ್ ಗಳನ್ನು ವೃದ್ಧಿಸಲು ಇದರ ಉಪಯೋಗ ತುಂಬಾನೇ ಇದೆ. ಇದರಲ್ಲಿ ಕೂಡ ಎರಡು ವಿಧಗಳಿವೆ, ಒಂದು ಒಳ್ಳೆಯ ಕೊಲೆಸ್ಟ್ರಾಲ್(ಎಚ್ ಡಿಎಲ್) ಮತ್ತು ಇನ್ನೊಂದು ಕೆಟ್ಟ ಕೊಲೆಸ್ಟ್ರಾಲ್( ಎಲ್ ಡಿಎಲ್) ಇದೆ.ಒಂದು ವೇಳೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವು ಹೆಚ್ಚಾಗಿ ಬಿಟ್ಟರೆ, ಹೃದಯದ ಸಮಸ್ಯೆ ಕಂಡು ಬರುವುದರ ಜೊತೆಗೆ ಪಾರ್ಶ್ವವಾಯು ಸಮಸ್ಯೆಯ ಜೊತೆಗೆ ಇನ್ನಿತರ ಆರೋಗ್ಯ ಸಮಸ್ಯೆಗಳಿವೆ.

ಒಂದು ವೇಳೆ ಈಗಾಗಲೇ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರು, ಆದಷ್ಟು ಬೆಳ್ಳುಳ್ಳಿಯನ್ನು ಆಹಾರ ಪದ್ಧತಿ ಯಲ್ಲಿ ಬಳಸುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ಯಾಕೆಂದ್ರೆ ಬೆಳ್ಳುಳ್ಳಿ ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಪ್ರಮುಖವಾಗಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡಲು ನೆರವಿಗೆ ಬರುತ್ತದೆ.

ರಕ್ತ ಪರಿಚಲನೆ ಸುಧಾರಿಸುತ್ತದೆ – ಬೆಳ್ಳುಳ್ಳಿ ರಕ್ತನಾಳಗಳನ್ನು ವಿಸ್ತರಿಸುವ ಮೂಲಕ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಅಪಧಮನಿಗಳಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯವನ್ನು ಆರೋಗ್ಯವಾಗಿಡುತ್ತದೆ.

ಉರಿಯೂತವನ್ನು ಕಡಿಮೆ ಮಾಡುವುದು- ಬೆಳ್ಳುಳ್ಳಿಯು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಅಪಧಮನಿಗಳ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಯುತ್ತದೆ.

ಯಕೃತ್ತಿನ ಕಾರ್ಯವನ್ನು ಸುಧಾರಿಸುವುದು – ಬೆಳ್ಳುಳ್ಳಿ ಯಕೃತ್ತಿನ ಕಾರ್ಯವನ್ನು ಸುಧಾರಿಸುತ್ತದೆ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಆಂಟಿ ಆಕ್ಸಿಡೆಂಟ್ ಅಂಶಗಳು – ಬೆಳ್ಳುಳ್ಳಿಯಲ್ಲಿ ಆಲಿಸಿನ್ ಎಂಬ ಸಂಯುಕ್ತವಿದೆ, ಇದು ಪ್ರಬಲವಾದ ಉತ್ಕರ್ಷಣ ನಿರೋಧಕವಾಗಿದೆ (ಆಂಟಿ ಆಕ್ಸಿಡೆಂಟ್) ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಉತ್ತಮ ಕೊಲೆಸ್ಟ್ರಾಲ್ (HDL) ಮಟ್ಟವನ್ನು ಹೆಚ್ಚಿಸುತ್ತದೆ.