ಮನೆ ಸುದ್ದಿ ಜಾಲ ಬಿಎಂಟಿಸಿ ಬಸ್‌ಗೆ ವೃದ್ಧ ಬಲಿ

ಬಿಎಂಟಿಸಿ ಬಸ್‌ಗೆ ವೃದ್ಧ ಬಲಿ

0

ಬೆಂಗಳೂರು : ಬಿಎಂಟಿಸಿ ಬಸ್‌ಗೆ 65 ವರ್ಷದ ವೃದ್ಧ ಬಲಿಯಾಗಿರುವ ಘಟನೆ ಮಡಿವಾಳ ಬಸ್ ನಿಲ್ದಾಣದ ಬಳಿ ನಡೆದಿದೆ. ವೆಂಕಟರಾಮಪ್ಪ (65) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ವೆಂಕಟರಾಮಪ್ಪ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಮಡಿವಾಳ ಮಾರ್ಕೆಟ್ ರೋಡ್‌ಗೆ ತರಕಾರಿ ತರಲು ಹೋದಾಗ ಅಪಘಾತ ನಡೆದಿದೆ. ವೆಂಕಟರಾಮಪ್ಪ ಮೃತದೇಹವನ್ನು ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿರಿಸಲಾಗಿದೆ.

ಮಡಿವಾಳ ಬಸ್ ನಿಲ್ದಾಣದಲ್ಲಿ ತರಕಾರಿ ತೆಗೆದುಕೊಂಡು ಬಂದಿದ್ದ ವೆಂಕಟರಾಮಪ್ಪ ಬಸ್ ಹತ್ತಲು ನಿಂತಿದ್ದರು. ಈ ವೇಳೆ ಎಸ್‌ಎಂಬಿಟಿ ರೈಲ್ವೆ ನಿಲ್ದಾಣದಿಂದ ಸಿಲ್ಕ್ ಬೋರ್ಡ್‌ಗೆ ಕಾರ್ಯಾಚರಣೆಗೊಳ್ಳುತ್ತಿದ್ದ, ಬಿಎಂಟಿಸಿ ಬಸ್ ಫುಟ್‌ಪಾತ್‌ನಲ್ಲಿ ನಿಂತಿದ್ದವರಿಗೆ ಡಿಕ್ಕಿ ಹೊಡೆದಿದೆ. ಮೊದಲು ಟಾಟಾ ಎಸಿ ಗಾಡಿಗೆ ಡಿಕ್ಕಿಯಾಗಿ ಬಳಿಕ ವೆಂಕಟರಾಮಪ್ಪಗೆ ಬಸ್ ಗುದ್ದಿದೆ ಎಂದು ಹೇಳಲಾಗಿದೆ.