ಮನೆ ರಾಜ್ಯ ಏಕನಾಥ್​ ಶಿಂಧೆ ಭ್ರಮೆಯಲ್ಲಿದ್ದಾರೆ: ಏಕನಾಥ್​ ಶಿಂಧೆ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಏಕನಾಥ್​ ಶಿಂಧೆ ಭ್ರಮೆಯಲ್ಲಿದ್ದಾರೆ: ಏಕನಾಥ್​ ಶಿಂಧೆ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

0

ಬೆಂಗಳೂರು: ಲೋಕಸಭೆ ಚುನಾವಣೆ ಬಳಿಕ ಕರ್ನಾಟಕ ಸರ್ಕಾರ ಪತನ ಬಗ್ಗೆ ಏಕನಾಥ್​ ಶಿಂಧೆ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

Join Our Whatsapp Group

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಏಕನಾಥ್​ ಶಿಂಧೆ ಭ್ರಮೆಯಲ್ಲಿದ್ದಾರೆ. ಯಾವ ಕಾರಣಕ್ಕೂ ಅಪರೇಷನ್ ಕಮಲ ಮಾಡಲು ಆಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಆದಂತೆ ಕರ್ನಾಟಕದಲ್ಲಿ ಆಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿಯೂ ‘ಇಂಡಿಯಾ’ ಮೈತ್ರಿಕೂಟ ಗೆಲ್ಲುತ್ತದೆ ಎಂದು ಹೇಳಿದರು.

ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಲೋಕಸಭೆ ಚುನಾವಣೆ ಬಳಿಕ ಶಿಂಧೆ ಸರ್ಕಾರ ಇರುವುದೇ ಅನುಮಾನವಿದೆ. ಉದ್ಧವ್ ಠಾಕ್ರೆ ಬಗ್ಗೆ ಪ್ರಧಾನಮಂತ್ರಿ ಮೋದಿ ಯಾಕೆ ಮಾತನಾಡಿದರು? ಎಲ್ಲರೂ ಕೂಡ ಅವರವರ ಪಕ್ಷಕ್ಕೆ ಹೋಗುತ್ತಾರೆ. ಮಹಾ ಸರ್ಕಾರದ ಒರಿಜಿನಲ್‌ ಶಿವಸೇನಾ ನಾಯಕರು ಮರಳಿ ಬರುತ್ತಾರೆ ಎಂದು ಹೇಳಿದರು.

ಶಿಂಧೆ ಹೇಳಿದ್ದೇನು?

ಚುನಾವಣಾ ಪ್ರಚಾರದ ನಿಮಿತ್ತ ಬೆಳಗಾವಿಗೆ ಹೋಗಿದ್ದಾಗ ಅಲ್ಲಿನ ಬಿಜೆಪಿ ಪದಾಧಿಕಾರಿಗಳು ಮಹಾರಾಷ್ಟ್ರದ ಮುಖ್ಯಮಂತ್ರಿಯಾದ ನನ್ನನ್ನು ಭೇಟಿಯಾಗಲು ಉತ್ಸುಕತೆಯಿಂದ ಬಂದಿದ್ದರು. ಈ ‘ನಾಥ’ ಯಾರೆಂದು ನೋಡಲು ಬಯಸಿದ್ದರು. ಆಗ, ಲೋಕಸಭೆ ಚುನಾವಣೆ ನಂತರ ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ‘ನಾಥ್’ ಮಾದರಿ ಆಪರೇಷನ್​ಗೆ ಮನವಿ ಮಾಡಿದ್ದರು ಎಂದು ಶಿಂಧೆ ಹೇಳಿದ್ದರು. ಅಲ್ಲದೆ, ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಕರ್ನಾಟಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದಿದ್ದರು.

ಹಿಂದಿನ ಲೇಖನCBSE ಫಲಿತಾಂಶ ಪ್ರಕಟ: ಬಾಲಕಿಯರದ್ದೇ ಮೇಲುಗೈ
ಮುಂದಿನ ಲೇಖನಪಾಕಿಸ್ತಾನ ಬಳೆ ತೊಟ್ಟಿಲ್ಲ ಅಂದರೆ ಭಾರತ ಅವರಿಗೆ ಬಳೆ ತೊಡಿಸುತ್ತದೆ: ಪ್ರಧಾನಿ ಮೋದಿ