ಮನೆ ರಾಷ್ಟ್ರೀಯ ಅಮೃತಸರದಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನಿ ಡ್ರೋನ್’ನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಅಮೃತಸರದಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನಿ ಡ್ರೋನ್’ನ್ನು ಹೊಡೆದುರುಳಿಸಿದ ಭದ್ರತಾ ಪಡೆ

0

ಪಂಜಾಬ್: ಅಮೃತಸರದಲ್ಲಿ ಡ್ರಗ್ಸ್​ ಸಾಗಿಸುತ್ತಿದ್ದ ಪಾಕಿಸ್ತಾನಿ ಡ್ರೋನ್​ ಅನ್ನು ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ.

Join Our Whatsapp Group

ಅಧಿಕಾರಿಗಳ ಪ್ರಕಾರ, ಹೆರಾಯಿನ್ ಎಂದು ಶಂಕಿಸಲಾದ ಎರಡು ಪ್ಯಾಕೆಟ್‌ ಗಳನ್ನು ತಪಾಸಣೆಯ ಸಮಯದಲ್ಲಿ ವಶಪಡಿಸಿಕೊಳ್ಳಲಾಗಿದೆ.

ಬಿಒಪಿ ರಾಜತಾಲ್ ಪ್ರದೇಶದಲ್ಲಿ ಬಿಎಸ್‌’ಎಫ್‌’ನ 144 ಕಾರ್ಪ್ಸ್‌’ನ ಪಡೆಗಳು ಕಾರ್ಯಾಚರಣೆ ನಡೆಸಿ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ. ನಿಷೇಧಿತ ಪ್ರದೇಶದಲ್ಲಿ ಡ್ರೋನ್ ಹಾರಿ ಬರುತ್ತಿತ್ತು, ಇದರಲ್ಲಿ ಬಿಳಿಯ ಪ್ಯಾಕೆಟ್’ಗಳು ಇರುವುದನ್ನು ಗಮನಿಸಿ ದಾಳಿ ಮಾಡಲಾಗಿದೆ. ಕಳ್ಳಸಾಗಣೆ ತಡೆಯಲು ಗಡಿಯಲ್ಲಿ ಬಿಗಿ ಬಂದೋಬಸ್ತ್​ ಮಾಡಲಾಗಿದೆ.

ಹಿಂದಿನ ಲೇಖನಹಸಿ ಈರುಳ್ಳಿ ಸೇವಿಸುವುದರಿಂದ ಹಲವು ಸಮಸ್ಯೆಗೆ ಪರಿಹಾರ
ಮುಂದಿನ ಲೇಖನವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ನಟನೆಯ ‘ಯದಾ ಯದಾ ಹೀ’ ಚಿತ್ರ ಜೂನ್ 2ರಂದು ರಿಲೀಸ್