ಮನೆ ರಾಷ್ಟ್ರೀಯ ಇಡಿಯಿಂದ 50 ಗಂಟೆಗಳ ಕಾಲ ರಾಹುಲ್‌ ಗಾಂಧಿ ವಿಚಾರಣೆ

ಇಡಿಯಿಂದ 50 ಗಂಟೆಗಳ ಕಾಲ ರಾಹುಲ್‌ ಗಾಂಧಿ ವಿಚಾರಣೆ

0

ನವದೆಹಲಿ (New Delhi): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ 5ನೇ ದಿನವೂ ಸತತ 10 ಗಂಟೆಗೂ ಹೆಚ್ಚು ಕಾಲ ಜಾರಿ ನಿರ್ದೇಶನಾಲಯದ ವಿಚಾರಣೆಗೊಳಪಟ್ಟಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಕೇಸ್ ನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿ ಅವರ ವಿಚಾರಣೆ ನಡೆಯುತ್ತಿದೆ. ರಾಹುಲ್ ಗಾಂಧಿ ಸತತ 5 ದಿನಗಳಲ್ಲಿ 50 ಗಂಟೆಗಳ ಕಾಲ ವಿಚಾರಣೆ ಎದುರಿಸಿದಂತಾಗಿದೆ. ಈ ವೇಳೆ ತನಿಖಾಧಿಕಾರಿಗಳು ಹಲವು ಸೆಷನ್‌ಗಳಲ್ಲಿ ಪ್ರಶ್ನಿಸಿದ್ದಾರೆ. 

ನಿನ್ನೆ ಬೆಳಿಗ್ಗೆ ಆರಂಭವಾದ ವಿಚಾರಣೆ ರಾತ್ರಿ 8 ಗಂಟೆವರೆಗೂ ನಡೆದಿತ್ತು. ಈ ವೇಳೆ ಅರ್ಧ ಗಂಟೆ ವಿರಾಮ ತೆಗೆದುಕೊಂಡು ಮತ್ತೆ 11.30ಕ್ಕೆ ಆರಂಭವಾದ ವಿಚಾರಣೆಗೆ ಮತ್ತೆ ಹಾಜರಾದರು. ಈ ವೇಳೆ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ರಾಹುಲ್ ಗಾಂಧಿ ತಮ್ಮ ಹೇಳಿಕೆಯನ್ನು ದಾಖಲಿಸಿದರು.

ಮೂಲಗಳ ಪ್ರಕಾರ ಪ್ರಕರಣದ ವಿವಿಧ ಅಂಶಗಳ ಕುರಿತು ಅವರ ಹೇಳಿಕೆಯ ದಾಖಲಾತಿ ಅಂತಿಮ ಹಂತವನ್ನು ತಲುಪುತ್ತಿದೆ ಮತ್ತು ಅಂತಿಮವಾಗಿ ಕಾಂಗ್ರೆಸ್ ನಾಯಕರು ಪ್ರತಿ A4 ಗಾತ್ರದ ಕಾಗದದ ಮೇಲೆ ತಮ್ಮ ಸಹಿಯೊಂದಿಗೆ ತಮ್ಮ ಹೇಳಿಕೆಯನ್ನು ಸಲ್ಲಿಸಿದ ನಂತರ, ಜೂನ್ 13 ರಂದು ಪ್ರಾರಂಭವಾಗುವ ಅಧಿವೇಶನಗಳು ಕೊನೆಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.