ಮನೆ ರಾಜ್ಯ ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು: ಜಮೀನು ಮಾಲೀಕನ ವಿರುದ್ಧ ಪ್ರಕರಣ ದಾಖಲು

ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು: ಜಮೀನು ಮಾಲೀಕನ ವಿರುದ್ಧ ಪ್ರಕರಣ ದಾಖಲು

0

ಚಾಮರಾಜನಗರ(Chamarajanagar): ವಿದ್ಯುತ್ ತಂತಿ ತಗುಲಿ ಸುಮಾರು 25 ರಿಂದ 30 ವರ್ಷದ ಹೆಣ್ಣು ಕಾಡಾನೆ  ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಹೆಡಿಯಾಲ ಉಪ ವಿಭಾಗದ ಚಿಕ್ಕಬರಗಿ ಶಾಖೆಯ ಹೆಬ್ಬಳ್ಳ ಗಸ್ತಿನ ದೊಡ್ಡಬರಗಿ ಗ್ರಾಮದ ರೈತನ ಜಮೀನೊಂದರಲ್ಲಿ ನಡೆದಿದೆ.

ದೊಡ್ಡಬರಗಿ ಗ್ರಾಮದ ಗೋಪಾಲ ಎಂಬುವವರ ಜಮೀನಿನಲ್ಲಿ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶದಿಂದ ಆನೆ ಸಾವನ್ನಪ್ಪಿದೆ. ಮಾಹಿತಿ ತಿಳಿದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ವಿಷಯವನ್ನು ಇಲಾಖಾ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಸ್ಥಳಕ್ಕೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ ಕುಮಾರ್, ಎಸಿಎಫ್ ಕೆ.ಪರಮೇಶ್ ಭೇಟಿ ಪರಿಶೀಲನೆ ನಡೆಸಿದ ನಂತರ ಪಶು ವೈದ್ಯಾಧಿಕಾರಿ ವಾಸಿಂ ಮಿರ್ಜಾ ಮೃತ ಹೆಣ್ಣು ಕಾಡಾನೆಯ ಶವಪರೀಕ್ಷೆಯನ್ನು ನಡೆಸಿದರು.

ತದ ನಂತರ ದೇಹದ ತುಂಡುಗಳನ್ನು ಮೈಸೂರಿನ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಯಾಂಪಲ್ ಕಳುಹಿಸಲಾಯಿತು. ನಂತರ ಗುಂಡಿ ತೆಗೆದು ಆನೆ ಮೃತ ದೇಹವನ್ನು ಹೂಳಲಾಯಿತು. ಈ ಸಂಬಂಧ ಅರಣ್ಯ ಕಾಯೆಯಡಿ ಜಮೀನು ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನತಲೆಯ ವಿಗ್ ಕಳಚಿ, ದಿನಕ್ಕೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸ್ಯಾಂಟ್ರೋ ರವಿ: ಎಡಿಜಿಪಿ ಅಲೋಕ್ ಕುಮಾರ್
ಮುಂದಿನ ಲೇಖನಯೋಗಥಾನ್-2022 ಅನ್ನು ಯಶಸ್ವಿಯಾಗಿ ಆಯೋಜಿಸಿ: ಡಾ. ಕೆ ವಿ ರಾಜೇಂದ್ರ