‘ಏಕಪಾದ’ವೆಂದರೆ ಒಂದು ಅಡಿ ಕೌಂಡಿನ್ಯ ಎಂಬುದು ಒಬ್ಬ ಮಹರ್ಷಿಯ ಹೆಸರು. ಈತ ಈ ಗೋತ್ರದ ಮೂಲಪುರುಷ.
ಅಭ್ಯಾಸ ಕ್ರಮ :
1. ಮೊದಲು, ‘ಸಾಲಂಬಶಿರ್ಷಾಸನ 2 ’ವನ್ನು ಮಾಡಿ ಮುಗಿಸಬೇಕು
2. ಬಳಿಕ, ಉಸಿರನ್ನು ಹೊರಕ್ಕೆ ಬಿಟ್ಟು ಎರಡೂ ಕಾಲುಗಳನ್ನು ನೇರಮಾಡಿ ಜೊತೆಯಾಗಿಯೇ ಕೆಳಗಿಳಿಸಿ,ಅವನ್ನು ನೆಲಮಟ್ಟಕ್ಕೆ ಸಮಾಂತರವಾಗಿರಬೇಕು ಭಂಗಿಯಲ್ಲಿ ಸ್ವಲ್ಪ ಕಾಲ ನೆಲೆಸಿ, ಕೆಲವು ಸಲ ಉಸಿರಾಟ ನಡೆಸಬೇಕು.
3. ಮತ್ತೆ ಉಸಿರನ್ನು ಹೊರಕ್ಕೆ ಬಿಟ್ಟು ಕಾಲುಗಳನ್ನು ಬಗ್ಗಿಸಿ ಎಡಗಾಲನ್ನು ಬಲಪಕ್ಕಕ್ಕೆ ತಿರುಗಿಸಿ,ಬಳಿಕ ಎಡಗಾಲನ್ನು ಬಲಗೈ ಮೇಲೆ ತುಳಿನ ಹಿಂಬದಿಯ ಮೇಲ್ದೋಳಿನ ಹಿಂಬದಿಯ ಮೇಲೆ ಹಾಯಿಸಿ, ಮಂಡಿಯ ಮೇಲ್ಭಾಗದ ಎಡತೊಡೆಯ ಹೊರಬದಿಯನ್ನು ಆದಷ್ಟೂ ಬಲದ ಕಂಕುಳ ಬಳಿಯಲ್ಲಿ ಒರಗಿಸಿಡಬೇಕು. ಈಗ ಸಮತೋಲನಸ್ಥಿತಿಗೆ ತಂದು ಕೆಲವು ಸಲ ಉಸಿರಾಟ ನಡೆಸಬೇಕು
4. ಆಮೇಲೆ ಎಡಗಾಲನ್ನು ಪಕ್ಕಕ್ಕೆ ನೇರವಾಗಿ ಚಾಚಿತ್ತು ಬಲಗಾಲನ್ನು ನೆಟ್ಟಗೆ ಹಿಂದಕ್ಕೆ ಚಾಚಿಸಬೇಕು ಈಗಲೂ ಕೂಡ ಒಂದೆರಡು ಬಾರಿ ಉಸಿರಾಟ ನಡೆಸಬೇಕು..
5. ಇದಾದ ಬಳಿಕ ಉಸಿರನ್ನು ಹೊರಕ್ಕೆ ಬಿಟ್ಟು ತಲೆಯನ್ನು ನೆಲದಿಂದ ಮೇಲೆತ್ತಿ ಬಳಿಕ ಕಾಲುಗಳೆರಡನ್ನೂ ನೆಟ್ಟಗಿರಿಸಿ, ಮಂಡಿಗಳನ್ನು ಬಿಗಿಗೊಳಿಸಬೇಕು ಇದು ಆಸನಭಂಗಿಯ ಕೊನೆಯ ಹಂತ ಈ ಭಂಗಿಯಲ್ಲಿ ಸಾಧ್ಯವಾದಷ್ಟು ಕಾಲ ಅಂದರೆ ಸುಮಾರು 30 ಸೆಕೆಂಡುಗಳವರೆಗೂ ನೆಲೆಸಿ ಸಾಮಾನ್ಯವಾಗಿ ಉಸಿರಾಟವನ್ನು ನಡೆಸಬೇಕು.
