ಮನೆ ಆರೋಗ್ಯ ಹಸಿ ಈರುಳ್ಳಿ ಸೇವಿಸುವುದರಿಂದ ಹಲವು ಸಮಸ್ಯೆಗೆ ಪರಿಹಾರ

ಹಸಿ ಈರುಳ್ಳಿ ಸೇವಿಸುವುದರಿಂದ ಹಲವು ಸಮಸ್ಯೆಗೆ ಪರಿಹಾರ

0

ಸಾಮಾನ್ಯವಾಗಿ ಮನೆಯಲ್ಲಿ ಯಾವುದೇ ಪದಾರ್ಥ ಮಾಡುವಾಗಲೂ ಈರುಳ್ಳಿಯನ್ನು ಸ್ವಲ್ಪವಾದ್ರೂ ಬಳಕೆ ಮಾಡ್ತಾರೆ. ಆದ್ರೆ ಇದನ್ನು ಕೆಲವೊಮ್ಮೆ ಪದಾರ್ಥದಲ್ಲೂ ತಿನ್ನುತ್ತಾರೆ. ಇನ್ನೂ ಕೆಲವರಿಗೆ ಹಸಿ ಈರುಳ್ಳಿಯನ್ನೂ ತಿನ್ನೋ ಅಭ್ಯಾಸವಿರುತ್ತದೆ.

Join Our Whatsapp Group

ಹಸಿ ಈರುಳ್ಳಿಯನ್ನು ತಿನ್ನುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಎಂದು ಬಹಳ ಹಿಂದಿನಿಂದಲೂ ನಂಬಲಾಗಿದೆ. ಆದರೆ ಇನ್ನೂ ಕೆಲವರು ಇದು ಸುಳ್ಳ ಅಂತಲೂ ಹೇಳ್ತಾರೆ. ಹಾಗಿದ್ರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಗೊತ್ತಾಗ್ಬೇಕಾದ್ರೆ ಈ ಲೇಖನವನ್ನು ಓದಿ.

ವಾಸ್ತವವಾಗಿ, ಹಸಿ ಈರುಳ್ಳಿ ತಿನ್ನುವುದು ಮತ್ತು ದೇಹದ ಉಷ್ಣತೆಯನ್ನು ಹೆಚ್ಚಿಸುವ ನಡುವೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ತಜ್ಞರು ಹೇಳುತ್ತಾರೆ.

ಹಸಿ ಈರುಳ್ಳಿಯನ್ನು ತಿನ್ನುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಎಂದು ಬಹಳ ಹಿಂದಿನಿಂದಲೂ ನಂಬಲಾಗಿದೆ. ಗ್ರಾಮೀಣ ಭಾಗದ ಜನರು ಬಟ್ಟಲಿನಲ್ಲಿ ಬೇಯಿಸಿದ ಗಂಜಿ ,ಅನ್ನ, ಮೊಸರನ್ನದಲ್ಲಿ ಸಹ ಈರುಳ್ಳಿ ತಿನ್ನುತ್ತಾರೆ.

ಈರುಳ್ಳಿ ವಿವಿಧ ರೀತಿಯ ತೈಲಗಳನ್ನು ಹೊಂದಿರುತ್ತದೆ. ಈರುಳ್ಳಿ ಲವಣಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿರುತ್ತದೆ. ಪರಿಣಾಮವಾಗಿ, ಈರುಳ್ಳಿ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಈರುಳ್ಳಿ ರಸವು ದೇಹದಲ್ಲಿರುವ ರೋಗಾಣು ಅಂಶಗಳನ್ನು ಕೊಲ್ಲುತ್ತದೆ. ಜೊತೆಗೆ, ರಕ್ತ ಪರಿಚಲನೆ ಸಹ ಹೆಚ್ಚಾಗುತ್ತದೆ. ಇನ್ನು ಮೂಳೆಗಳ ಆರೋಗ್ಯ ಮತ್ತು ಮಧುಮೇಹ ನಿಯಂತ್ರಣದಲ್ಲಿ ಈರುಳ್ಳಿ ಬಹಳ ಮುಖ್ಯ ಪಾತ್ರವಹಿಸುತ್ತದೆ.

 (ಸೂಚನೆ: ಮೇಲಿನ ಲೇಖನದ ವರದಿಯು ಸಾರ್ವಜನಿಕ ನಂಬಿಕೆಗಳ ಪ್ರಕಾರವಾಗಿದೆ. ಇವುಗಳನ್ನು ಸವಾಲ್ ಟಿವಿ ಖಚಿತಪಡಿಸುವುದಿಲ್ಲ)