ಮನೆ ರಾಜ್ಯ ಆಂಗ್ಲಭಾಷೆ ಪ್ರಶ್ನೆ ಪತ್ರಿಕೆ ಸೋರಿಕೆ: ಪರೀಕ್ಷೆ ಮುಂದೂಡಿಕೆ

ಆಂಗ್ಲಭಾಷೆ ಪ್ರಶ್ನೆ ಪತ್ರಿಕೆ ಸೋರಿಕೆ: ಪರೀಕ್ಷೆ ಮುಂದೂಡಿಕೆ

0

ತುಮಕೂರು: ಪ್ರಥಮ ಪಿಯುಸಿ ಆಂಗ್ಲಭಾಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು,  ಜಿಲ್ಲೆಯಲ್ಲಿ ಇಂದು ನಡೆಯಬೇಕಿದ್ದ ಆಂಗ್ಲ ಭಾಷೆ ಪರೀಕ್ಷೆಯನ್ನು ಮಾರ್ಚ್ 6ಕ್ಕೆ ಮುಂದೂಡಲಾಗಿದೆ.

ಜಿಲ್ಲೆಯಲ್ಲಿ ನಿನ್ನೆಯಿಂದ ಪ್ರಥಮ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಿವೆ.  ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ವಾಟ್ಸಾಪ್’​ಗಳಲ್ಲಿ ಹರಿದಾಡುತಿತ್ತು ಎಂಬ ವದಂತಿ ಹಿನ್ನೆಲೆ, ತನಿಖೆಗೆ ಹಿರಿಯ ಪ್ರಾಂಶುಪಾಲರ ನೇತೃತ್ವದಲ್ಲಿ ತ್ರಿ ಸದಸ್ಯರ ಕಮಿಟಿ ರಚನೆ ಮಾಡಲಾಗಿತ್ತು.

ಈ ಸಂಬಂಧ ಸೈಬರ್ ಠಾಣೆಗೆ ಪದವಿಪೂರ್ವ ಶಿಕ್ಷಣ ಇಲಾಖೆ ದೂರು ನೀಡಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಂಗಾಧರ್ ತಿಳಿಸಿದ್ದಾರೆ.
ಪರೀಕ್ಷೆಯನ್ನು ಮಾರ್ಚ್​ 6ಕ್ಕೆ ಮುಂದೂಡಿ ಆದೇಶವನ್ನು ಹೊರಡಿಸಲಾಗಿದೆ.