6. ಅನಂತರ ಎರಡು ಮಂಡಿಗಳನ್ನು ಬಗ್ಗಿಸಿ ಉಸಿರನ್ನು ಹೊರದೂಡಿ, ತಲೆಯನ್ನು ನೆಲದಮೇಲೆ ಒತ್ತಿಟ್ಟು ಮತ್ತೆ ಶ್ರೀರ್ಷಾಸನಕ್ಕೆ ಬರಬೇಕು.ಈ ಭಂಗಿಯಲ್ಲಯೂ ಸಾಮಾನ್ಯ ಉಸಿರಾಟದಿಂದ ನೆಲೆಸಬೇಕು.
7. ತರುವಾಯ,ಈ ಹಾಸನದ ಭಂಗಿಯನ್ನು ಮೇಲೆ ವಿವರಿಸಿದ ಕ್ರಮದಲ್ಲಿ ಇನ್ನೊಂದು ಕಡೆಯಲ್ಲಿಯೂ ಅಭ್ಯಸಿಸಿ, ಭಂಗಿಯೂ ಅಷ್ಟೇ ಕಾಲ ನೆಲಸಬೇಕು.ಮೇಲಿನ ಅಭ್ಯಾಸಕ್ರಮದಲ್ಲಿನ ‘ಎಡ’ ‘ಬಲ’ ಪದಗಳ್ನನುಪಯೋಗಿಸಿ ಅದರಂತೆ ನಡೆಸಬೇಕು.ಇಲ್ಲಿ ಬಲತೊಡೆಯನ್ನು ಎಡಗೈನ ಮೇಲ್ದೋಳಿನ ಮೇಲೋರಗಿಸಿ,ಅಭ್ಯಾಸ ಕ್ರಮ : ಹಿಂಬಾಗಕ್ಕೆ ನೇರವಾಗಿ ಚಾಚಿಡಬೇಕು. ಆ ಬಳಿಕ 6ನೇ ಪರಿಚ್ಛೇದದಲ್ಲಿ ವಿವರಿಸಿ ದಂತೆ ಮತ್ತೆ ಶೀರ್ಷಾಸನದ ಭಂಗಿಗೇರಬೇಕು.
8. ಈ ಭಂಗಿಯ ಕೊನೆಯ ಹಂತದಲ್ಲಿ ಕಾಲುಗಳನ್ನು ನೆಲೆ ಕ್ಕಿಳಿಸಿ ವಿಶ್ರಮಿಸಿಕೊಳ್ಳಬೇಕು ಇಲ್ಲವೇ ‘ಊರ್ಧ್ವಧನುರಾಸನ’0ವನ್ನು ಅಬ್ಬೆಸಿಸಿ ತಾಂಡಾಸನದಲ್ಲಿ ನಿಲ್ಲಬೇಕು.
ಪರಿಣಾಮಗಳು :
& ಈ ಆಸನದ ಭಂಗಿಯಲ್ಲಿ ಕಿಬ್ಬೊಟ್ಟೆಯ ಮೇಲಿಟ್ಟ ಕಾಲುಗಳ ಒತ್ತಡವು ಅದರೊಳಗಿನ ಅಂಗಗಳಿಗೆ ಅಂಗಿಮರ್ದನವನ್ನೊದಗಿಸುವುದಲ್ಲದೆ, ಈ ಆಸನದಲ್ಲಿಯ ಬೆನ್ನೆಲುಬಿನ ತಿರುಚು ಬೆನ್ನೆಲುಬಿಗೆ ತಾರುಣ್ಯವನ್ನು ಕಲ್ಪಿಸುವುದು ಮತ್ತು ಅದಕ್ಕೆ ಹೆಚ್ಚು ಶಕ್ತಿಯನ್ನು ಕೊಡುವುದು ಅಲ್ಲದೆ ಇದರಿಂದ ತೋಳುಗಳೂ ಮತ್ತು ಕುತ್ತಿಗೆಯೂ, ಹೆಚ್ಚು ಶಕ್ತಿಯನ್ನು ಪಡೆಯುವುವು.